ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧಕ್ಷರ ಪಟ್ಟಿ ದೇವರಾಜ್ ಅರಸ್ ಇಂದ ಡಿಕೆಶಿವರೆಗೆ

|
Google Oneindia Kannada News

ಬೆಂಗಳೂರು, ಮಾರ್ಚ್ 11: ಕೆಪಿಸಿಸಿ ಅಧ್ಯಕ್ಷ ಸ್ಥಾನ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿ ಒಂದೆರಡು ತಿಂಗಳ ಬಳಿಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಎಐಸಿಸಿ ತೊಡಗಿತ್ತು.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿರುವುದರಿಂದ, ಅವರ ಸ್ಥಾನಕ್ಕೆ, ಪಕ್ಷವನ್ನು ಮುನ್ನಡೆಸುವ, ಸಮರ್ಥ ನಾಯಕರನ್ನು ತುರ್ತಾಗಿ ನೇಮಿಸುವ ಅಗತ್ಯವಿತ್ತು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಭಾರಿ ಲಾಬಿ ನಡೆದಿದ್ದರಿಂದ ನೇಮಕಾತಿ ವಿಳಂಬವಾಗಿತ್ತು.

ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ

ದಿನೇಶ್ ಗುಂಡೂರಾವ್ ನೀಡಿದ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಅಂಗೀಕರಿಸಿದ್ದು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಿದ್ದರಾಮಯ್ಯಗೆ ಎರಡು ದೊಡ್ಡ ಜವಾಬ್ದಾರಿ ಕೊಟ್ಟ ಎಐಸಿಸಿಸಿದ್ದರಾಮಯ್ಯಗೆ ಎರಡು ದೊಡ್ಡ ಜವಾಬ್ದಾರಿ ಕೊಟ್ಟ ಎಐಸಿಸಿ

ಮೂವರು ಕಾರ್ಯಾಧ್ಯಕ್ಷರನ್ನಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ರನ್ನು ನೇಮಿಸಲಾಗಿದೆ. ವಿಧಾನಸಭೆ ಮುಖ್ಯ ಸಚೇತಕರಾಗಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಅಜಯ್ ಸಿಂಗ್, ವಿಧಾನಪರಿಷತ್ ವಿಪ್ ಸ್ಥಾನಕ್ಕೆ ಎಂಎಲ್ಸಿ ಎಂ ನಾರಾಯಣಸ್ವಾಮಿರನ್ನು ನೇಮಿಸಲಾಗಿದೆ ಎಂದು ಕೆ.ಸಿ ವೇಣುಗೋಪಾಲ್ ಸಹಿ ಇರುವ ಪ್ರಕಟಣೆ ಹೊರಡಿಸಲಾಗಿದೆ.

List of KPCC president in karnataka

ಕ್ರಮ

ಸಂಖ್ಯೆ

ಅಧ್ಯಕ್ಷರ ಹೆಸರು ಅವಧಿ ಎಷ್ಟು ವರ್ಷ
1 ಡಿ. ದೇವರಾಜ ಅರಸ್‌ 1970-1972 2
2 ಕೆ.ಎಚ್‌. ರಂಗನಾಥ್ 1972-74 2
3 ಕೆ.ಎಚ್‌. ಪಾಟೀಲ್‌ 1974-79 5
4 ಎಸ್‌. ಬಂಗಾರಪ್ಪ 1979-1980 2
5 ಕೆ.ಎಚ್‌. ರಾಥೋಡ್‌ 1980-1983 3
6 ಕೆ.ಎಚ್. ಪಾಟೀಲ್ 1983-1985 3
7 ಕೆ.ಎಚ್‌. ರಂಗನಾಥ್ 1985-1986 2
8 ಆಸ್ಕರ್‌ ಫರ್ನಾಂಡಿಸ್‌ 1986-87 2
9 ಜನಾರ್ದನ ಪೂಜಾರಿ 1987-1988 2
10 ವೀರೇಂದ್ರ ಪಾಟೀಲ್‌ 1988-1989 2
11 ಆಸ್ಕರ್‌ ಫರ್ನಾಂಡೀಸ್‌ 1989-1992 4
12 ವಿ. ಕೃಷ್ಣರಾವ್ 1992-1995 4
13 ಡಿ.ಕೆ. ನಾಯ್ಕರ್‌ 1995-1996 2
14 ಧರಂಸಿಂಗ್‌ 1996-1999 4
15 ಎಸ್‌.ಎಂ.ಕೃಷ್ಣ 1999-2000 2
16 ವಿ.ಎಸ್. ಕೌಜಲಗಿ 2000-2001 2
17 ಅಲ್ಲಂ ವೀರಭದ್ರಪ್ಪ 2001-2003 3
18 ಜನಾರ್ದನ ಪೂಜಾರಿ 2003-2005 3
19 ಮಲ್ಲಿಕಾರ್ಜುನ ಖರ್ಗೆ 2005-2008 4
20 ಆರ್.ವಿ. ದೇಶಪಾಂಡೆ 2008-2010 3
21 ಡಾ.ಜಿ.ಪರಮೇಶ್ವರ 2010-2018 8
22 ದಿನೇಶ್ ಗುಂಡುರಾವ್‌ 2018-19 1
23 ಡಿ.ಕೆ. ಶಿವಕುಮಾರ್‌ 2020-
English summary
List of KPCC president in karnataka Followed by Devaraj Urs to D.K Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X