ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ. ಟಿ. ಲಲಿತಾ ನಾಯಕ್, ಸಿದ್ದು ಸೇರಿ 12 ಮಂದಿಗೆ ಜೀವ ಬೆದರಿಕೆ

|
Google Oneindia Kannada News

ಬೆಂಗಳೂರು ಜುಲೈ 17: ಚಿಂತಕರು, ಸಾಹಿತಿಗಳು ಹಾಗೂ ರಾಜಕೀಯ ನಾಯಕರಿಗೆ ಜೀವ ಬೆದರಿಕೆ ಪತ್ರಗಳು ಬರುವುದು ನಿರಂತರವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಎಚ್‌. ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರ ಭಾವಚಿತ್ರ ಇರುವ ಪತ್ರ ಕಳುಹಿಸಿ 'ಸಂತ ಶ್ರದ್ಧಾಂಜಲಿ' ಎಂದು ಬರೆಯಲಾಗಿದೆ.

ಶನಿವಾರ ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್‌ಗೆ 3ನೇ ಜೀವ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ 12 ವ್ಯಕ್ತಿಗಳ ಭಾವಚಿತ್ರ ಹಾಕಿ ದೇಶದ್ರೋಹಿಗಳ ಪಡೆ ಎಂದು ಹೇಳಲಾಗಿದೆ. ಆ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ.

ಸಾಹಿತಿಗಳು, ಚಿಂತಕರು, ರಾಜಕೀಯ ನಾಯಕರಿಗೆ ಪದೇ ಪದೆ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ದುಷ್ಕರ್ಮಿಗಳು ಬಹಿರಂಗವಾಗಿ ಪತ್ರ, ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ.

Life threat letter For BT Lalita Nayak Siddaramaiah Kumaraswamy And DK Shivakumar

ಪೊಲೀಸ್ ಮಹಾನಿರ್ದೇಶಕರ ಬಳಿಯೂ ಈ ಬಗ್ಗೆ ಚರ್ಚಿಸಲಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಪತ್ತೆ ಮಾಡಬೇಕು. ಸಂವಿಧಾನದ ಆಶಯ ಕಾಪಾಡುವವರನ್ನು ರಕ್ಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸರ್ಕಾರವನ್ನು ಆಗ್ರಹಿಸಿದ್ದರು.

Life threat letter For BT Lalita Nayak Siddaramaiah Kumaraswamy And DK Shivakumar

ಭಾವಚಿತ್ರ ಸಹಿತ ಬೆದರಿಕೆ; ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್. ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್‌. ಜಿ. ಸಿದ್ದರಾಮಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಒಟ್ಟು 12 ಮಂದಿಗೆ ಭಾವಚಿತ್ರಗಳ ಸಹಿತ ನೀವು ದೇಶದ್ರೋಹಿ ಗಳು, ನಿಮ್ಮನ್ನು ಉಳಿಸಲ್ಲ ಎಂದು ಪತ್ರ ಬರೆಯಲಾಗಿದೆ. ಇದೇ ತಿಂಗಳ ಜುಲೈ 3 ಮತ್ತು 7ರಂದು ಬೆದರಿಕೆ ಬಂದಿತ್ತು. ಆದರೂ ಪತ್ರ ಬರೆದವರನ್ನು ಪತ್ತೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಪ್ರಗತಿಪರರಿಗೆ ಈ ರೀತಿ ಪದೇ ಪದೆ ಕೊಲೆ ಮಾಡುವುದಾಗಿ ಕರೆಗಳು, ಬೆದರಿಕೆ ಪತ್ರಗಳು ಬರುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡುವಂತಾಗಿದೆ. ಸರ್ಕಾರ ಇದನ್ನು ನಿರ್ಲಕ್ಷಿಸದೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

English summary
Threatening phone calls and letter to writers, thinkers, political leaders. BT Lalita Nayak received 3rd threat letter on Saturday, Karnataka government should not ignore this, should take action urged opposition leader Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X