ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ ಎಂಥಾ ಶಾಸಕರನ್ನ ಆರಿಸಿದ್ದೀರ್ರೀ, ಮತದಾರರೆ!

|
Google Oneindia Kannada News

ಬೆಂಗಳೂರು, ಜೂ 27: ಜನರಿಂದ ಆಯ್ಕೆಯಾಗಿ, ಜನರ ಸಮಸ್ಯೆಯ ಬಗ್ಗೆ ಸದನದಲ್ಲಿ ಮಾತನಾಡ ಬೇಕಾದ ನಮ್ಮ ಶಾಸಕ/ಸಚಿವರಲ್ಲಿ ಕೆಲವರು ವಿಧಾನಸಭೆಯಲ್ಲೇ ನಿದ್ದೆಗೆ ಜಾರಿದರೆ, ಇನ್ನಷ್ಟು ಶಾಸಕರು ಅದ್ಯಾಕೋ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.

ಶಾಸಕರಾಗುತ್ತಿರುವವರಲ್ಲಿ ಕ್ಷೇತ್ರಾಭಿವೃದ್ದಿ, ಕುತೂಹಲ ಮತ್ತು ಚಿಂತನೆಯ ಹೊಳಹು ಕಮ್ಮಿಯಾಗುತ್ತಿದೆ ಎಂದು ಹಿಂದೆ ದಿವಂಗತ ಅಬ್ದುಲ್ ನಜೀರ್ ಸಾಬ್ ಸದನದಲ್ಲಿ ಬೇಸರ ವ್ಯಕ್ತ ಪಡಿಸಿದ್ದರು. ಸದನಕ್ಕೆ ಬರುವುದೇ ಕೆಲವರು ಗಾಢ ನಿದ್ರೆಗೆ ಜಾರಲು.

ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದರೂ ಕೆಲವೊಂದು ಶಾಸಕರ ನಡುವಳಿಕೆ ನೋಡಿದರೆ ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯನವರು ಕೂಡಾ ಬೇಸರಿಕೊಳ್ಳಬಹುದೇನೋ? ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟು 224 ಶಾಸಕರ ಪೈಕಿ 28 ಶಾಸಕರು ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ, ಇದಲ್ಲದೇ 43 ಶಾಸಕರು ಯಾವುದೇ ಚರ್ಚೆಯಲ್ಲಿ ಇದುವರೆಗೆ ಭಾಗವಹಿಸಲಿಲ್ಲ.

ಇಂಧನ ಸಚಿವ ಡಿ ಕೆ ಶಿವಕುಮಾರ್ ಸಚಿವರಾದ ಮೇಲೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದು ಕಮ್ಮಿಯಾದರೆ, ಸಚಿವ ಸ್ಥಾನ ಕಳೆದುಕೊಂಡ ಮೇಲೆ ಕಲಘಟಗಿ ಶಾಸಕ ಸಂತೋಷ್ ಲಾಡ್ ಅಸೆಂಬ್ಲಿ ದಾರಿಯನ್ನೇ ಮರೆತಿದ್ದಾರೆ. (ಜಲಮಂಡಳಿ ಭ್ರಷ್ಟಾಚಾರ ಜಾಲಾಡಿದ ಸಿಎಂ)

ಸಿಎಂ ಹೊರತಾಗಿ ಎಲ್ಲಾ ಸಮಯದಲ್ಲೂ ಸರಕಾರದ ಪರವಾಗಿ ಉತ್ತರಿಸಿದವರ ಸಚಿವರನ್ನು ಪಟ್ಟಿ ಮಾಡುವುದಾದರೆ ಮೊದಲನೆಯದಾಗಿ ಶಿರಾ ಕ್ಷೇತ್ರದಿಂದ ಆಯ್ಕೆಯಾದ ಟಿ ಬಿ ಜಯಚಂದ್ರ, ನಂತರ ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾದ ವಿ ಶ್ರೀನಿವಾಸ ಪ್ರಸಾದ್.

ಒಂದೇ ಒಂದು ಪ್ರಶ್ನೆ ಕೇಳದ 28 ಶಾಸಕರ ಹೆಸರು ಮತ್ತು ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಹೆಸರು ಸ್ಲೈಡಿನಲ್ಲಿದೆ...

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು

ಬಿ ಜಿ ಗೋವಿಂದಪ್ಪ (ಕಾಂಗ್ರೆಸ್, ಹೊಸದುರ್ಗ)
ಬಿ ಜಡ್‌ ಜಮೀರ್‌ ಅಹ್ಮದ್‌ ಖಾನ್‌ (ಜೆಡಿಎಸ್, ಬೆಂಗಳೂರು ಚಾಮರಾಜಪೇಟೆ)
ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ (ಕಾಂಗ್ರೆಸ್, ಕುಂದಗೋಳ)
ಚಿಮ್ಮನಕಟ್ಟಿ ಬಾಳಪ್ಪ ಭೀಮಪ್ಪ ( ಕಾಂಗ್ರೆಸ್, ಬಾದಾಮಿ)

(ಚಿತ್ರದಲ್ಲಿ : ಜಮೀರ್‌ ಅಹ್ಮದ್‌ ಖಾನ್‌ )

ಈ ಸ್ಲೈಡನಲ್ಲಿ ಇರುವವರೆಲ್ಲಾ ಕಾಂಗ್ರೆಸ್ ಶಾಸಕರು

ಈ ಸ್ಲೈಡನಲ್ಲಿ ಇರುವವರೆಲ್ಲಾ ಕಾಂಗ್ರೆಸ್ ಶಾಸಕರು

ಸಿ ಪಿ ಯೋಗೀಶ್ವರ್ (ಕಾಂಗ್ರೆಸ್, ಚನ್ನಪಟ್ಟಣ)
ಡಿ ಜಿ ಶಾಂತನ ಗೌಡ ( ಕಾಂಗ್ರೆಸ್, ಹೊನ್ನಾಳಿ)
ಡಿ ಸುಧಾಕರ್‌ (ಕಾಂಗ್ರೆಸ್, ಹಿರಿಯೂರು)
ಎ ವೆಂಕಟೇಶ ನಾಯ್ಕ (ಕಾಂಗ್ರೆಸ್, ದೇವದುರ್ಗ)

(ಚಿತ್ರದಲ್ಲಿ : ಯೋಗೀಶ್ವರ್)

ಇವರಿಗೆಲ್ಲಾ ತಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳಿಲ್ಲವೇ?

ಇವರಿಗೆಲ್ಲಾ ತಮ್ಮ ಕ್ಷೇತ್ರದಲ್ಲಿ ಸಮಸ್ಯೆಗಳಿಲ್ಲವೇ?

ಫೈರೋಜ್‌ ನೂರುದ್ದೀನ್‌ ಸೇಠ್ (ಕಾಂಗ್ರೆಸ್, ಬೆಳಗಾವಿ ಉತ್ತರ)
ಎಂ ಜೆ ಅಪ್ಪಾಜಿ (ಜೆಡಿಎಸ್, ಭದ್ರಾವತಿ)
ಅಶೋಕ್‌ ಮಹದೇವಪ್ಪ ಪಟ್ಟಣ (ಕಾಂಗ್ರೆಸ್, ರಾಮದುರ್ಗ)
ಬಿ ಬಿ ನಿಂಗಯ್ಯ (ಜೆಡಿಎಸ್, ಮೂಡಿಗೆರೆ)

ಕುಮಾರಸ್ವಾಮಿ ಯಾಕೆ ಸುಮ್ಮನಾದರೋ?

ಕುಮಾರಸ್ವಾಮಿ ಯಾಕೆ ಸುಮ್ಮನಾದರೋ?

ಜಿ ಹಂಪಯ್ಯ ಸಾಹುಕಾರ್‌ ಬಲ್ಲಟಗಿ (ಕಾಂಗ್ರೆಸ್, ಮಾನ್ವಿ)
ಎಚ್‌ ಡಿ ಕುಮಾರಸ್ವಾಮಿ ( ಜೆಡಿಎಸ್, ರಾಮನಗರ)
ಇನಾಂದಾರ್‌ ದಾನಪ್ಪಗೌಡ ಬಸನಗೌಡ (ಕಾಂಗ್ರೆಸ್, ಕಿತ್ತೂರು)
ಜಾರಕಿಹೊಳಿ ರಮೇಶ್‌ ಲಕ್ಷ್ಮಣರಾವ್‌ (ಕಾಂಗ್ರೆಸ್, ಗೋಕಾಕ್)

(ಚಿತ್ರದಲ್ಲಿ : ಕುಮಾರಸ್ವಾಮಿ)

ಪ್ರಿಯಾಂಕ ಖರ್ಗೆ, ಪ್ರಿಯಕೃಷ್ಣ ಮುಂತಾದ ಯುವ ಮುಖಂಡರೂ ಪ್ರಶ್ನೆ ಕೇಳುತ್ತಿಲ್ಲ

ಪ್ರಿಯಾಂಕ ಖರ್ಗೆ, ಪ್ರಿಯಕೃಷ್ಣ ಮುಂತಾದ ಯುವ ಮುಖಂಡರೂ ಪ್ರಶ್ನೆ ಕೇಳುತ್ತಿಲ್ಲ

ಕೆ ಷಡಕ್ಷರಿ (ಕಾಂಗ್ರೆಸ್, ತಿಪಟೂರು)
ಕೆ ಶಿವಮೂರ್ತಿ (ಕಾಂಗ್ರೆಸ್, ಮಾಯಕೊಂಡ)
ಪ್ರಿಯಕೃಷ್ಣ (ಕಾಂಗ್ರೆಸ್, ಬೆಂಗಳೂರು ಗೋವಿಂದರಾಜ ನಗರ)
ಪ್ರಿಯಾಂಕ ಖರ್ಗೆ (ಕಾಂಗ್ರೆಸ್, ಚಿತ್ತಾಪುರ)

(ಚಿತ್ರದಲ್ಲಿ : ಪ್ರಿಯಕೃಷ್ಣ )

ಮಾಧ್ಯಮದ ಮುಂದೆ ಮಾತನಾಡುವ ವರ್ತೂರು ಸದನದಲ್ಲಿ ಗಪ್ ಚುಪ್

ಮಾಧ್ಯಮದ ಮುಂದೆ ಮಾತನಾಡುವ ವರ್ತೂರು ಸದನದಲ್ಲಿ ಗಪ್ ಚುಪ್

ಆರ್‌ ವರ್ತೂರು ಪ್ರಕಾಶ್‌ (ಪಕ್ಷೇತರ, ಕೋಲಾರ)
ಆರ್‌ ವಿ ದೇವರಾಜ್‌ (ಕಾಂಗ್ರೆಸ್, ಬೆಂಗಳೂರು ಚಿಕ್ಕಪೇಟೆ)
ಎಸ್‌ ಜಯಣ್ಣ (ಕಾಂಗ್ರೆಸ್, ಕೊಳ್ಳೇಗಾಲ)
ಎಸ್‌ ರಘು (ಬಿಜೆಪಿ, ಬೆಂಗಳೂರು ಸಿ ವಿ ರಾಮನ್ ನಗರ)

(ಚಿತ್ರದಲ್ಲಿ : ವರ್ತೂರು ಪ್ರಕಾಶ್‌)

ಕಂಪ್ಲಿ ಶಾಸಕರು ನ್ಯಾಯಾಂಗ ಬಂಧನದಲ್ಲಿ

ಕಂಪ್ಲಿ ಶಾಸಕರು ನ್ಯಾಯಾಂಗ ಬಂಧನದಲ್ಲಿ

ಸಾ ರಾ ಮಹೇಶ್‌ (ಜೆಡಿಎಸ್, ಕೃಷ್ಣರಾಜನಗರ)
ಟಿ.ಚ್‌ ಸುರೇಶ್‌ ಬಾಬು ( BSR ಕಾಂಗ್ರೆಸ್, ಕಂಪ್ಲಿ)
ವಡ್ನಾಳ್‌ ರಾಜಣ್ಣ (ಕಾಂಗ್ರೆಸ್, ಚನ್ನಗಿರಿ)
ವಿನಿಶ ನೆರೊ ( ಆಂಗ್ಲೋ ಇಂಡಿಯನ್ ಖೋಟದಡಿ ಆಯ್ಕೆ)

English summary
List of 28 MLAs who never asked any question in during Karnataka Legislative assembly session. This list includes former CM H D Kumaraswamy and leader like Jameer Ahmed, C P Yogeeshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X