ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕರ ಮೇಲೂ ನೀತಿ ಸಂಹಿತೆಯ ಒಂದು ಕಣ್ಣು!

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಚುನಾವಣಾ ನೀತಿ ಸಂಹಿತೆಯ ಬಿಸಿ ಕುಡುಕರಿಗೂ ತಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರವಹಿಸಲು ಕೆಲವು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ.

ಮದ್ಯಪ್ರಿಯರಿಗೆ ಶಾಕ್: ಏ.1ರಿಂದ ಮದ್ಯ ಮತ್ತಷ್ಟು ದುಬಾರಿಮದ್ಯಪ್ರಿಯರಿಗೆ ಶಾಕ್: ಏ.1ರಿಂದ ಮದ್ಯ ಮತ್ತಷ್ಟು ದುಬಾರಿ

ಒಬ್ಬ ವ್ಯಕ್ತಿ ದಿನಕ್ಕೆ 750 ಎಂ.ಎಲ್ ಮದ್ಯ ಅಥವಾ ಮೂರು ಬಾಟಲ್ ಬಿಯರ್ ಅಷ್ಟೇ ಖರೀದಿಸಬಹುದು. ಅಬಕಾರಿ ಇಲಾಖೆ ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಣೆಗೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲ ಅಬಕಾರಿ ಜಿಲ್ಲಾಧಿಕಾರಿಗಳಿಗೆ ಮಾಮೂಲಿಗಿಂತ ಹೆಚ್ಚಿನ ಮದ್ಯ ಪೂರೈಕೆಯನ್ನು ನಿಯಂತ್ರಿಸಬೇಕೆಂದು ಸೂಚಿಸಿದೆ.

ಚುನಾವಣೆ ಬಂದಿದೆ, ಒಂದಿಷ್ಟು ಹಾಸ್ಯ, ಒಂದಿಷ್ಟು ರಂಜನೆ! ಚುನಾವಣೆ ಬಂದಿದೆ, ಒಂದಿಷ್ಟು ಹಾಸ್ಯ, ಒಂದಿಷ್ಟು ರಂಜನೆ!

ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ದಿನಕ್ಕೆ ಇಷ್ಟೇ ಮದ್ಯ ನೀಡುವುದು ಎಂಬ ಫಲಕ ಹಾಕಲಾಗಿದೆ. ವಿಜಯಪುರ, ಬಾಗಲಕೋಟೆ, ಮತ್ತಿತರೆ ರೆಸ್ಟೋರೆಂಟ್ ಗಳಲ್ಲಿ ಇಂತಹ ಫಲಕಗಳು ಹೆಚ್ಚಾಗಿ ಕಾಣುತ್ತವೆ.

Limit on liquor sale, thanks to assembly poll

ವಿಧಾನಸಭಾ ಚುನಾವಣೆ ಪ್ರಯುಕ್ತ ಮದ್ಯ ಮಾರಾಟವನ್ನು ಕಡಿತ ಮಾಡಲಾಗುತ್ತಿದೆ. ಗ್ರಾಹಕರು ಸಹಕರಿಸಬೇಕಾಗಿ ವಿನಂತಿ. ಒಬ್ಬರಿಗೆ 750 ಎಂಎಲ್ ಮಾತ್ರ ಇಲ್ಲವೇ 375 ಎಂಎಲ್ ಎರಡು ಸಲ, 180 ಎಂಎಲ್ ತೆಗೆದುಕೊಂಡರೆ ನಾಲ್ಕು ಸಲ ಅಥವಾ 90 ಎಂಎಲ್ ಆದರೆ 8 ಸಲ ಮಾತ್ರ ನೀಡಲಾಗುವುದು ಎಂದು ಫಲಕವನ್ನು ಅಳವಡಿಸಲಾಗಿದೆ.

ಮೌಖಿಕ ಸೂಚನೆ: ಕುಡಿತಕ್ಕೆ ಮಿತಿ ಹೇರುವ ಅಬಕಾರಿ ಇಲಾಖೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಹಾಗೆ ಹೊರಡಿಸಲು ನಿಯಮಗಳಲ್ಲಿ ಅವಕಾಶವೈ ಇಲ್ಲ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಮದ್ಯ ಸಾಗಣೆ ಮತ್ತು ದಾಸ್ತಾನಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಅಬಕಾರಿ ಇಲಾಖೆಗೆ ತಾಕೀತು ಮಾಡಿದೆ.

English summary
Department of Excise has imposed restrictions on liquor sale one person can have 750 ml liquor or two bottles of beer per day due to model code of conduct following the state assembly poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X