• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಸರ್ಕಾರಿ ನೌಕರರಿಗೆ 2021ರ ರಜಾ ದಿನಗಳ ಪಟ್ಟಿ!

|
Google Oneindia Kannada News

ಬೆಂಗಳೂರು, ನ. 21: ಕರ್ನಾಟಕ ಸರ್ಕಾರವು ಮುಂದಿನ ವರ್ಷದ ಅಂದರೆ 2021ನೇ ಸಾಲಿನ ಸರ್ಕಾರಿ ನೌಕರರ ರಜಾ ದಿನಗಳನ್ನು ಅಧಿಕೃತವಾಗಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಬಗ್ಗೆ ಅಧಿಕೃತ ಆದೇಶ ಮಾಡಿದ್ದು, ಒಟ್ಟು 19 ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಿದೆ.

ಇದರೊಂದಿಗೆ ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ಪ್ರತಿ ಭಾನುವಾರಗಳು ರಜಾ ದಿನಗಳಾಗಿವೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯಪಾಲರ ಆದೇಶದಂತೆ ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಆದೇಶ ಹೊರಡಿಸಿದ್ದು ಸಂಪೂರ್ಣ ಮಾಹಿತಿ ಮುಂದಿದೆ.

ಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರವು 2021ನೇ ಸಾಲಿನಲ್ಲಿ ಸರ್ಕಾರಿ ನೌಕರರಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಈ ಮುಂದಿನಂತಿದೆ. ಜೊತೆಗೆ ಪ್ರತಿ ತಿಂಗಳ ಎಲ್ಲ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರ ಸಾರ್ವತ್ರಿಕ ಸರ್ಕಾರಿ ರಜಾ ದಿನಗಳಾಗಿವೆ.

* 01.01.2021: ನೂತನ ವರ್ಷಾರಂಭ

* 30.03.2021: ಷಬ್-ಎ-ಬರಾತ್

* 03.04.2021: ಹೋಲಿ ಸ್ಯಾಟರ್‌ಡೇ

* 17.04.2021: ದೇವರ ದಾಸಿಮಯ್ಯ ಜಯಂತಿ

* 21.04.2021: ಶ್ರೀರಾಮ ನವಮಿ

* 07.05.2021: ಜುಮತ್-ಉಲ್-ವಿದಾ

* 10.05.2021: ಷಬ್-ಎ-ಖದರ್

* 17.05.2021: ಶ್ರೀ ಶಂಕರಾಚಾರ್ಯ ಜಯಂತಿ

* 26.05.2021: ಬುದ್ಧ ಪೂರ್ಣಿಮ

* 20.08.2021: ವರಮಹಾಲಕ್ಷ್ಮಿ ವ್ರತ

* 21.08.2021: ಓಣಂ ಹಬ್ಬ, ಋಗ್ ಉಪಾಕರ್ಮ

* 23.08.2021: ಬ್ರಹ್ಮಶ್ರೀ ನಾರಾಯಣಗುರು ಜಯಂತಿ

* 08.09.2021: ಕನ್ಯ ಮಾರಯಮ್ಮ ಜಯಂತಿ

* 09.09.2021: ಸ್ವರ್ಣಗೌರಿ ವ್ರತ

* 17.09.2021: ವಿಶ್ವಕರ್ಮ ಜಯಂತಿ

* 18.10.2021: ತುಲಾ ಸಂಕ್ರಮಣ

* 19.11.2021: ಗುರುನಾನಕ್ ಜಯಂತಿ

* 20.11.2021: ಹುತ್ತರಿ ಹಬ್ಬ

* 24.12.2021: ಕ್ರಿಸ್‌ಮಸ್ ಈವ್

English summary
Government holidays for Karnataka. Here is the official list of 2020 Karnataka Government Holidays In Karnataka. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X