ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಈ ದೇವಾಲಯಗಳಲ್ಲಿ ಜೂ.30ರ ತನಕ ದರ್ಶನವಿಲ್ಲ

|
Google Oneindia Kannada News

ಬೆಂಗಳೂರು, ಜೂನ್ 07 : ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲಾಗಿತ್ತು. ಕೇಂದ್ರ ಗೃಹ ಇಲಾಖೆ ಜೂನ್ 8ರಿಂದ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಕರ್ನಾಟಕದಲ್ಲಿಯೂ ಸೋವಾರದಿಂದ ಪ್ರಾರ್ಥನಾ ಮಂದಿರಗಳು ಬಾಗಿಲು ತೆರೆಯಲಿವೆ.

ಧರ್ಮಸ್ಥಳ, ಕೊಲ್ಲೂರು, ಮೈಸೂರು, ನಂಜನಗೂಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ದೇವಾಲಯಗಳಲ್ಲಿ ಸೋಮವಾರದಿಂದ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಆದರೆ, ಕೆಲವು ದೇವಾಲಯ ಜೂನ್ 30ರ ತನಕ ಬಾಗಿಲು ತೆರೆಯುವುದಿಲ್ಲ.

ಕೊರೊನಾ ಭೀತಿ; ತಿರುಪತಿ ದೇವಾಲಯ ಬಂದ್ ಕೊರೊನಾ ಭೀತಿ; ತಿರುಪತಿ ದೇವಾಲಯ ಬಂದ್

ಪ್ರಾರ್ಥನಾ ಮಂದಿರಗಳಿಗೆ ಆಗಮಿಸುವ ಜನರಿಗಾಗಿ ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ದೇವಾಲಯದಲ್ಲಿಯೂ ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದೆ. ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ದೇವಾಲಯಕ್ಕೆ ಆಗಮಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.

ಜೂನ್ 8 ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭಕ್ಕೆ ಮಾರ್ಗಸೂಚಿಜೂನ್ 8 ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭಕ್ಕೆ ಮಾರ್ಗಸೂಚಿ

ಕೇಂದ್ರ ಸರ್ಕಾರ ದೇವಾಲಯ ಸೇರಿದಂತೆ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ, ಧಾರ್ಮಿಕ ಕಾರ್ಯಕ್ರ, ಭಜನೆ ಮುಂತಾದ ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್! ಭಾರತದಲ್ಲಿ ದೇವಸ್ಥಾನ, ಮಂದಿರ, ಚರ್ಚ್ ಪ್ರವೇಶಕ್ಕೆ ಹೊಸ ರೂಲ್ಸ್!

ಉಡುಪಿಯಲ್ಲಿ ಕೃಷ್ಣನ ದರ್ಶನವಿಲ್ಲ

ಉಡುಪಿಯಲ್ಲಿ ಕೃಷ್ಣನ ದರ್ಶನವಿಲ್ಲ

ಜೂನ್ 8ರಿಂದ ಉಡುಪಿಯಲ್ಲಿ ಶ್ರೀಕೃಷ್ಣ ದರ್ಶನ ಸಾಧ್ಯವಿಲ್ಲ. "ಕೃಷ್ಣಮಠದಲ್ಲಿ 20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿಕೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ" ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸವದತ್ತಿ ಎಲ್ಲಮ್ಮನ ದರ್ಶನವಿಲ್ಲ

ಸವದತ್ತಿ ಎಲ್ಲಮ್ಮನ ದರ್ಶನವಿಲ್ಲ

ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮ, ಜೋಗಳಭಾವಿ ಸತ್ತೆಮ್ಮ, ಚಿಂಚಲಿ ಮಾಯಕ್ಕಾ ದೇವಾಲಯಗಳಿಗೆ ಜೂನ್ 30ರ ತನಕ ಭಕ್ತರ ಭೇಟಿಯನ್ನು ನಿಷೇಧಿಸಲಾಗಿದೆ. ಕೊರೊನಾ ವೈರಸ್ ಸೋಂಕಿತರು ಹೆಚ್ಚಿರುವ ಪಕ್ಕದ ಮಹಾರಾಷ್ಟ್ರದಿಂದ ಭಕ್ತರು ಬರುವ ಸಾಧ್ಯತೆ ಇರುವುದರಿಂದ ದರ್ಶನಕ್ಕೆ ಅವಕಾಶವನ್ನು ನೀಡಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಹುಲಿಗಿಯ ಹುಲಿಗೆಮ್ಮ ದೇವಾಲಯ

ಹುಲಿಗಿಯ ಹುಲಿಗೆಮ್ಮ ದೇವಾಲಯ

ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಜೂನ್ 30 ರವರೆಗೆ ಭಕ್ತರ ಭೇಟಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ. ಈ ದೇವಾಲಯಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ, ಭಕ್ತರಿಗೆ ದರ್ಶನ ನಿರಾಕರಿಸಲಾಗಿದೆ.

ಯಾವ-ಯಾವ ದೇವಾಲಯ ಓಪನ್

ಯಾವ-ಯಾವ ದೇವಾಲಯ ಓಪನ್

ಜೂನ್ 8ರ ಸೋಮವಾರದಿಂದ ಧರ್ಮಸ್ಥಳ, ಕೊಲ್ಲೂರು, ಕಟೀಲು, ಕುದ್ರೋಳಿ ಸೇರಿದಂತೆ ರಾಜ್ಯದ ವಿವಿಧ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.

English summary
Temples in Karnataka was shut down after Coronavirus pandemic lock down announcement. Various temples will open on June 8, 2020. Here are the list of temples will not open till June 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X