ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 26 ಶಾಸಕರಿಗೆ ಎಷ್ಟು ನೋಟಿಸ್ ಕೊಟ್ರೂ ಪ್ರಯೋಜನವಿಲ್ಲ

|
Google Oneindia Kannada News

ಬೆಂಗಳೂರು, ಸೆ 3: ಜನಪ್ರತಿನಿಧಿಗಳು ಕಡ್ಡಾಯವಾಗಿ ತಮ್ಮ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಇಲಾಖೆಗೆ ನೀಡಲೇ ಬೇಕಾಗಿರುವುದು ಕಾನೂನು.

ಆದರೆ ಆಸ್ತಿ ವಿವರ ನೀಡುವಂತೆ ಲೋಕಾಯುಕ್ತ ಇಲಾಖೆ ಜನಪ್ರತಿನಿಧಿಗಳಿಗೆ ಹಲವು ಬಾರಿ ನೋಟೀಸ್ ನೀಡಿದ್ದರೂ, ಜನಪ್ರತಿನಿಧಿಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಉದಾಹರಣೆಗಳೇ ಹೆಚ್ಚು.

ಲೋಕಾಯುಕ್ತ ನೀಡಿದ್ದ ಗಡುವಿನಲ್ಲಿ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಲೋಕಾಯುಕ್ತರು ನೋಟಿಸ್ ನೀಡಿದ್ದರೂ, ಅದು ಫಲ ನೀಡದಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22 (1) ಮತ್ತು 22 (2) ರನ್ವಯ ನೋಟಿಸ್ ನೀಡಿದ ತರುವಾಯ ಕೂಡಾ ಉದ್ದೇಶಪೂರ್ವಕವಾಗಿ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ವಿರುದ್ದ ಐಪಿಸಿ ಕಲಂ 176ರನ್ವಯ ಒಂದು ತಿಂಗಳು ಜೈಲು ಶಿಕ್ಷೆ ಮತ್ತು ರೂಪಾಯಿ ಐನೂರು ದಂಡ ವಿಧಿಸಬಹುದಾಗಿದೆ.

ಆದಗ್ಯೂ, ರಾಜ್ಯದ ಇಪ್ಪತ್ತು ಶಾಸಕರು ಮತ್ತು ಆರು ಮಂದಿ ವಿಧಾನಪರಿಷತ್ ಸದಸ್ಯರು ಲೋಕಾಯುಕ್ತರಿಗೆ ಆಸ್ತಿ ವಿವರಗಳನ್ನು ನೀಡಲಿಲ್ಲ. ಇದರಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಒಬ್ಬರು. ಪಟ್ಟಿಯಲ್ಲಿರುವವರು ಯಾರು? ಸ್ಲೈಡಿನಲ್ಲಿ..

ಪಟ್ಟಿಯಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ

ಪಟ್ಟಿಯಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ

ಬೆಂಗಳೂರು ಸಿ ವಿ ರಾಮನ್ ನಗರದ ಶಾಸಕ ಎಸ್ ರಘು (ಬಿಜೆಪಿ )
ವಿಧಾನಪರಿಷತ್ ಸದಸ್ಯೆ, ನಟಿ ಜಯಮಾಲ (ಕಾಂಗ್ರೆಸ್)
ಕೊರಟಗೆರೆ ಶಾಸಕ ಸುಧಾಕರ ಲಾಲ್ (ಜೆಡಿಎಸ್)
ಕಾರವಾರದ ಶಾಸಕ ಸತೀಶ್ ಸೈಲ್ (ಪಕ್ಷೇತರ)
ವಿಧಾನಪರಿಷತ್ ಸದಸ್ಯ ರಘು ಆಚಾರ್ (ಪಕ್ಷೇತರ)
(ಚಿತ್ರದಲ್ಲಿ : ಜಯಮಾಲ)

ಆಸ್ತಿವಿವರ ನೀಡದ ಜನಪ್ರತಿನಿಧಿಗಳು

ಆಸ್ತಿವಿವರ ನೀಡದ ಜನಪ್ರತಿನಿಧಿಗಳು

ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ (ಕಾಂಗ್ರೆಸ್)
ವಿಧಾನಪರಿಷತ್ ಸದಸ್ಯ ವಿ ಎಸ್ ಉಗ್ರಪ್ಪ (ಕಾಂಗ್ರೆಸ್)
ವಿಧಾನಪರಿಷತ್ ಸದಸ್ಯ ಛಬ್ಬಿ ನಾಗರಾಜ್ (ಕಾಂಗ್ರೆಸ್)
ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್ (ಜೆಡಿಎಸ್)
ನವಲಗುಂದ ಶಾಸಕ ಕೋನ ರೆಡ್ಡಿ (ಜೆಡಿಎಸ್)
(ಚಿತ್ರದಲ್ಲಿ : ಉಗ್ರಪ್ಪ)

ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿಗಳೂ ಇರುವುದು ವಿಪರ್ಯಾಸ

ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿಗಳೂ ಇರುವುದು ವಿಪರ್ಯಾಸ

ರಾಮನಗರ ಶಾಸಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (ಜೆಡಿಎಸ್)
ವಿಧಾನಪರಿಷತ್ ಸದಸ್ಯ ಇಕ್ಬಾಲ್ ಅಹಮದ್ (ಕಾಂಗ್ರೆಸ್)
ಗುಲ್ಬರ್ಗ ಗ್ರಾಮೀಣ ಶಾಸಕ ಜೆ ರಾಮಕೃಷ್ಣ (ಕಾಂಗ್ರೆಸ್)
ಹರಪನಹಳ್ಳಿ ಶಾಸಕ ಎಂ ಪಿ ರವೀಂದ್ರ (ಕಾಂಗ್ರೆಸ್)
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯಕ್ (ಜೆಡಿಎಸ್)
(ಚಿತ್ರದಲ್ಲಿ : ಕುಮಾರಸ್ವಾಮಿ)

ಆಸ್ತಿವಿವರ ನೀಡದವರ ಮುಂದುವರಿದ ಪಟ್ಟಿ

ಆಸ್ತಿವಿವರ ನೀಡದವರ ಮುಂದುವರಿದ ಪಟ್ಟಿ

ಮಾಲೂರು ಶಾಸಕ ಮಂಜುನಾಥ ಗೌಡ (ಜೆಡಿಎಸ್)
ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ (ಕೆಜೆಪಿ)
ಶಹಾಪುರ ಶಾಸಕ ಗುರುಪಾಟೀಲ್ (ಕೆಜೆಪಿ)
ಬೀದರ್ ದಕ್ಷಿಣ ಶಾಸಕ ಅಶೋಕ್ ಖೇಣಿ (ಕೆಎಂಪಿ)
ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ (ಜೆಡಿಎಸ್)
(ಚಿತ್ರದಲ್ಲಿ : ಅಶೋಕ್ ಖೇಣಿ)

ಪಟ್ಟಿಯಲ್ಲಿನ ಇತರ ಆರು ಶಾಸಕರುಗಳು

ಪಟ್ಟಿಯಲ್ಲಿನ ಇತರ ಆರು ಶಾಸಕರುಗಳು

ಕುಂದಗೋಳ ಶಾಸಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ (ಕಾಂಗ್ರೆಸ್)
ಖಾನಾಪುರ ಶಾಸಕ ಅರವಿಂದ್ ಚಂದ್ರಕಾಂತ್ ಪಾಟೀಲ್ (ಪಕ್ಷೇತರ)
ಬೈಂದೂರು ಶಾಸಕ ಗೋಪಾಲ ಪೂಜಾರಿ (ಕಾಂಗ್ರೆಸ್)
ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ (ಜೆಡಿಎಸ್)
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (ಕಾಂಗ್ರೆಸ್)
ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ (ಜೆಡಿಎಸ್)
(ಚಿತ್ರದಲ್ಲಿ : ವಿಜಯಾನಂದ ಕಾಶಪ್ಪನವರ್)

English summary
Karnataka Lokayukta announced list of 20 MLAs and 6 MLCs not submitted property details to Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X