ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ಆನ್‌ಲೈನ್‌: ಭ್ರಷ್ಟಾಚಾರಕ್ಕೆ ಬಿತ್ತು ಬ್ರೇಕ್‌

By Nayana
|
Google Oneindia Kannada News

ಬೆಂಗಳೂರು, ಜೂನ್‌ 30: ಆನ್‌ಲೈನ್‌ನಲ್ಲಿ ಬಾರ್‌ ಲೈಸೆನ್ಸ್‌ ನವೀಕರಣಕ್ಕೆ ರಾಜ್ಯಾದ್ಯಂತ ಚಾಲನೆ ದೊರೆತಿದೆ. ಪ್ರತಿ ವರ್ಷ ಜುಲೈನಲ್ಲಿ ನಡೆಯುವ ಬಾರ್‌ ಲೈಸೆನ್ಸ್‌ ನವೀಕರಣ ವೇಳೆ 2 ಲಕ್ಷ ರೂ,ವರೆಗೆ ಲಂಚ ಕೊಡಬೇಕು ಎಂದು ಬಾರ್‌ ಮಾಲೀಕರು ಇಲಾಖೆಗೆ ದೂರು ನೀಡಿದ್ದರು.

ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಅಬಕಾರಿ ಇಲಾಖೆ ಆನ್‌ಲೈನ್‌ ಬಾರ್‌ ಲೈಸೆನ್ಸ್‌ ನವೀಕರಣ ಜಾರಿಗೆ ತಂದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಸವರಾಜು ಉಳ್ಳಗಡ್ಡಿ ಮೊದಲ ಡಿಜಿಟಲ್‌ ಲೈಸೆನ್ಸ್‌ ನವೀಕರಣ ಮಾಡಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಒಟ್ಟು 10,240 ಮದ್ಯದಂಗಡಿಗಳಿದ್ದವು, ಇಲಾಖೆಗೆ ಅಂದಾಜು 580 ಕೋಟಿ ರೂ. ಆದಾಯ ಬರುತ್ತದೆ.

ಸಿಎಲ್‌-9, ಮಹಾನಗರ ಪಾಲೀಕೆ 5 ಲಕ್ಷ, ಮನಗರ ಪಾಲಿಕೆ 6 ಲಕ್ಷ, ಪುರಸಭೆ 5ಲಕ್ಷ, ಪಟ್ಟಣ ಪಂಚಾಯ್ತಿ 4 ಲಕ್ಷ ರೂ. ನೀಡಬೇಕು, ಸಿಎಲ್‌-2, ಮಹಾನಗರ ಪಾಲಿಕೆ 6 ಲಕ್ಷ, ನಗರ ಪಾಲಿಕೆ 5 ಲಕ್ಷ, ಪುರಸಭೆ 4.5 ಲಕ್ಷ, ಪಟ್ಟಣ ಪಂಚಾಯ್ತಿ 4 ಲಕ್ಷ ರೂ. ನೀಡಬೇಕು .

ಬೆಂಗಳೂರು: ಲೈವ್‌ಬ್ಯಾಂಡ್‌ ಮೇಲೆ ಪೊಲೀಸರ ಹದ್ದಿನ ಕಣ್ಣು ಬೆಂಗಳೂರು: ಲೈವ್‌ಬ್ಯಾಂಡ್‌ ಮೇಲೆ ಪೊಲೀಸರ ಹದ್ದಿನ ಕಣ್ಣು

ಸಿಎಲ್‌ 4, ಮಹಾನಗರ ಪಾಲಿಕೆ 6.5 ಲಕ್ಷ, ನಗರ ಪಾಲಿಕೆ 5 ಲಕ್ಷ ಪುರಸಭೆ 4 ಲಕ್ಷ, ಪಟ್ಟಣ ಪಂಚಾಯ್ತಿ 2 ಲಕ್ಷ ಪಾವತಿಸಬೇಕು.ಸಿಎಲ್‌ 11 ಸಿ, ಮಹಾನಗರ ಪಾಲಿಕೆ 4, ಸಿಎಲ್‌-6ಎ ಮಹಾನಗರ ಪಾಲಿಕೆ, 7.5 ಲಕ್ಷ, ನಗರ ಪಾಲಿಕೆ 6 ಲಕ್ಷ ರೂ, ಸಿಎಲ್‌ 7, ಮಹಾನಗರ ಪಾಲಿಕೆ 7 ಲಕ್ಷ ರೂ.., ನಗರ ಪಾಲಿಕೆ 6 ಲಕ್ಷ ರೂ. ನೀಡಬೇಕಾಗಿದೆ.

ಬಾರ್‌ ಲೈಸೆನ್ಸ್‌ ಮರು ನವೀಕರಣ

ಬಾರ್‌ ಲೈಸೆನ್ಸ್‌ ಮರು ನವೀಕರಣ

ಮೊದಲ ದಿನದಲ್ಲೇ 100 ಬಾರ್‌ ಲೈಸೆನ್ಸ್‌ಗಳನ್ನು ನವೀಕರಣ ಮಾಡಲಾಯಿತು. ಮದ್ಯದಂಗಡಿಯ ಮತ್ತು ಮಾಲೀಕರ ಹೆಸರು, ವಿಳಾಸ ಮತ್ತು ಶುಲ್ಕ ಸೇರಿ ಇನ್ನಿತರೆ ಮಾಹಿತಿ ಡಿಜಿಟಲ್‌ ಲೈಸೆನ್ಸ್‌ ಇರುತ್ತದೆ.

ಬಾರ್‌ ಲೈಸೆನ್ಸ್‌ ಡಿಜಿಟಲ್‌ ನವೀಕರಣ ಹೇಗೆ

ಬಾರ್‌ ಲೈಸೆನ್ಸ್‌ ಡಿಜಿಟಲ್‌ ನವೀಕರಣ ಹೇಗೆ

ಬಾರ್‌ ನವೀಕರಣಕ್ಕಾಗಿ ಮಾಲೀಕರು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಬ್ಯಾಂಕ್‌ನಲ್ಲಿ ಪಾವತಿಸಿರುವ ನವೀಕರಣ ಶುಲ್ಕದ ರಸೀದಿ ಅಪ್‌ಲೋಡ್‌ ಮಾಡಿದರೆ ಅಬಕಾರಿ ನಿರೀಕ್ಷಕರು ಅರ್ಜಿಯನ್ನು ಪರಿಶೀಲಿಸಿ ಜಿಲ್ಲಾ ಉಪ ಆಯುಕ್ತರಿಗೆ ಕಳುಹಿಸುತ್ತಾರೆ. ಅಂತಿಮವಾಗಿ ಜಿಲ್ಲಾಧಿಕಾರಿ ಡಿಜಿಟಲ್‌ ಸಹಿ ಹಾಕಿ ನವೀಕರಣ ಮಾಡುತ್ತಾರೆ. ಈ ಪ್ರಕ್ರಿಯೆಯಿಂದ ಲೈಸೆನ್ಸ್‌ ನವೀಕರಣ ಬೇಗ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.

ಯಾವ ಲೈಸೆನ್ಸ್‌ಗೆ ಎಷ್ಟು ಶುಲ್ಕ ನೀಡಬೇಕು

ಯಾವ ಲೈಸೆನ್ಸ್‌ಗೆ ಎಷ್ಟು ಶುಲ್ಕ ನೀಡಬೇಕು

ಸಿಎಲ್‌-9, ಮಹಾನಗರ ಪಾಲೀಕೆ 5 ಲಕ್ಷ, ಮನಗರ ಪಾಲಿಕೆ 6 ಲಕ್ಷ, ಪುರಸಭೆ 5ಲಕ್ಷ, ಪಟ್ಟಣ ಪಂಚಾಯ್ತಿ 4 ಲಕ್ಷ ರೂ. ನೀಡಬೇಕು, ಸಿಎಲ್‌-2, ಮಹಾನಗರ ಪಾಲಿಕೆ 6 ಲಕ್ಷ, ನಗರ ಪಾಲಿಕೆ 5 ಲಕ್ಷ, ಪುರಸಭೆ 4.5 ಲಕ್ಷ, ಪಟ್ಟಣ ಪಂಚಾಯ್ತಿ 4 ಲಕ್ಷ ರೂ. ನೀಡಬೇಕು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡಿಜಿಟಲ್‌ ಬಾರ್ ಲೈಸೆನ್ಸ್‌

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಡಿಜಿಟಲ್‌ ಬಾರ್ ಲೈಸೆನ್ಸ್‌

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ವರ್ಷದಿಂದಲೇ ಆನ್‌ಲೈನ್‌ ಬಾರ್‌ ಲೈಸೆನ್ಸ್‌ ಪ್ರಕ್ರಿಯೆ ಜಾರಿಗೆ ತರಲಾಗಿದೆ, ಬಾರ್‌ ಮಾಲೀಕರು ನವೀಕರಣ ಮಾಡಿಸಿಕೊಳ್ಳದಿದ್ದರೆ ಲೈಸೆನ್ಸ್‌ಗಳನ್ನು ರದ್ದು ಮಾಡಲಾಗುತ್ತದೆ, ಎಂದು ಅಪರ ಅಬಕಾರಿ ಆಯುಕ್ತ ಎಸ್‌.ಎಲ್‌. ರಾಜೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

English summary
To curb corruption in renewal of liquor shops in the state has gone online from this excise hear. Earlier allegations were madw that there was huge corruption in this manual renewal process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X