ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ನವೆಂಬರ್‌ನಲ್ಲಿ ಮಳೆ ಕಡಿಮೆಯಾಗಲಿದೆ

|
Google Oneindia Kannada News

ಬೆಂಗಳೂರು, ನವೆಂಬರ್ 03 : ಸತತ ಮಳೆ, ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಿಹಿ ಸುದ್ದಿ. ಕರ್ನಾಟಕದಲ್ಲಿ ನವೆಂಬರ್ 3ರಿಂದ ಮಳೆ ಕಡಿಮೆಯಾಗಲಿದೆ. ಚಂಡಮಾರುತದ ಪ್ರಭಾವದಿಂದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿತ್ತು.

ನವೆಂಬರ್ 3 ರಿಂದ 7ರ ತನಕ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಇಲ್ಲದಿದ್ದರೂ ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಇರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.

 ಮೈಕೊಡವಿಕೊಳ್ಳುತ್ತಿದ್ದ ಮಲೆನಾಡಿನಲ್ಲಿ ಮತ್ತೆ ಮಳೆ; ಎಲ್ಲೆಲ್ಲಿ ಏನಾಗಿದೆ? ಮೈಕೊಡವಿಕೊಳ್ಳುತ್ತಿದ್ದ ಮಲೆನಾಡಿನಲ್ಲಿ ಮತ್ತೆ ಮಳೆ; ಎಲ್ಲೆಲ್ಲಿ ಏನಾಗಿದೆ?

ಉತ್ತರ ಕನ್ನಡ, ಬೀದರ್ ಸೇರಿದಂತೆ ವಿವಿಧ ಕಡೆ ಶನಿವಾರ ಸಾಧಾರಣ ಮಳೆಯಾಗಿದೆ. ಕಿರವತ್ತಿ, ಔರಾದ್‌ನಲ್ಲಿ 4 ಸೆಂ. ಮೀ., ಕಮಲಾಪುರ, ಚಿಂಚೋಳಿ, ಬೀದರ್‌ನಲ್ಲಿ 1 ಸೆಂ. ಮೀ. ಮಳೆಯಾಗಿದೆ.

ಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆ ಮುಂಗಾರು ಅಂತ್ಯ; ಕರ್ನಾಟಕದಲ್ಲಿ ಶೇ 23ರಷ್ಟು ಅಧಿಕ ಮಳೆ

rain

2019ರ ಜೂನ್‌ನಲ್ಲಿ ಮುಂಗಾರು ಆರಂಭವಾದಾಗ ಕರ್ನಾಟಕಲ್ಲಿ ಮಳೆ ಕಡಿಮೆ ಇತ್ತು. ಆಗಸ್ಟ್‌ 10ರ ಬಳಿಕ 15 ದಿನಗಳ ಕಾಲ ಭಾರಿ ಮಳೆಯಾಗಿತ್ತು. 22 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು.

ಕೇಂದ್ರದಿಂದ ಪ್ರವಾಹ ಪರಿಹಾರ; ತೇಪೆ ಹಚ್ಚಿದ ರಾಜ್ಯ ಬಿಜೆಪಿ ಘಟಕ ಕೇಂದ್ರದಿಂದ ಪ್ರವಾಹ ಪರಿಹಾರ; ತೇಪೆ ಹಚ್ಚಿದ ರಾಜ್ಯ ಬಿಜೆಪಿ ಘಟಕ

ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ದೇಶದಲ್ಲಿ ಮುಂಗಾರು ಋತು ಜಾರಿಯಲ್ಲಿ ಇರುತ್ತದೆ. ಈ ವರ್ಷದ ಮುಂಗಾರಿನಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 23ರಷ್ಟು ಹೆಚ್ಚು ಮಳೆಯಾಗಿತ್ತು. ಅಕ್ಟೋಬರ್ ತಿಂಗಳು ಬಂದರೂ ಮಳೆ ಕಡಿಮೆಯಾಗಿರಲಿಲ್ಲ.

ಅಕ್ಟೋಬರ್‌ನಲ್ಲಿ ಎರಡು ಚಂಡಮಾರುತದ ಪ್ರಭಾವದಿಂದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿತ್ತು. ಮತ್ತೆ ಪ್ರವಾಹ ಉಂಟಾಗಿತ್ತು. ಮಳೆ ಬಿಟ್ಟರೆ ಸಾಕು ಎಂದು ಜನರು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.

ಹವಾಮಾನ ಇಲಾಖೆ ಈಗ ಜನರಿಗೆ ನೆಮ್ಮದಿ ನೀಡುವ ಸುದ್ದಿಯನ್ನು ಕೊಟ್ಟಿದ್ದು, ನವೆಂಬರ್‌ನಲ್ಲಿ ರಾಜ್ಯದಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹೇಳಿದೆ.

English summary
From November 3 to 7 light rain may come in various districts of Karnataka. State witnessed heavy rain, flood from past 4 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X