• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಮ್ಮೆ ನೋಡಿ: ಅಕ್ಟೋಬರ್ ತಿಂಗಳಲ್ಲಿ ಹತ್ತು ದಿನ ರಜೆ, 21ದಿನ ಮಾತ್ರ ಕೆಲಸ

|

ಸಾಮಾನ್ಯವಾಗಿ ಅಕ್ಟೋಬರ್ ಮಾಸ ಬಂತು ಎಂದರೆ, ಹಬ್ಬಹರಿದಿನಗಳ, ರಜಾದಿನಗಳ ಸರೆಮಾಲೆ. ಈ ಬಾರಿ ಅಧಿಕ ಮಾಸ ಬಂದಿರುವುದರಿಂದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳು ಒಂದು ತಿಂಗಳು ಮುಂದಕ್ಕೆ ಹೋಗಿವೆ.

ಅಧಿಕ ಮಾಸ ಅಕ್ಟೋಬರ್ ಹದಿನೇಳಕ್ಕೆ ಮುಕ್ತಾಯಗೊಳ್ಳಲಿದೆ. ಆ ನಂತರ, ನವರಾತ್ರಿಯ ಪರ್ವಕಾಲ ಆರಂಭ. ಆಯುಧಪೂಜೆಯ ಪ್ರಯುಕ್ತ ನಡೆಸಲಾಗುವ ಅಂಗಡಿ, ಆಫೀಸ್ ಪೂಜೆಗಳು ಈ ಬಾರಿ, ಕೊರೊನಾ ಹಾವಳಿಯಿಂದ ಕಳೆಗಟ್ಟುವ ಸಾಧ್ಯತೆ ಕಮ್ಮಿ.

2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ

ಅಕ್ಟೋಬರ್ ತಿಂಗಳಲ್ಲಿ ಎರಡನೇ, ನಾಲ್ಕನೇ ಶನಿವಾರ ಸೇರಿ ಒಟ್ಟು ಹತ್ತು ದಿನ ಬ್ಯಾಂಕ್/ಸಾರ್ವತ್ರಿಕ ರಜಾದಿನಗಳಿವೆ. ಅದರಲ್ಲೂ, ಆಯುಧಪೂಜೆ ಭಾನುವಾರ ಬಂದಿರುವುದರಿಂದ ಒಂದು ರಜಾ ಖೋತಾ ಆಗಿದೆ. ಅಕ್ಟೋಬರ್ - 2020 ಮಾಸದ ರಜಾದಿನಗಳ ಪಟ್ಟಿ ಇಂತಿದೆ (ಕರ್ನಾಟಕ ವ್ಯಾಪ್ತಿಯ ರಜೆಗಳು):

1 ಅಕ್ಟೋಬರ್ 2, ಶುಕ್ರವಾರ : ಗಾಂಧಿ ಜಯಂತಿ (ಸಾರ್ವತ್ರಿಕ ರಜೆ)
2 ಅಕ್ಟೋಬರ್ 4 ಭಾನುವಾರ
3 ಅಕ್ಟೋಬರ್ 10 ಶನಿವಾರ ಎರಡನೇ ಶನಿವಾರ (ಬ್ಯಾಂಕ್ ರಜೆ)
4 ಅಕ್ಟೋಬರ್ 11 ಭಾನುವಾರ
5 ಅಕ್ಟೋಬರ್ 18 ಭಾನುವಾರ
6 ಅಕ್ಟೋಬರ್ 24 ಶನಿವಾರ ನಾಲ್ಕನೇ ಶನಿವಾರ (ಬ್ಯಾಂಕ್ ರಜೆ)
7 ಅಕ್ಟೋಬರ್ 25 ಭಾನುವಾರ (ಆಯುಧಪೂಜೆ)
8 ಅಕ್ಟೋಬರ್ 26 ಸೋಮವಾರ ವಿಜಯದಶಮಿ (ರಜಾದಿನ)
9 ಅಕ್ಟೋಬರ್ 30, ಶುಕ್ರವಾರ ಈದ್ ಮಿಲಾದ್, ಪೈಗಂಬರ್ ಜನ್ಮದಿನ (ಬ್ಯಾಂಕ್ ರಜೆ)
10 ಅಕ್ಟೋಬರ್ 31, ಶನಿವಾರ ವಾಲ್ಮೀಕಿ ಜಯಂತಿ (ಬ್ಯಾಂಕ್ ರಜೆ)

English summary
Here is the list of bank holidays falling in the month of October. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X