ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಶಾಸಕರ ಸಂಭಾವ್ಯ ಪಟ್ಟಿ

|
Google Oneindia Kannada News

Recommended Video

H D Kumaraswamy cabinet expansion : ಎಚ್ ಡಿ ಕೆ ಸಂಪುಟಕ್ಕೆ ಸೇರಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ

ಬೆಂಗಳೂರು, ಡಿಸೆಂಬರ್ 19 : ಕರ್ನಾಟಕದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಮತ್ತು ಪುನಾರಚನೆಗೆ ದಿನಾಂಕ ನಿಗದಿಯಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 8 ಸಚಿವ ಸ್ಥಾನಗಳು ಖಾಲಿ ಇದ್ದು, 6 ಸ್ಥಾನಗಳು ಕಾಂಗ್ರೆಸ್‌ ಪಕ್ಷಕ್ಕೆ ಸಿಗಲಿವೆ.

ಖಾಲಿ ಇರುವ 6 ಸಚಿವ ಸ್ಥಾನಕ್ಕೆ 12ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್ ನಾಯಕರು ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಿದೆ. ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಪಟ್ಟಿಗೆ ಅಂತಿಮ ಒಪ್ಪಿಗೆ ಪಡೆಯಬೇಕಿದೆ.

ಡಿ.22ಕ್ಕೆ ಸಂಪುಟ ವಿಸ್ತರಣೆ ಅಲ್ಲ, ಪುನಾರಚನೆ: ಸಚಿವರಿಗೆ ಆತಂಕಡಿ.22ಕ್ಕೆ ಸಂಪುಟ ವಿಸ್ತರಣೆ ಅಲ್ಲ, ಪುನಾರಚನೆ: ಸಚಿವರಿಗೆ ಆತಂಕ

ಲಿಂಗಾಯತ, ಕುರುಬ, ಅಲ್ಪಸಂಖ್ಯಾತ ಹೀಗೆ ಜಾತಿವಾರು ಲೆಕ್ಕಾಚಾರ, ವಲಯವಾರು ಲೆಕ್ಕಾಚಾರದಲ್ಲಿ ಸಂಪುಟ ಸೇರುವ ಶಾಸಕರನ್ನು ಆಯ್ಕೆ ಮಾಡಲಾಗುತ್ತಿದೆ. ಡಿಸೆಂಬರ್ 22ರ ಸಂಜೆ 5 ಗಂಟೆಗೆ ರಾಜಭವನದಲ್ಲಿ ನೂತನ ಸಚವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯೋ?, ಪುನರ್ ರಚನೆಯೋ?ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಯೋ?, ಪುನರ್ ರಚನೆಯೋ?

ಮತ್ತೊಂದು ಕಡೆ ಜೆಡಿಎಸ್ ಪಕ್ಷಕ್ಕೆ ಎರಡು ಸಚಿವ ಸ್ಥಾನಗಳು ಸಿಗಲಿವೆ. ಇವುಗಳ ಪೈಕಿ ಒಂದನ್ನು ಮಾತ್ರ ಭರ್ತಿ ಮಾಡಲು ಪಕ್ಷ ಮುಂದಾಗಿದೆ. ಸಭಾಪತಿ ಸ್ಥಾನ ಕೈ ತಪ್ಪಿರುವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಜೆಡಿಎಸ್‌ನಿಂದ ಸಂಪುಟ ಸೇರುವ ಸಾಧ್ಯತೆ ಇದೆ...

ಸಚಿವ ಸಂಪುಟ ವಿಸ್ತರಣೆ : ಕಾಂಗ್ರೆಸ್‌ ಶಾಸಕರಿಗೆ ಕಾದಿದೆ ನಿರಾಸೆ?ಸಚಿವ ಸಂಪುಟ ವಿಸ್ತರಣೆ : ಕಾಂಗ್ರೆಸ್‌ ಶಾಸಕರಿಗೆ ಕಾದಿದೆ ನಿರಾಸೆ?

ಮೂವರು ಶಾಸಕರು

ಮೂವರು ಶಾಸಕರು

ಲಿಂಗಾಯತ ಕೋಟಾದಲ್ಲಿ ಹಿರೇಕೆರೂರು ಶಾಸಕ ಬಿ.ಸಿಪಾಟೀಲ್, ಗದಗ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ್, ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಹೆಸರು ಕೇಳಿಬರುತ್ತಿದೆ. ಇವರಲ್ಲಿ ಒಬ್ಬರು ಸಂಪುಟ ಸೇರುವುದು ಖಚಿತವಾಗಿದೆ?, ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ.

ಇಬ್ಬರ ಹೆಸರು

ಇಬ್ಬರ ಹೆಸರು

ಕುರುಬ ಸಮುದಾಯದ ಕೋಟಾದಡಿ ಹೊಸಕೋಟೆ ಶಾಸಕ ಎಂ.ಟಿ.ಬಿ,ನಾಗರಾಜ್, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೆಸರು ಚಾಲ್ತಿಯಲ್ಲಿದೆ. ಎಂ.ಟಿ.ಬಿ.ನಾಗರಾಜ್ ಸಚಿವರಾಗಲು ಪ್ರಯತ್ನ ನಡೆಸಿದ್ದು, ಅವರೇ ಸೇರಲಿದ್ದಾರೆ ಎಂಬ ಸುದ್ದಿಗಳು ಪಕ್ಷದ ವಲಯದಲ್ಲಿವೆ.

ಇಬ್ಬರು ಶಾಸಕರು

ಇಬ್ಬರು ಶಾಸಕರು

ಅಲ್ಪ ಸಂಖ್ಯಾತ ಕೋಟಾದಲ್ಲಿ ಈಗಾಗಲೇ ಜಮೀರ್ ಅಹಮದ್ ಖಾನ್ ಮತ್ತು ಯು.ಟಿ.ಖಾದರ್ ಸಚಿವರಾಗಿದ್ದಾರೆ. ಈಗ ಶಿವಾಜಿನಗರ ಶಾಸಕ ರೋಷನ್ ಬೇಗ್, ಮೈಸೂರಿನ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಅವರ ಹೆಸರು ಕೇಳಿಬರುತ್ತಿದೆ. ಮೈಸೂರಿಗೆ ಮತ್ತೊಂದು ಸಚಿವ ಸ್ಥಾನ ಸಿಗಲಿದೆಯೇ? ಕಾದು ನೋಡಬೇಕು.

ಇಬ್ಬರು ಶಾಸಕರಲ್ಲಿ ಪೈಪೋಟಿ

ಇಬ್ಬರು ಶಾಸಕರಲ್ಲಿ ಪೈಪೋಟಿ

ಬಳ್ಳಾರಿ ಜಿಲ್ಲಾ ಕೋಟಾದಡಿ ಸಂಡೂರು ಕ್ಷೇತ್ರದ ಶಾಸಕ ಇ.ತುಕಾರಾಂ ಮತ್ತು ಬಳ್ಳಾರಿ ಶಾಸಕ ಬಿ.ನಾಗೇಂದ್ರ ಅವರ ನಡುವೆ ಪೈಪೋಟಿ ನಡೆದಿದೆ. ಬಳ್ಳಾರಿಗೊಂದು ಸಚಿವ ಸ್ಥಾನ ನೀಡಬೇಕು ಎಂದು ಜಾರಕಿಹೊಳಿ ಸಹೋದರರು ಸಹ ಬೇಡಿಕೆ ಇಟ್ಟಿದ್ದಾರೆ.

ಹಿರಿಯರು, ಹೊಸ ಮುಖಗಳು

ಹಿರಿಯರು, ಹೊಸ ಮುಖಗಳು

ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಆರ್.ಬಿ.ತಿಮ್ಮಾಪುರ ಮತ್ತು ಹೊಸ ಮುಖಗಳಾದ ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ, ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ ಅವರ ಹೆಸರು ಸಹ ಕೇಳಿಬರುತ್ತಿದೆ.

English summary
All set for Karnataka Chief Minister H.D.Kumaraswamy cabinet expansion on December 22, 2018. Here are the list of Congress MLAs who may join cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X