ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BREAKING: ಮತ್ತೆ ಮದ್ಯ ಖರೀದಿಸಿ ಮಾರಾಟ ಮಾಡಲು ಅನುಮತಿ ಕೊಡಿ!

|
Google Oneindia Kannada News

ಬೆಂಗಳೂರು, ಮೇ 13: ಇಡೀ ದೇಶಾದ್ಯಂತ ಮದ್ಯದ ಅಂಗಡಿಗಳು ಒಂದೂವರೆ ತಿಂಗಳುಗಳ ಕಾಲ ಬಂದ್ ಆಗಿದ್ದು ಬಹುಶಃ ಇತಿಹಾಸದಲ್ಲಿ ಇದೇ ಮೊದಲ ಸಲವಿರಬೇಕು. ಹೀಗಾಗಿ ನಮಗೂ ಸಾಕಷ್ಟು ನಷ್ಠವಾಗಿದ್ದು, ಸರ್ಕಾರ ಸಹಾಯಕ್ಕೆ ಬರಬೇಕು ಎಂದು ಮದ್ಯ ಮಾರಾಟಗಾರರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಮದ್ಯ ಮಾರಾಟಗಾರರ ಒಕ್ಕೂಟದ ಪ್ರತಿನಿಧಿಗಳು, ಹಲವು ಬೇಡಿಕಗಳನ್ನು ಇಟ್ಟಿದ್ದಾರೆ.

ಸಿಎಂ ಭೇಟಿ ಬಳಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾವ್ ರಾಜ್ ಹೆಗ್ಡೆ ಅವರು ತಮ್ಮ ಬೇಡಿಕೆಗಳನ್ನು ಕುರಿತು ಮಾಹಿತಿ ಕೊಟ್ಟಿದ್ದಾರೆ. ಲಾಕ್‌ಡೌನ್‌ನಿಂದ ಈಗಾಗಲೇ ನಮಗೆ 8 ನೂರು ಕೋಟಿ ರೂ.ಗಳಿಂದ ಒಂದು ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಸಂಗ್ರಹವಿರುವ ಇರುವ ಮದ್ಯ ಮಾರಾಟ ಮಾಡಲು ಮಾತ್ರ ಸರ್ಕಾರ ಅವಕಾಶ ನೀಡಿದೆ.

ಮದ್ಯ ಮಾರಾಟ ಆರಂಭದ ಹಿಂದಿನ ದಂಧೆ ಏನು: ಮುಖ್ಯಮಂತ್ರಿಗಳಿಗೆ ಗಂಭೀರ ಪ್ರಶ್ನೆ ಮದ್ಯ ಮಾರಾಟ ಆರಂಭದ ಹಿಂದಿನ ದಂಧೆ ಏನು: ಮುಖ್ಯಮಂತ್ರಿಗಳಿಗೆ ಗಂಭೀರ ಪ್ರಶ್ನೆ

ಅದೇ ರೀತಿ ಮತ್ತೆ ಮದ್ಯ ಖರೀದಿಸಿ ಮಾರಾಟ ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು. ಜೊತೆಗೆ ಕನಿಷ್ಠ ಒಂದು ತಿಂಗಳ ಸನ್ನದು ಶುಲ್ಕವನ್ನು ಮುಂದಿನ ವರ್ಷದ ಶುಲ್ಕದೊಂದಿಗೆ ಹೊಂದಾಣಿಕೆ ಮಾಡಿಕೊಡಲು ಕೇಳಿದ್ದೇವೆ ಎಂದು ಹೆಗ್ಡೆ ಹೇಳಿದ್ದಾರೆ.

liquor dealers have requested that the government allow them to buy and sell liquor again

ಇದಲ್ಲದೆ ಈ ವರ್ಷ 2020-21 ನೇ ಸಾಲಿನ ಸನ್ನದು ಶುಲ್ಕವನ್ನು 4 ಕಂತುಗಳಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದೇವೆ. ಬಾರ್‌, ವೈನ್‌ಶಾಪ್ ಸೇರಿದಂತೆ ಮದ್ಯ ಮಾರಾಟದ ಅಂಗಡಿಗಳ ವಿದ್ಯುತ್ ಬಿಲ್ ಪಾವತಿ ಹಾಗೂ ರಿಯಾಯತಿ ಕೊಡುವ ಬಗ್ಗೆ ಕೆಪಿಸಿಟಿಸಿಎಲ್‌ಗೆ ಸರ್ಕಾರ ನಿರ್ದೇಶನ ಕೊಡಬೇಕೆಂದು ಮನವಿ ಮಾಡಿದ್ದೇವೆ.

ಬಳ್ಳಾರಿ-ಆಂಧ್ರ ಗಡಿ ಜಿಲ್ಲೆಯ ಮದ್ಯ ಪ್ರಿಯರಿಗೆ ಶಾಕ್ಬಳ್ಳಾರಿ-ಆಂಧ್ರ ಗಡಿ ಜಿಲ್ಲೆಯ ಮದ್ಯ ಪ್ರಿಯರಿಗೆ ಶಾಕ್

ಬ್ಯಾಂಕ್ ಸಾಲದ ಕಂತು ಮತ್ತು ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮನವಿ ಮಾಡಿದ್ದೇವೆ. ಮದ್ಯ ಮಾರಾಟಗಾರರಿಗೆ ಆಸ್ತಿ ತೆರಿಗೆ, ಕಟ್ಟಡ ತೆರಿಗೆಗಳಲ್ಲಿ ರಿಯಾಯಿತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಮತ್ತೆ ಮದ್ಯ ಖರೀದಿ ಮಾಡಲು ಅವಕಾಶ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಉಳಿದ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡುವುದಾಗಿಯೂ ತಿಳಿಸಿದ್ದಾರೆಂದು ಬಾರ್ ಅಸೋಸಿಯೇಷನ್ ಪ್ರಧಾನಕಾರ್ಯದರ್ಶಿ ಗೋವಿಂದ್ ರಾಜ್ ಹೆಗ್ಡೆ ಹೇಳಿಕೆ ಕೊಟ್ಟದ್ದಾರೆ.

English summary
Representatives of the Federation of Liquor Dealers, who met Yeddyurappa at CM Home Office Krishna, made several demands. The government only allowed the sale of stored liquor. Similarly, liquor dealers have requested that the government allow them to buy and sell liquor again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X