ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕರಲ್ಲ ಆರ್ಥಿಕತೆಯ ಸುಧಾರಕರು ಎಂಬುದು ಸಾಬೀತು!

|
Google Oneindia Kannada News

ಬೆಂಗಳೂರು, ಜುಲೈ04: ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮದ್ಯ ಮಾರಾಟ ಕಿಕ್ ಏರಿಸುತ್ತಿದೆ. ಆರ್ಥಿಕ ಹೊಡೆತ, ಬೆಲೆ ಏರಿಕೆ ಸಂಕಷ್ಟದ ನಡುವೆ ರಾಜ್ಯದಲ್ಲಿ ಎಣ್ಣೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. 23 ಕೋಟಿ ಲೀಟರ್ ಮದ್ಯ ಮಾರಾಟವಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 7500 ಕೋಟಿಗೂ ಅಧಿಕ ಆದಾಯ ಬಂದಿದೆ.

ಜನರ ಹಣವೇ ಇಲ್ಲ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಜನ ಜೀವನ ನಡೆಸೋದಕ್ಕೂ ಪರದಾಟ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಜನ ಮಾತ್ರ ರಾಜ್ಯದ ಬೊಕ್ಕಸಕ್ಕೆ ಭರ್ಜರಿಯಾದ ಉಡುಗೊರೆಯನ್ನೇ ನೀಡುತ್ತಿದ್ದಾರೆ. ಮದ್ಯವನ್ನು ಖರೀದಿಸಿ ಬೊಕ್ಕಸಕ್ಕೆ ಕೊಡುಗೈ ದಾನಿಗಳಂತೆ ಕೋಟಿ ಕೋಟಿಯನ್ನು ಭರ್ತಿ ಮಾಡುತ್ತಿದ್ದಾರೆ.

ಎಣ್ಣೆಗೂ ನಮ್ಮ ಜನಕ್ಕೂ ಅವಿನಾಭಾವ ಸಂಬಂಧ ಬೆಸೆದಿರೋದು ಮೂರು ತಿಂಗಳ ವಹಿವಾಟನ್ನು ಗಮನಿಸಿದಾಗ ತಿಳಿದು ಬರುತ್ತದೆ. ಕೋವಿಡ್ ಸಂದರ್ಭದಲ್ಲಿ ಮದ್ಯ ಪ್ರಿಯರು ತಮ್ಮನ್ನು ಕುಡುಕರು ಎಂದು ಕರೆಯಬೇಡಿ. ಆರ್ಥಿಕತೆಯ ಸುಧಾರಕರು ಎಂದು ಕರೆಯಿರಿ ಎಂಬ ಮಾತು ಚಾಲ್ತಿಗೆ ಬಂದಿತ್ತು. ಇದೀಗ ಆರ್ಥಿಕತೆಯ ಚೇತರಿಕೆಗೆ ಮದ್ಯಪ್ರಿಯರು ಸಖತ್ ಸಹಕಾರವನ್ನು ನೀಡುತ್ತಿದ್ದಾರೆ.

ಬೊಕ್ಕಸಕ್ಕೆ 7500 ಕೋಟಿಗೂ ಅಧಿಕ ಆದಾಯ

ಬೊಕ್ಕಸಕ್ಕೆ 7500 ಕೋಟಿಗೂ ಅಧಿಕ ಆದಾಯ

ಆರ್ಥಿಕ ಹೊಡೆತ, ಬೆಲೆ ಏರಿಕೆ ಸಂಕಷ್ಟದ ನಡುವೆ ರಾಜ್ಯದಲ್ಲಿ ಭರ್ಜರಿ ಎಣ್ಣೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. 23 ಕೋಟಿ ಲೀಟರ್ ಮದ್ಯ ಮಾರಾಟವಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 7500 ಕೋಟಿಗೂ ಅಧಿಕ ಆದಾಯ ಬಂದಿದೆ. ಕಳೆದ ಏಪ್ರಿಲ್ ನಿಂದ ಜೂನ್ ವರೆಗೆ 14.79 ಕೋಟಿ ಲೀಟರ್ ಐಎಂಎಲ್ 8.14 ಕೋಟಿ ಲೀಟರ್ ಬಿಯರ್ ಮಾರಾಟವಾಗಿದೆ.

29,000 ಕೋಟಿ ರಾಜಸ್ವ ಸಂಗ್ರಹದ ಗುರಿ

29,000 ಕೋಟಿ ರಾಜಸ್ವ ಸಂಗ್ರಹದ ಗುರಿ

ಬಿಯರ್ ಮಾರಾಟದಲ್ಲಿ ಶೇ 130ರಷ್ಟು ಏರಿಕೆಯಾಗಿದೆ. ಜನರು ಬೇಸಿಗೆಯ ಸಮಯದಲ್ಲಿ ತಂಪಾಗಿರಲು ಬಿಯರ್ ಅನ್ನು ಹೆಚ್ಚು ಖರೀದಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಟದಲ್ಲಿ ಶೇ 26.12 ರಷ್ಟು ಬೆಳವಣಿಗೆಯಾಗಿರುವುದು ಕಂಡು ಬಂದಿದೆ. 2022-23ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಗೆ 29,000 ಕೋಟಿ ರೂ . ರಾಜಸ್ವ ಸಂಗ್ರಹದ ಗುರಿಯನ್ನು ನೀಡಿದೆ ಎಂದು ತಿಳಿದು ಬಂದಿದೆ.

ಕೋಟಿ ಕೋಟಿ ಲಾಭ ತಂದುಕೊಟ್ಟ ಗುಂಡುಪ್ರಿಯರು

ಕೋಟಿ ಕೋಟಿ ಲಾಭ ತಂದುಕೊಟ್ಟ ಗುಂಡುಪ್ರಿಯರು

2022-23 ನೇ ಸಾಲಿನಲ್ಲಿ ಕೇವಲ ಮೂರು ತಿಂಗಳಿನಲ್ಲಿ 7,574.22 ಕೋಟಿ ರೂ. ಆದಾಯ ಸಂಗ್ರಹಿಸಲಾಗಿದೆ. 2021-22ನೇ ಸಾಲಿಗೆ ಹೋಲಿಸಿದರೆ ರಾಜಸ್ವ ಸಂಗ್ರಹದಲ್ಲಿ 1,667.29 ಕೋಟಿ ರೂ.ನಷ್ಟು ಹೆಚ್ಚುವರಿಯಾಗಿ ಇಲಾಖೆಗೆ ಆದಾಯ ಹರಿದು ಬಂದಿದೆ. ಗುಂಡು ಪ್ರಿಯರು ಈ ಮೂರು ತಿಂಗಳಲ್ಲಿ 14.79 ಕೋಟಿ ಲೀಟರ್ ಅಂದರೆ 171.20 ಲಕ್ಷ ಬಾಕ್ಸ್ ನಷ್ಟು ಭಾರತೀಯ ತಯಾರಿಕ ಮದ್ಯ ಐಎಮ್ಎಲ್‌ ಅನ್ನು ಖರೀದಿಸಿದ್ದಾರೆ.

ಮೊದಲ ಅರ್ಧ ವರ್ಷದಲ್ಲೇ ಬೊಕ್ಕಸಕ್ಕೆ ಹಣ ಜಮೆ

ಮೊದಲ ಅರ್ಧ ವರ್ಷದಲ್ಲೇ ಬೊಕ್ಕಸಕ್ಕೆ ಹಣ ಜಮೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 17.01 ಲಕ್ಷದಷ್ಟು ಹೆಚ್ಚಿನ ಬಾಕ್ಸ್ ಮದ್ಯ ಈ ಬಾರಿ ಮಾರಾಟವಾಗಿದೆ. 2021 22 ನೇ ಸಾಲಿನ ""ಏಪ್ರಿಲ್ ನಿಂದ ಜೂನ್ ವರೆಗಿನ 3 ತಿಂಗಳಲ್ಲಿ 35.39 ಲಕ್ಷ ಲೀಟರ್ ಬಿಯರ್ ಅಂದರೆ 45.38 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಈ ವರ್ಷ 8.14 ಕೋಟಿ ಲೀಟರ್ ಬಿಯರ್ ಅಂದರೆ 104.42 ಲಕ್ಷ ಬಾಕ್ಸ್ ಮಾರಾಟ ಆಗಿದೆ. ಆ ಮೂಲಕ ಮೊದಲಾರ್ಧ ವರ್ಷದಲ್ಲೇ ಸರ್ಕಾರದ ಬೊಕ್ಕಸಕ್ಕೆ ಹಣ ಹರಿದು ಸೇರಿದೆ'' ಎಂದು ಬಾರ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್, ಉಪಾಧ್ಯಕ್ಷರಾಗಿರುವ ಕರುಣಾಕರ ಹೆಗ್ಡೆ ಮಾಹಿತಿಯನ್ನು ನೀಡಿದ್ದಾರೆ. ‌

English summary
Amid economic shock and price hike, liquor is being sold at a high sale in the state. In the last three months, liquor has been sold in a record amount in the state. More than 7500 crores of revenue has come to the government coffers from the sale of 23 crore liters of liquor, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X