ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಮದ್ಯ ಮಾರಾಟ ಆರಂಭ; ಎಣ್ಣೆ ಎಫೆಕ್ಟ್ ಯಾವ ಜಿಲ್ಲೆಯಲ್ಲಿ ಹೇಗಿದೆ?

By Lekhaka
|
Google Oneindia Kannada News

ರಾಜ್ಯದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. 48 ದಿನಗಳ ನಂತರ ರಾಜ್ಯಾದ್ಯಂತ ಮದ್ಯದಂಗಡಿಗಳು ತೆರೆಯುತ್ತಿದ್ದು, ಇಂದು ಬೆಳಿಗ್ಗೆಯಿಂದ ವೈನ್ ಸ್ಟೋರ್ ಗಳು, ಎಂಆರ್ ಪಿ ಮದ್ಯದಂಗಡಿಗಳು ಆರಂಭವಾಗಿವೆ. ಬೆಳಿಗ್ಗಿನಿಂದಲೇ ಮದ್ಯದಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಜನ ನಿಂತಿದ್ದಾರೆ. ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದ್ದು, ಲಾಕ್‌ಡೌನ್ ನಿಯಮಗಳನ್ನು ಪಾಲಿಸುವುದರೊಂದಿಗೆ ಮದ್ಯ ಖರೀದಿಗೆ ಅವಕಾಶ ಮಾಡಲಾಗಿದೆ.

ಈ ನಡುವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದಲೇ ಜನ ಮದ್ಯ ಖರೀದಿಗೆ ಮುಂದಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಮದ್ಯ ಮಾರಾಟ ವಿವಿಧ ಜಿಲ್ಲೆಗಳಲ್ಲಿ ಹೇಗಿದೆ? ಜನ ಹೇಗೆ ಖರೀದಿಸುತ್ತಿದ್ದಾರೆ? ಇಲ್ಲಿದೆ ಈ ಕುರಿತ ಜಿಲ್ಲಾ ವರದಿ...

 ಚಿಕ್ಕಮಗಳೂರಿನಲ್ಲಿ ಎಣ್ಣೆ ಎಫೆಕ್ಟ್ ಆರಂಭ

ಚಿಕ್ಕಮಗಳೂರಿನಲ್ಲಿ ಎಣ್ಣೆ ಎಫೆಕ್ಟ್ ಆರಂಭ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನ ವೈನ್ ಶಾಪ್ ಮುಂದೆ ಬೆಳಿಗ್ಗೆ ಆರು ಗಂಟೆಯಿಂದಲೇ ಮದ್ಯಪ್ರಿಯರು ಕಾದು ಕುಳಿತಿದ್ದು ಕಂಡುಬಂತು.‌ ಆರು ಗಂಟೆಯಿಂದಲೇ ಸುಮಾರು‌ ಐವತ್ತಕ್ಕೂ ಹೆಚ್ಚು ಜನರು ಸಾಲಿನಲ್ಲಿ ಕಾದು ಕುಳಿತಿದ್ದರು. ಮತ್ತೊಂದು ಕಡೆ ಮಹಿಳೆಯರು ಸಹ ಎಣ್ಣೆಗಾಗಿ ಸರದಿ ಸಾಲಿನಲ್ಲಿ ನಿಂತು‌ ಎಣ್ಣೆ ಕೊಂಡುಕೊಂಡರು.‌ ಚಿಕ್ಕಮಗಳೂರು ನಗರದ ಅಶ್ವಮೇಧ ವೈನ್ ಶಾಪ್ ಬಳಿ ಗಂಡಸರು ನಿಂತಿದ್ದ ಕ್ಯೂನಲ್ಲಿಯೇ ಮಹಿಳೆಯರು ಸಹ ನಿಂತು‌ ಎಣ್ಣೆ ಖರೀದಿಸಿದರು.

ರಾಜ್ಯಾದ್ಯಂತ ಮದ್ಯ ಮಾರಾಟ ಆರಂಭ: ಕುಡುಕರ ಸಂಭ್ರಮ

ಅಷ್ಟೇ ಅಲ್ಲ, ಮದ್ಯದಂಗಡಿ ತೆರೆದು ಇನ್ನು ಗಂಟೆಗಳು ಕಳೆದಿರುವಾಗಲೇ ಎಣ್ಣೆ ಹೊಡೆದು ವ್ಯಕ್ತಿ ಫುಲ್ ಟೈಟ್ ಆಗಿ ರಸ್ತೆಬದಿ ಬಿದ್ದಿದ್ದ ದೃಶ್ಯ ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕಂಡುಬಂತು.

 ಕೋಟೆನಾಡಲ್ಲಿ ಎಣ್ಣೆ ಖರೀದಿ ಜೋರು

ಕೋಟೆನಾಡಲ್ಲಿ ಎಣ್ಣೆ ಖರೀದಿ ಜೋರು

ಚಿತ್ರದುರ್ಗದಲ್ಲಿ ಮದ್ಯಪ್ರಿಯರು ಮದ್ಯದಂಗಡಿ ಮುಂದೆ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಎಣ್ಣೆ ಸಿಗದೆ ಕಂಗೆಟ್ಟಿದ್ದ ಮದ್ಯ ಪ್ರಿಯರು ಬೆಳ್ಳಂಬೆಳಿಗ್ಗೆ ಬಾರ್ ಮುಂಭಾಗದಲ್ಲಿ ಕ್ಯೂನಲ್ಲಿ ನಿಂತಿದ್ದಾರೆ. ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು, ಚಳ್ಳಕೆರೆ ತಾಲೂಕಿನ ಅಂಗಡಿ ಮುಂಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಕಾ ಕ್ರಮವಾಗಿ ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

 ಮೈಸೂರಿನಲ್ಲಿ ಮದ್ಯಕ್ಕಾಗಿ ಇನ್ನೂರು ಮೀಟರ್ ಗೂ ಉದ್ದದ ಸಾಲು

ಮೈಸೂರಿನಲ್ಲಿ ಮದ್ಯಕ್ಕಾಗಿ ಇನ್ನೂರು ಮೀಟರ್ ಗೂ ಉದ್ದದ ಸಾಲು

ಮೈಸೂರಿನಲ್ಲಿ ಮದ್ಯಪ್ರಿಯರು ಎಣ್ಣೆಗಾಗಿ ಉದ್ದದ ಸಾಲಿನಲ್ಲಿ ನಿಂತ ದೃಶ್ಯ ಇಂದು ಬೆಳಿಗ್ಗೆ ಕಂಡುಬಂದಿತು. ಮೈಸೂರಿನ ಹೂಟಗಳ್ಳಿಯ ವೈನ್ ಶಾಪ್ ಮುಂದೆ ಇನ್ನೂರು ಮೀಟರ್ ಗೂ ಉದ್ದದ ಸಾಲು ಕಂಡುಬಂದಿತು. ಬಿಸಿಲನ್ನೂ ಲೆಕ್ಕಿಸದೆ ಮದ್ಯಕ್ಕಾಗಿ ವೈನ್ ಶಾಪ್ ಪಕ್ಕದ‌ ಮೈದಾನದವರೆಗೂ ಜನ ನಿಂತಿದ್ದು ಕಂಡುಬಂದಿತು.

ಜಿಲ್ಲೆಯಲ್ಲಿ ಒಟ್ಟು ಲೈಸನ್ಸ್‌ ಪಡೆದಿರುವ 301 ಮಂದ್ಯದ ಅಂಗಡಿಗಳು ತೆರೆಯಲಿವೆ. ಮದ್ಯ ಖರೀದಿಯಲ್ಲಿ ಜನದಟ್ಟಣೆ ನಿಯಂತ್ರಿಸಲು ಹಾಗೂ ಅಂತರ ಕಾಯ್ದುಕೊಳ್ಳಲು ಭಾನುವಾರವೇ ಬಹುತೇಕ ಮದ್ಯದಂಗಡಿಗಳ ಮುಂದೆ ಮಾರ್ಕಿಂಗ್ ಮಾಡಲಾಗಿತ್ತು. ವೈನ್ ಸ್ಟೋರ್ಸ್ ಹಾಗೂ ಎಂಎಸ್ ಐ ಎಲ್ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟ ನಡೆಯಲಿದೆ.

ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?

 ಉಡುಪಿಯಲ್ಲೂ ಮದ್ಯ ಖರೀದಿಗೆ ಜನರ ದುಂಬಾಲು

ಉಡುಪಿಯಲ್ಲೂ ಮದ್ಯ ಖರೀದಿಗೆ ಜನರ ದುಂಬಾಲು

ಉಡುಪಿ ಜಿಲ್ಲೆಯಲ್ಲಿ ಮದ್ಯ ಕೊಂಡುಕೊಳ್ಳಲು ಬೆಳಿಗ್ಗಿನಿಂದಲೇ ಮದ್ಯಪ್ರಿಯರು ಕಾದು ನಿಂತಿದ್ದರು. ಈ ಸಂದರ್ಭದಲ್ಲಿ ಕೆಲವೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ‌ ಕೈಗೊಳ್ಳಲಾಗುತ್ತಿದೆ. ಇನ್ನು ಉಡುಪಿಯ ಹಲವೆಡೆಗಳಲ್ಲಿ ಭದ್ರತೆ ಮತ್ತು ಕಾನೂನು ಪಾಲನೆ ದೃಷ್ಟಿಯಿಂದ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ವೈನ್ ಶಾಪ್ ಗಳ ಮುಂದೆ ಮೀಟರ್ ಅಂತರದಲ್ಲಿ ಸರ್ಕಲ್ ಮಾರ್ಕ್ ಹಾಕಲಾಗಿದೆ. ಗ್ರಾಹಕರು ಅದರಲ್ಲಿ ನಿಂತು ಮದ್ಯ ಖರೀದಿಸಬೇಕಾಗಿದೆ.

ರಾಮನಗರದಲ್ಲಿ ಮದ್ಯದಂಗಡಿಗೆ ಪೂಜೆ

ರಾಮನಗರದಲ್ಲಿ ಮದ್ಯದಂಗಡಿಗೆ ಪೂಜೆ

ಲಾಕ್ ಡೌನ್ ಸಡಿಲಿಕೆಯಿಂದ ಇಂದಿನಿಂದ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದ್ದು, ರಾಮನಗರ ಜಿಲ್ಲೆಯಾದ್ಯಂತ ಮದ್ಯದ ಅಂಗಡಿಗಳನ್ನು ತೆರೆಯಲಾಗಿದೆ. ಎಂಎಸ್ ಐಲ್ ಹಾಗೂ ಎಂಆರ್ ಪಿ ಶಾಪ್ ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಇಂದು ಬೆಳಿಗ್ಗೆ ಅಂಗಡಿಗಳನ್ನು ತೆರೆಯುವ ಮುನ್ನ ಮದ್ಯ ಪ್ರಿಯರು ಶಾಪ್ ಗಳಿಗೆ ಪೂಜೆ ಮಾಡಿದ್ದು ಕಂಡುಬಂದಿತು. ಕರ್ಪೂರ ಹಚ್ಚಿ, ಊದಿನಕಡ್ಡಿ ಹಚ್ಚಿ ಅಂಗಡಿಗಳಿಗೆ ಪೂಜೆ ಮಾಡಿ ತೆರೆಯಲಾಯಿತು. ನಂತರ ಜನರು ಮದ್ಯ ಖರೀದಿಗೆ ಸಾಲುಗಟ್ಟಿ ನಿಂತರು.

ದಾವಣಗೆರೆ ನಗರದಲ್ಲಿ ಮಾತ್ರ ಮದ್ಯ ಮಾರಾಟ ಇಲ್ಲ

ದಾವಣಗೆರೆ ನಗರದಲ್ಲಿ ಮಾತ್ರ ಮದ್ಯ ಮಾರಾಟ ಇಲ್ಲ

ದಾವಣಗೆರೆ ನಗರದಲ್ಲಿ ಮದ್ಯದ ಅಂಗಡಿಗಳು ತೆರೆಯುತ್ತವೆ ಎಂದು ಕಾದು ಕುಳಿತಿದ್ದ ಮದ್ಯಪ್ರಿಯರಿಗೆ ಆಘಾತವಾಗಿದೆ. ದಾವಣಗೆರೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯುವ ಹಾಗೇ ಇಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಗ್ರಾಮಾಂತರ ಸೇರಿದಂತೆ ಉಳಿದ ತಾಲ್ಲೂಕುಗಳಲ್ಲಿ ಮದ್ಯ ಮಾರಾಟ ಇದೆ. 21 ಪಾಸಿಟಿವ್ ಕೇಸ್ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿ ಮಾತ್ರ ಮದ್ಯ ಮಾರಾಟ ಇಲ್ಲ. ಸೋಂಕಿನ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಈ ಕ್ರಮ ವಹಿಸಿದ್ದು, ದಾವಣಗೆರೆ ನಗರದಲ್ಲಿರುವ 100ಕ್ಕೂ ಹೆಚ್ಚು ಮದ್ಯದಂಗಡಿಗಳಲ್ಲಿ ಇಂದು ಎಣ್ಣೆ ಸಿಗುವುದಿಲ್ಲ ಎಂದು ತಿಳಿಸಿದೆ.

English summary
Liquor shops opened statewide from today. Here is a report from different districts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X