'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 23: 'ಲಿಂಗಾಯತ, ವೀರಶೈವ ಎಂಬ ಪ್ರತ್ಯೇಕ ಧರ್ಮವಿಲ್ಲ, ಬಸವ ತತ್ತ್ವದ ಆಧಾರದ ಮೇಲೆ ಎಲ್ಲರನ್ನು ಲಿಂಗಾಯತ ಎಂದು ಕರೆಯಲಾಗುವುದು, ಪ್ರತ್ಯೇಕ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ನೀಡಲಾಗುವುದು' ಎಂದು ಸಿದ್ದರಾಮಯ್ಯ ಸರ್ಕಾರವು ಚರ್ಚೆಯನ್ನು ಹುಟ್ಟಿ ಹಾಕಿದೆ. ಇದಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ನೀಡಲಿ, ಬಿಡಲಿ, ರಾಜ್ಯದಲ್ಲಂತೂ ಅಲ್ಪಸಂಖ್ಯಾತರು ಎಂಬ ಟ್ಯಾಗ್ ಬೀಳಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ, ಲಿಂಗಾಯತ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರುವ ಜನಾಂಗದವರು ಸರ್ಕಾರದ ಅಲ್ಪಸಂಖ್ಯಾತ ಮಾನ್ಯತೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ತಿಳಿದು ಬಂದಿದೆ.

Lingayat SCs, OBCs may not welcome minority status

ಲಿಂಗಾಯತ ಸಮುದಾಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದವರು ಸೇರಿದಂತೆ ಸರಿ ಸುಮಾರು 99ಕ್ಕೂ ಅಧಿಕ ಜಾತಿ, ಉಪ ಜಾತಿಗಳಿವೆ. ಈ ಪೈಕಿ ಅನೇಕರಿಗೆ ಎಸ್ ಸಿ ಹಾಗೂ ಒಬಿಸಿ ಕೋಟಾದಡಿಯಲ್ಲಿ ಸೌಲಭ್ಯಗಳು ಸಿಗುತ್ತಿವೆ, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಇದೆ. ಆದರೆ, ಹೊಸ ಧರ್ಮ ಲಿಂಗಾಯತ ಎಂದು ಗುರುತಿಸಿಕೊಂಡರೆ ಅಲ್ಪಸಂಖ್ಯಾತ ಎಂಬ ಹೊಸ ಟ್ಯಾಗ ಸಿಗುವುದೇ ಹೊರತೂ ಮೀಸಲಾತಿ ಬಗ್ಗೆ ಯಾವುದೇ ಭರವಸೆ ಇಲ್ಲ.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ, ಸಿಗುವುದು ಅನುಮಾನ!

ಹೀಗಾಗಿ, 20ಕ್ಕೂ ಅಧಿಕ ಎಸ್ ಸಿ ಹಾಗೂ 15ಕ್ಕೂ ಅಧಿಕ ಒಬಿಸಿ ಕೆಟಗರಿಯ ಲಿಂಗಾಯತರು ಈಗ ಸಿಗುವ ಸೌಲಭ್ಯವನ್ನು ಬಿಟ್ಟು, ಅಲ್ಪಸಂಖ್ಯಾತರು ಎಂದು ಮಾತ್ರ ಕರೆಸಿಕೊಳ್ಳಲು ತಯಾರಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಗುರುರಾಜ್ ಹುಣಸಿನಮರದ್ ಹೇಳಿದ್ದಾರೆ.

ಲಿಂಗಾಯತ ನವ ಧರ್ಮ ಧುರೀಣರ ನಾಮಪರಿವಿಪರ್ಯಾಸ!

ಸರ್ಕಾರದ ಕ್ರಮದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಪ್ರಭಾವಿಗಳಿಗೆ ಮಾತ್ರ ಲಾಭವಾಗಲಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸ್ವಲ್ಪ ಮಾನ್ಯತೆ ಹೆಚ್ಚಾಗಲಿದೆ ಎಂದಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ: SC ಗಳಿಗಂತೂ ಸಿಹಿಸುದ್ದಿಯಲ್ಲ..!

ಎಸ್ ಸಿ / ಎಸ್ಟಿ ಕೆಟಗರಿಗೆ ಬರುವ ಶೇ 7ರಷ್ಟು ಲಿಂಗಾಯತರು ಈಗ ಧರ್ಮಸಂಕಟದಲ್ಲಿದ್ದು, ಹಿಂದೂವಾಗಿ ಮುಂದುವರೆಯಬೇಕೇ ಅಥವಾ ಹೊಸ ಧರ್ಮವನ್ನು ತಮ್ಮದಾಗಿಸಿಕೊಳ್ಳಬೇಕೆ ಎಂಬ ಜಿಜ್ಞಾಸೆಗೆ ಒಳಗಾಗಿದ್ದಾರೆ. ಕಮ್ಮಾರ, ಚಮ್ಮಾರ, ಪಟಗಾರ, ಮಡಿವಾಳ ಹೀಗೆ ವೃತ್ತಿ ಆಧಾರಿತವಾಗಿ ಲಿಂಗಾಯತರು ವಿವಿಧ ಪಂಥಕ್ಕೆ ಸೇರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many of Lingayat SCs, OBCs may not opt for the minority religion tag and relinquish the benefits they are already getting now. Also, there is no reservation in education or employment for a minority religion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ