ಮಧ್ಯರಾತ್ರಿ 12ಗಂಟೆಗೆ ಮುಖ್ಯಮಂತ್ರಿಗಳ ಕನಸಿನಲ್ಲಿ ಬರುವವರು ಯಾರು?

Posted By:
Subscribe to Oneindia Kannada
ಮಧ್ಯರಾತ್ರಿ 12ಗಂಟೆಗೆ ಮುಖ್ಯಮಂತ್ರಿಗಳ ಕನಸಿನಲ್ಲಿ ಬರುವವರು ಯಾರು? | Oneindia Kannada

ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಲಿಲ್ಲ, ಆಗಲೇ ರಾಜಕಾರಣಿಗಳ ಮಾತಿನ ಭರಾಟೆ, ಜನರಿಗೆ ಅಸಹ್ಯವನ್ನೂ ಮೂಡಿಸುತ್ತಿದೆ, ಅಲ್ಲಲ್ಲಿ ಮನರಂಜನೆಯನ್ನೂ ನೀಡುತ್ತಿದೆ.

ಮುಂದಿನ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಅದಮ್ಯ ವಿಶ್ವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಜೆಪಿಯವರು ಟೀಕಿಸುವುದು, ಕಾಲೆಳೆಯುವುದು ಇದ್ದದ್ದೇ. ಆದರೆ ಕೇಂದ್ರ ಸಚಿವರೊಬ್ಬರು ಅವರನ್ನು ಗೇಲಿ ಮಾಡಿದ ರೀತಿ ವಿಶಿಷ್ಟವಾಗಿತ್ತು.

'ಗುಜರಾತ್‌ಗೆ ನಾನ್ಯಾಕೆ ಹೋಗಲಿ? ಸ್ವೀಟ್ ತಿನ್ನೋಕೆ ಹೋಗ್ಲಾ?'

ಬಾಗಲಕೋಟೆಯ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಮುಖ್ಯಮಂತ್ರಿಗಳನ್ನು ತಮಾಷೆಯಾಡಿದ್ದು ಹೀಗೆ, " ನಮ್ಮ ಮುಖ್ಯಮಂತ್ರಿಗಳಿಗೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕನಸು ಬೀಳುತ್ತದೆ.. ಅದೆಂಥಾ ಕನಸು ಅಂತೀರಾ.. ಬ್ಲ್ಯಾಕ್ ಎಂಡ್ ವೈಟ್ ಕನಸಲ್ಲಾ ಅದು... ಕಲರ್ ಫುಲ್ ಕನಸುಗಳು..

ನೆರೆದಿದ್ದ ಜನಸ್ತೋಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ಸಿದ್ದರಾಮಯ್ಯ ಸಾಹೇಬ್ರ ಕನಸಿನಲ್ಲಿ ಬರುವವರು ಯಾರಿರಬಹುದು.. ಐಶ್ವರ್ಯ ರೈನಾ.. ದೀಪಿಕಾ ಪಡುಕೋಣೆನಾ.. ಗುಳಿಗೆನ್ನೆ ಚೆಲುವೆ ರಚಿತಾ ರಾಮ್ ಇರಬಹುದೇ ಎಂದು ಮೆದುಳಿಗೆ ಕೆಲಸ ಕೊಟ್ಟಿದ್ದೇ ಕೊಟ್ಟಿದ್ದು..

ಸಿದ್ದರಾಮಯ್ಯ ಇಲ್ಲದೆ ಕೆ.ಪಿ.ಎಂ.ಇ ಕಾಯ್ದೆ ಮಂಡನೆ ಆಗುತ್ತಿರಲಿಲ್ಲ : ರಮೇಶ್ ಕುಮಾರ್

ಆದರೆ, ಇದ್ಯಾವುದೂ ಅಲ್ಲ..ಅನಂತ್ ಕುಮಾರ್ ಸಾಹೇಬ್ರು ಹೇಳಿದ ಹೆಸರು ಬೇರೆನೇ ಎಂದು ಗೊತ್ತಾದಾಗ ಕೆಲವರು ಮುಸಿಮುಸಿ ನಕ್ಕರು, ಇನ್ನಷ್ಟು ಜನ ಶಿಳ್ಳೆ ಹೊಡೆದರು.. ಮತ್ತಷ್ಟು ಜನ ಎಲಾ ಇವ್ನಾ.. ಎಂದು ನಿರಾಶೆನೂ ಪಟ್ಟುಕೊಂಡರು. ಇದೆಲ್ಲಾ ನಡೆದದ್ದು ಬಿಜೆಪಿಯ ಪರಿವರ್ತನಾ ಸಮಾವೇಶದ 19ನೇ ದಿನವಾದ ಬಾಗಲಕೋಟೆಯಲ್ಲಿ.. ಸಿಎಂ ಕನಸಿನಲ್ಲಿ ಬರುವವರು ಯಾರು? ಮುಂದೆ ಓದಿ..

ಬಾಗಲಕೋಟೆಯಲ್ಲಿ ನಡೆದ ಸಭೆಗೆ ಭಾರೀ ಜನಸ್ತೋಮ

ಬಾಗಲಕೋಟೆಯಲ್ಲಿ ನಡೆದ ಸಭೆಗೆ ಭಾರೀ ಜನಸ್ತೋಮ

ಉಡುಪಿಯಲ್ಲಿ ನಡೆದ ಧರ್ಮಸಂಸದ್ ಕಾರ್ಯಕ್ರಮಕ್ಕಾಗಿ ವಿರಾಮದ ನಂತರ ಮತ್ತೆ ಆರಂಭವಾದ ಬಿಜೆಪಿಯ ಪರಿವರ್ತನಾ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಥಣಿ, ತೇರದಾಳ, ಜಮಖಂಡಿ, ಮುಧೋಳದ ನಂತರ, ಮಂಗಳವಾರ ರಾತ್ರಿ (ನ 28) ಬಾಗಲಕೋಟೆಯಲ್ಲಿ ನಡೆದ ಸಭೆಗೆ ಭಾರೀ ಜನಸ್ತೋಮ ಸೇರಿತ್ತು.

ಮುಖ್ಯಮಂತ್ರಿಗಳ ಕನಸಿನಲ್ಲಿ ಬರುವವರು ಯಾರು?

ಮುಖ್ಯಮಂತ್ರಿಗಳ ಕನಸಿನಲ್ಲಿ ಬರುವವರು ಯಾರು?

ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ಗೋವಿಂದ ಕಾರಿಜೋಳ, ಮುರುಗೇಶ್ ನಿರಾಣಿ, ಅನಂತ ಕುಮಾರ್ ಹೆಗಡೆ ಮುಂತಾದ ಪ್ರಮುಖರು ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅನಂತ್ ಕುಮಾರ್, ಮುಖ್ಯಮಂತ್ರಿಗಳ ಕನಸಿನಲ್ಲಿ ಬರುವವರು ಯಾರು ಎನ್ನುವ ಕುತೂಹಲದ ಬಲೂನಿಗೆ ಕೊನೆಗೂ ಸೂಜಿ ಚುಚ್ಚಿದ್ದಾರೆ.

ತಡರಾತ್ರಿ ಕನಸಿನಲ್ಲಿ ಎಚ್ ವೈ ಮೇಟಿ ಬರುತ್ತಾರೆ

ತಡರಾತ್ರಿ ಕನಸಿನಲ್ಲಿ ಎಚ್ ವೈ ಮೇಟಿ ಬರುತ್ತಾರೆ

"ನಮ್ಮ ಮುಖ್ಯಮಂತ್ರಿಗಳಿಗೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕನಸು ಬೀಳುತ್ತದೆ.. ಅದೆಂಥಾ ಕನಸು ಅಂತೀರಾ.. ಬ್ಲ್ಯಾಕ್ ಎಂಡ್ ವೈಟ್ ಕನಸಲ್ಲಾ.. ಕಲರ್ ಫುಲ್ ಕನಸುಗಳು.. ನಮ್ಮ ಮುಖ್ಯಮಂತ್ರಿಗಳಿಗೆ ತಡರಾತ್ರಿ ಕನಸಿನಲ್ಲಿ ಎಚ್ ವೈ ಮೇಟಿ ಬರುತ್ತಾರೆ" ಎಂದು ಅನಂತ್ ಕುಮಾರ್ ಹೇಳಿದ್ದಾರೆ.

ಎಚ್ ವೈ ಮೇಟಿಯವರ ಸೆಕ್ಸ್ ಸಿಡಿ ಹಗರಣ

ಎಚ್ ವೈ ಮೇಟಿಯವರ ಸೆಕ್ಸ್ ಸಿಡಿ ಹಗರಣ

ಬಾಗಲಕೋಟೆಯ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಎಚ್ ವೈ ಮೇಟಿಯವರ ಸೆಕ್ಸ್ ಸಿಡಿ ಹಗರಣ ಭಾರೀ ಕೋಲಾಹಲವನ್ನು ಉಂಟುಮಾಡಿತ್ತು. ಅಬಕಾರಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದ ಮೇಟಿಗೆ, ಆ ನಂತರ ಕ್ಲೀನ್ ಚಿಟ್ ಸಿಕ್ಕಿತ್ತು. ಅನಂತ್ ಕುಮಾರ್ ಇದನ್ನು ಉಲ್ಲೇಖಿಸದೇ ಪರೋಕ್ಷವಾಗಿ ಮುಖ್ಯಮಂತ್ರಿಗಳ ಕಾಲೆಳೆದಿದ್ದಾರೆ.

ಪರಿವರ್ತನಾ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ

ಪರಿವರ್ತನಾ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ

ಆರಂಭಿಕ ಹಿನ್ನಡೆಯ ನಂತರ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಪರಿವರ್ತನಾ ಯಾತ್ರೆ, ಬಾದಾಮಿ, ಹುನಗುಂದ, ಮುದ್ದೇಬಿಹಾಳದತ್ತ ಸಾಗಿದೆ (ನ 29).

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Limitless entertainment: Who comes in Karnataka Chief Minister Siddaramaiah's dream, ask Union Minister Ananth Kumar who camps at Bagalkot in BJP Parivartana rally.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ