• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಜೆಟ್ ನಂತರ ಮದ್ಯ ಪ್ರಿಯರಿಗೆ ಆಘಾತ ಕಾದಿದೆ

|

ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನ ಆಯವ್ಯಯ ಪತ್ರವನ್ನು ಮಾರ್ಚ್ 05ರಂದು ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ ನಲ್ಲಿ ಮದ್ಯದ ಬೆಲೆ ಏರಿಕೆ ಮಾಡುವಂತೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

   Liquor price to go up shortly | Hike | Liquor price | Oneindia Kannada

   ಹೀಗಾಗಿ, ಬಜೆಟ್ ನಲ್ಲಿ ಈ ಬಗ್ಗೆ ಆದಾಯ ಸಂಗ್ರಹಕ್ಕಾಗಿ ಮದ್ಯದ ಬೆಲೆ ಏರಿಕೆ ಘೋಷಣೆಯಾಗಲಿದೆ. ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಘೋಷಣೆಯಾಗುತ್ತಿದ್ದಂತೆ ಏಪ್ರಿಲ್ 1 ರಿಂದ ನೂತನ ದರ ಪಟ್ಟಿ ಜಾರಿಗೆ ಬರಲಿದೆ. ಅಬಕಾರಿ ತೆರಿಗೆ ಶೇಕಡ 10 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

   ಬಜೆಟ್ ನಲ್ಲಿ ರೈತರಿಗೆ ಬಂಪರ್ ಗಿಪ್ಟ್ ಎಂದ ಸಿಎಂ ಯಡಿಯೂರಪ್ಪ

   ಅಬಕಾರಿ ಇಲಾಖೆಗೆ ಮುಂದಿನ ಹಣಕಾಸು ವರ್ಷಕ್ಕೆ 25 ಸಾವಿರ ಕೋಟಿ ರೂಪಾಯಿ ಗುರಿ ನಿಗದಿಪಡಿಸಲು ಹಣಕಾಸು ಇಲಾಖೆ ಹೊಂದಿರುವ ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಂಡಿದ್ದು ಅಬಕಾರಿ ತೆರಿಗೆಯನ್ನು ಶೇಕಡ 10 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.

   ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಒಂದಾಗಿರುವ ಅಬಕಾರಿ ಇಲಾಖೆ ಆದಾಯ ಗುರಿ ಹೆಚ್ಚಿಸಲು ತೆರಿಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ.

   ತೆರಿಗೆ ಸಂಗ್ರಹ ಗುರಿ

   ತೆರಿಗೆ ಸಂಗ್ರಹ ಗುರಿ

   2019ನೇ ಸಾಲಿನಲ್ಲಿ ಇಲಾಖೆ 16,187.95 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ.2020ನೇ ಸಾಲಿನಲ್ಲಿ 20,950 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ.

   2018ಕ್ಕೆ ಹೋಲಿಕೆ ಮಾಡಿದರೆ ಅಬಕಾರಿ ಇಲಾಖೆ ಲಾಭವನ್ನೇ ಗಳಿಸಿದೆ. ಬೆಳವಣಿಗೆ ದರ ಶೇ. 7.76 ರಷ್ಟಿದೆ. ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ನೀಡಿದ ಗುರಿಯನ್ನು ಸಾಧಿಸಲಾಗಿದೆ. 2020ಕ್ಕೆ ಇನ್ನೂ ಹೆಚ್ಚಿನ ಲಾಭಗಳಿಸುವ ಗುರಿ ಇದೆ

   ಒಂದು ಗಂಟೆಗಳ ಕಾಲ ವಿಸ್ತರಣೆ?

   ಒಂದು ಗಂಟೆಗಳ ಕಾಲ ವಿಸ್ತರಣೆ?

   ಮದ್ಯ ಮಾರಾಟದ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಣೆ ಮಾಡುವಂತೆ ಸಲಹೆ ಕೊಡಲಾಗಿದೆ. ಅಬಕಾರಿ ಇಲಾಖೆ ಈ ಸಲಹೆಗೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು. ಬೆಂಗಳೂರು ನಗರದಲ್ಲಿ ಮಾತ್ರ ವಿಸ್ತರಣೆ ಮಾಡುವಂತೆಯೂ ತಿಳಿಸಲಾಗಿದ್ದು, ಇದರ ಸಾಧ್ಯಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.

   ಕೃಷಿ ಬಜೆಟ್ ಬಳಿಕ ಇದೀಗ, 'ಮಕ್ಕಳ ಬಜೆಟ್' ಮಂಡನೆಗೆ ಬಿಎಸ್‌ವೈ ಸಿದ್ಧತೆ

   ಬೆಂಗಳೂರು ನಗರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ರಾತ್ರಿ 12.30ರ ತನಕ ಮದ್ಯ ಮಾರಾಟಕ್ಕೆ ಅವಕಾಶವಿದೆ. ಉಳಿದ ದಿನಗಳಲ್ಲಿಯೂ ಸಮಯವನ್ನು ವಿಸ್ತರಣೆ ಮಾಡಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂಬುದು ಸಲಹೆಯಾಗಿದೆ.

   ದರ ಹೆಚ್ಚಳ, ಅಕ್ರಮ ಮಾರಾಟ ತಡೆ ಗುರಿ

   ದರ ಹೆಚ್ಚಳ, ಅಕ್ರಮ ಮಾರಾಟ ತಡೆ ಗುರಿ

   ಅಬಕಾರಿ ಇಲಾಖೆ ಈ ಬಾರಿ ಮದ್ಯದ ಬೆಲೆ ಹೆಚ್ಚಳ ಮಾಡದೆ ಹೆಚ್ಚಿನ ಲಾಭಗಳಿಸಿದೆ. ದರ ಹೆಚ್ಚಳ, ಅಕ್ರಮ ಮಾರಾಟ ತಡೆ, ಆನ್‌ಲೈನ್ ಮೂಲಕ ಲೈಸೆನ್ಸ್ ನವೀಕರಣ ಮುಂತಾದ ಕ್ರಮಗಳನ್ನು ಆದಾಯ ಹೆಚ್ಚಳಕ್ಕಾಗಿ ಇಲಾಖೆ ಕೈಗೊಳ್ಳಲಿದೆ.

   ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಸಿ ಎಲ್ 2 (ಎಂ ಆರ್ ಪಿ ಔಟ್‍ಲೆಟ್ ಮತ್ತು ವೈನ್‍ಸ್ಟೋರ್ಸ್) ಗಳಲ್ಲಿ ರಾತ್ರಿ 10-30 ಗಂಟೆಯವರೆಗೆ ಮತ್ತು ಸಿ ಎಲ್ 9 ( ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ) ಗಳಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1-00 ಗಂಟೆಯವರೆಗೆ ಹಾಗೂ ಉಳಿದೆಡೆಗಳಲ್ಲಿ ರಾತ್ರಿ 11-30 ಗಂಟೆಯವರೆಗೆ ಮದ್ಯಪೂರೈಕೆಗೆ ಅವಕಾಶವಿದೆ ಎಂದು ಎಚ್ ನಾಗೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಎಂಎಸ್ಐಎಲ್ ಮಳಿಗೆ ವಿಸ್ತರಣೆ

   ಎಂಎಸ್ಐಎಲ್ ಮಳಿಗೆ ವಿಸ್ತರಣೆ

   ರಾಜ್ಯದೆಲ್ಲೆಡೆ ಸದ್ಯ 765 ಎಂಎಸ್ಐಎಲ್ ಮಳಿಗೆಗಳಿದ್ದು, ಮತ್ತೆ 408 ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಎಲ್ಲಿ ಬೇಡಿಕೆ ಇದಿಯೋ ಅಂತಹ ಕಡೆ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು, ಬೆಂಗಳೂರು ನಗರ ಹೊರತುಪಡಿಸಿದರೆ, ಉಳಿದ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಡಿಮೆ ದರದ ಮದ್ಯವೇ ಹೆಚ್ಚು ಮಾರಾಟವಾಗಿ ರಾಜ್ಯ ಬೊಕ್ಕಸಕ್ಕೆ ಆದಾಯ ತರುತ್ತಿದೆ ಎಂದರು.

   ತಾಂಡಗಳ ಅಭಿವೃದ್ಧಿಗಾಗಿ 100 ಕೋಟಿ ಮೀಸಲು: ಸಿಎಂ

   "ಸಂಚಾರಿ ವೈನ್ ಶಾಪ್‌ಗಳನ್ನು ಆರಂಭವಿಲ್ಲ

   "ಸಂಚಾರಿ ವೈನ್ ಶಾಪ್‌ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಎಲ್ಲೆಲ್ಲಿ ವೈನ್ ಶಾಪ್‌ಗಳು ಲಭ್ಯವಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್‌ಗಳನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯ ಬರಲಿದೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್‌ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ'' ಎಂದು ಹೇಳಿಕೆ ನೀಡಿ ನಂತರ ಯೂ ಟರ್ನ್ ಹೊಡೆದಿದ್ದರು.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Liquor to get more expensive in Karnataka post Karnataka Budget 2020. New price list will be implemented from April 01, 2020 said excise department sources.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X