ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಾರಿ ಚುನಾವಣೆಗೆ ರಂಗೇರದ ನಶೆ:ಎಣ್ಣೆಗೆ ಏಟು, 499 ಕೋಟಿ ನಷ್ಟ

By Nayana
|
Google Oneindia Kannada News

ಬೆಂಗಳೂರು, ಮೇ 17: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಅಕ್ರಮ ಮದ್ಯ ಮಾರಾಟ ತಡೆಗೆ ಚುನಾವಣಾ ಆಯೋಗ ಬಿಗಿ ಕ್ರಮ ಕೈಗೊಂಡಿದ್ದರಿಂದ ಮದ್ಯ ವಹಿವಾಟು ಕುಸಿತ ಕಂಡಿದೆ.

2013 ರ ಚುನಾವಣೆ ಸಂದರ್ಭದಲ್ಲಿ ಮಧ್ಯ ವಹಿವಾಟು ತುಂಬಾ ಜೋರಾಗಿತ್ತು. ಆಗ ಅಬಕಾರಿ ಇಲಾಖೆಗೆ ಬರೋಬ್ಬರಿ 888.2 ಕೋಟಿ ರೂ. ವಹಿವಾಟು ಆಗಿತ್ತು. ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 389.92 ಕೋಟಿ ರೂ. ವಹಿವಾಟು ನಡೆದಿದ್ದು, ಅಂದಾಜು 499 ಕೋಟಿ ರೂ. ಆದಾಯ ನಷ್ಟವಾಗಿದೆ.

ಚುನಾವಣೆ: ಮದ್ಯ ಮಾರಾಟ ನಿಷೇಧ: ಮದ್ಯ ಸಂಗ್ರಹಕ್ಕೆ ಮುಂದಾದ ಗ್ರಾಹಕರುಚುನಾವಣೆ: ಮದ್ಯ ಮಾರಾಟ ನಿಷೇಧ: ಮದ್ಯ ಸಂಗ್ರಹಕ್ಕೆ ಮುಂದಾದ ಗ್ರಾಹಕರು

2017ರ ಮಾರ್ಚ್, ಏಪ್ರಿಲ್‌ ಮತ್ತು ಮೇ ತಿಂಗಳ ಮದ್ಯದ ವಹಿವಾಟಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ವಹಿವಾಟಿನಲ್ಲಿ ಶೇ.15.46ರಷ್ಟು ತಗ್ಗಿದೆ. ಈ ನಷ್ಟ ತುಂಬಿಕೊಳ್ಳಲು ಇಲಾಖೆ ಪರದಾಡುತ್ತಿದೆ. ಈ ಬಾರಿ ವಿಧಾನಸಭಾ ಚುನಾವಣೆಗೆ ಬೇಗ ನೀತಿ ಸಂಹಿತೆ ಘೋಷಿಸಿದ್ದರಿಂದ ಅಕ್ರಮ ಎಣ್ಣೆ ಸಾಗಾಟ ತಡೆಗೆ 400 ಚೆಕ್‌ಪೋಸ್ಟ್‌ ನಿರ್ಮಿಸಿ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು.

Liquor sale dip during assembly poll in state

ಅಲ್ಲದೆ, ನೀತಿ ಸಂಹಿತೆ ಮುನ್ನ ರಾಜಕಾರಣಿಗಳು ಹೊರ ರಾಜ್ಯಗಳಿಂದ ಅಕ್ರಮ ಮಧ್ಯ ತರಿಸಿ ಸಂಗ್ರಹಿಸಿಟ್ಟಿದ್ದರಿಂದ ರಾಜ್ಯ ಮದ್ಯದಂಗಡಿಗಳಲ್ಲಿ ವಹಿವಾಟು ಕುಸಿದಿತ್ತು.870 ಲೈಸನ್ಸ್‌ ಅಮಾನತು: ನೀತಿ ಸಂಹಿತೆ ಜಾರಿ ವೇಳೆ ಪರವಾನಗಿ ಸುರುಪಯೋಗ ಆಧಾರದ ಮೇಲೆ ಬೆಂಗಳೂರಿನಲ್ಲಿ ಬರೋಬ್ಬರಿ 375, ಹಾಸನ 51, ಉಡುಪಿ 42, ಚಿಕ್ಕಬಳ್ಳಾಪುರ 38, ಬೆಂ ಗ್ರಾಮಾಂತರ ಮತ್ತು ಬೀದರ್‌ನಲ್ಲಿ ತಲಾ 36 ಸೇರಿ ಒಟ್ಟು 870 ಲೈಸೆನ್ಸ್‌ ಅಮಾನತು ಮಾಡಲಾಗಿದೆ. ಅಲ್ಲದೆ ಈ ಪರವಾನಗಿಗಳನ್ನು ರದ್ದು ಮಾಡುವ ಸಾಧ್ಯತೆ ಇದೆ.

English summary
There was drastic reduce in sale of liquor during state assembly election. As per records of the department, ₹888 of liquor was sold in 2013 elections and this time it was only Rs.389 crore only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X