ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2014

By Mahesh
|
Google Oneindia Kannada News

ಬೆಂಗಳೂರು, ಸೆ.2: ಕರ್ನಾಟಕದ ನೂತನ ರಾಜ್ಯಪಾಲರಾಗಿ ವಜುಭಾಯಿ ರುಡಾಭಾಯಿ ವಾಲಾ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದ 17ನೇ ರಾಜ್ಯಪಾಲರ ಹೆಸರು ಹಾಗೂ ಅವರ ಅಧಿಕಾರಾವಧಿಯ ವಿವರ ಇಲ್ಲಿದೆ. ಈ ಪಟ್ಟಿಯಲ್ಲಿ ಹಂಗಾಮಿ ರಾಜ್ಯಪಾಲರ ಹೆಸರು ಸೇರಿದೆ.

ವಜುಭಾಯಿ ಅವರು ಹಿಂದಿಯಲ್ಲಿ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ. ಹೆಚ್. ವಘೇಲಾ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರತಿಜ್ಞಾ ವಿಧಿ ಬೋಧಿಸಿದರು.[ಸೌರಾಷ್ಟ್ರದ ವಜುಭಾಯಿ ವ್ಯಕ್ತಿ ಪರಿಚಯ]

ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಜುಭಾಯಿ ಅವರನ್ನು ಶಾಲು ಹೊದಿಸಿ, ಗಂಧದ ಮಾಲೆ ಅರ್ಪಿಸಿ ಅಭಿನಂದಿಸಿದರು. ಈ ಮುನ್ನ ರಾಜ್ಯದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ರಾಷ್ಟ್ರಪತಿಯವರು ಹೊರಡಿಸಿರುವ ನೇಮಕಾತಿ ಆದೇಶವನ್ನು ವಾಚಿಸಿದರು. [ವಜುಭಾಯಿ ಪ್ರಮಾಣ ವಚನ ಸ್ವೀಕಾರ ಚಿತ್ರಗಳು]

List of Governors Of Karnataka Since 1956
ಕ್ರಮ ಸಂಖ್ಯೆ ಕರ್ನಾಟಕ ರಾಜ್ಯಪಾಲರು ಎಲ್ಲಿಂದ ಎಲ್ಲಿವರೆಗೆ
1 ಜಯಚಾಮರಾಜೇಂದ್ರ ಒಡೆಯರ್ 01-04-1956 15-04-1959
2 (ಪ್ರಭಾರ) ಮಂಗಲ್‍ದಾಸ್ ಪಕ್ವಾಸ್
15-04-1959 01-07-1959
3 ಜಯಚಾಮರಾಜೇಂದ್ರ ಒಡೆಯರ್ 01-07-1959 16-04-1960
4 (ಪ್ರಭಾರ)
ಮಂಗಲ್‍ದಾಸ್ ಪಕ್ವಾಸ್ 16-04-1960 02-07-1960
5 ಜಯಚಾಮರಾಜೇಂದ್ರ ಒಡೆಯರ್ 02-07-1960 10-04-1961
6 (ಪ್ರಭಾರ)
ಮಂಗಲ್‍ದಾಸ್ ಪಕ್ವಾಸ್ 10-04-1961 24-06-1961
7
ಜಯಚಾಮರಾಜೇಂದ್ರ ಒಡೆಯರ್ 24-06-1961 19-04-1962
8 (ಪ್ರಭಾರ)
ಮಂಗಲ್‍ದಾಸ್ ಪಕ್ವಾಸ್ 19-04-1962 20-07-1962
9 ಜಯಚಾಮರಾಜೇಂದ್ರ ಒಡೆಯರ್ 20-07-1962 07-08-1963
10 (ಪ್ರಭಾರ)
ಮಂಗಲ್‍ದಾಸ್ ಪಕ್ವಾಸ್ 07-08-1963 07-10-1963
11 ಜಯಚಾಮರಾಜೇಂದ್ರ ಒಡೆಯರ್ 07-10-1963 04-05-1964
12 ಎಸ್. ಎಂ. ಶ್ರೀನಾಗೇಶ್ 04-05-1964 02-04-1965
13 ವಿ.ವಿ. ಗಿರಿ 02-04-1965 13-05-1967
14 ಜಿ.ಎಸ್. ಪಾಠಕ್ 13-05-1967 30-08-1969
15 (ಪ್ರಭಾರ)
ಸೋಮನಾಥ್ ಅಯ್ಯರ್ 30-08-1969 23-10-1969
16 ಧರ್ಮವೀರ 23-10-1969 01-02-1972
17 ಮೋಹನ್ ಲಾಲ್ ಸುಖಾಡಿಯಾ 01-02-1972 10-01-1976
18
ಉಮಾಶಂಕರ್ ದೀಕ್ಷಿತ್ 10-01-1976 02-08-1977
19 ಗೋವಿಂದ್ ನಾರಾಯಣ್ 02-08-1977 15-04-1983
20 ಅಶೋಕ್ ನಾಥ್ ಬ್ಯಾನರ್ಜಿ 16-04-1983 25-02-1988
21 ಪಿ. ವೆಂಕಟಸುಬ್ಬಯ್ಯ 26-02-1988 05-02-1990
22 (ಪ್ರಭಾರ)
ಜಸ್ಟೀಸ್ ಎಸ್. ಮೋಹನ್ 05-02-1990 08-05-1990
23 ಭಾನುಪ್ರತಾಪ್ ಸಿಂಗ್ 08-05-1990 06-01-1991
24 ಖುರ್ಷಿದ್ ಆಲಂ ಖಾನ್ 06-01-1991 29-05-1992
25 (ಪ್ರಭಾರ)
ಎಸ್.ಪಿ. ಬರೂಚಾ 30-05-1992 27-06-1992
26 ಖುರ್ಷಿದ್ ಆಲಂ ಖಾನ್ 28-06-1992 31-11-1995
27 (ಪ್ರಭಾರ)
ಎಂ.ಎಲ್. ಪೆಂಡ್ಸೆ 01-12-1995 21-12-1995
28 ಖುರ್ಷಿದ್ ಆಲಂ ಖಾನ್ 21-12-1995 01-12-1999
29 ವಿ.ಎಸ್. ರಮಾದೇವಿ 02-12-1999 20-08-2002
30 ಟಿ.ಎನ್. ಚುತುರ್ವೇದಿ 21-08-2002 21-08-2007
31 ರಾಮೇಶ್ವರ್ ಠಾಕೂರ್ 21-08-2007 28-06-2009
32 ಎಚ್. ಆರ್. ಭಾರದ್ವಾಜ್ 29-06-2009 29-06-2014
33 ಹೆಚ್ಚುವರಿ
ಕೆ. ರೋಸಯ್ಯ 29-06-2014 01-09-2014
34 ವಜುಭಾಯಿ ರುಡಾಭಾಯಿ ವಾಲಾ 01-09-2014 -
English summary
Vajubhai Rudabhai Vala took oath as New Governor of Karnataka.This is a list of the Governors of Karnataka since the formation of the state in 1956.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X