ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಣ್ಣನಿಗೇಕೆ ಆಂಧ್ರ ಶೈಲಿಯ ರಾಜಕೀಯ : ಆಪ್ತರೊಬ್ಬರ ಪತ್ರ!

|
Google Oneindia Kannada News

ಬೆಂಗಳೂರು, ಜುಲೈ 12 : 'ಕುಮಾರಸ್ವಾಮಿಯವರು ಹೀಗೇಕೆ ಆಂಧ್ರ ಸ್ಟೈಲ್ ನಲ್ಲಿ ಸೆಕ್ಯೂರಿಟಿ ಇಟ್ಟುಕೊಂಡು ಅಧಿಕಾರ ನಡೆಸಿದರು ಎಂಬುದು ನನಗೆ ನಿಜಕ್ಕೂ ಗೊತ್ತಿಲ್ಲ. ಅವರು ಯಾವಾಗಲೂ ಜನಪರ ಕಾಳಜಿಯ ವ್ಯಕ್ತಿತ್ವ. ಹೀಗೇಕೆ ಬದಲಾದರೂ ಎಂಬುದು ಈಗಲೂ ನನ್ನನ್ನು ಕಾಡುತ್ತಿದೆ' ಇದು ಮುಖ್ಯಮಂತ್ರಿಗಳ ಆಪ್ತರೊಬ್ಬರು ಬರೆದಿರುವ ಪತ್ರದ ಸಾಲು.

ಹೌದು, ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಸಮನ್ವಯಗಾರ ಸದಾನಂದ ಅವರು ಬರೆದಿರುವ ಪತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವಾರು ವಿಚಾರಗಳನ್ನು ಫೇಸ್‌ಬುಕ್‌ನಲ್ಲಿ ಬರೆದಿರುವ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ಎಚ್. ಡಿ. ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ತೋರಿದ ಜನಪರ ಕಾಳಜಿಯ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಅವರ ಆಡಳಿತವನ್ನು ಪತ್ರದಲ್ಲಿ ವಿವರಿಸಲಾಗಿದೆ. ಪತ್ರದಲ್ಲಿ ಏನಿದೆ? ಎಂಬುದು ನಿಮ್ಮ ಓದಿಗಾಗಿ...

Letter to HD Kumaraswamy by his close aide

ಸಿಎಂ ಕುಮಾರಸ್ವಾಮಿ ಅವರಿಗೊಂದು ಪತ್ರ....

ಇದರಲ್ಲಿ ಸತ್ಯಗಳಿವೆ. ನಿಷ್ಟೂರ ಗಳಿವೆ. ಬೇಸರಗಳು ಇವೆ. ಮೊದಲ ಬಾರಿ ನೀವು ಮುಖ್ಯಮಂತ್ರಿಯಾಗಿದ್ದಾಗ ತೋರಿದ ಜನಪರ ಕಾಳಜಿ, ಜನಪ್ರೀತಿ ಬಣ್ಣಿಸಲಸದಳ. ನೀವು ಮಾಜಿ ಮುಖ್ಯಮಂತ್ರಿ ಹಾಗಿದ್ದಾಗ್ಯೂ ಕೂಡ ನಿಮ್ಮ ಮನೆಗೆ ಮತ್ತು ಸದಾಶಿವನಗರದ ಗೆಸ್ಟ್ ಹೌಸ್ ಗೆ ಅಷ್ಟೊಂದು ಅಸಹಾಯಕರು. ಬಡವರು . ರಾಜಕೀಯ ನಾಯಕರು ಪುಡಾರಿಗಳು. ಅನುಯಾಯಿಗಳು ಬರುತ್ತಿದ್ದರು.

ಅದೊಂದು ಸಿಎಂ ಸಾಮ್ರಾಜ್ಯ ಎಂಬಂತೆ ತುಂಬಿತುಳುಕುತ್ತಿತ್ತು. ನೀವು ಕೂಡ ಅಷ್ಟೇ ಶುದ್ಧ ಅಂತಃಕರಣದಿಂದ ಬಂದ ಎಲ್ಲರೊಂದಿಗೂ ತಾಳ್ಮೆ ಮತ್ತು ಪ್ರೀತಿಯಿಂದ ಸ್ಪಂದಿಸುತ್ತೀದ್ದೀರಿ. ನಾನು ಎದುರಿಗೆ ನಿಂತು ಎಲ್ಲವನ್ನೂ ನೋಡಿದ್ದೇನೆ.

ನೀವು ಮಾಜಿ ಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿ ಯಾದವರ ಬಳಿಯೂ ಅಷ್ಟೊಂದು ಜನ ಸುಳಿಯುತ್ತಿರಲಿಲ್ಲ. ಅದು ನಿಮ್ಮ ಹೆಗ್ಗಳಿಕೆ ಮತ್ತು ಹೆಮ್ಮೆ. ನಿಮ್ಮ ತಾಯಿ ಕರುಳ ಕಣ್ಣು. ಒಮ್ಮೆ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಇಡೀ ನಾಡಿನ ಜನರ ಆಶಯ. ಅವರು ಓಟು ಹಾಕಲಿಲ್ಲ. 37 ಸೀಟು ಗೆದ್ದಾಗಲೂ ಕೂಡ ನಾಳಿನ ಜನರ ಆಶಯ ಇತ್ತಲ್ಲ. ಆ ಕಾರಣ ಮತ್ತು ದೈವಾನುಗ್ರಹದಿಂದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದಿರಿ.

ನನಗೂ ಬಹಳ ಖುಷಿಯಾಗಿತ್ತು. ಜನ ವಂಚಿಸಿದರೂ ದೇವ ಕರುಣಿಸಿದರು. ಬಯಸದ ಭಾಗ್ಯ ಎಂಬಂತೆ ನೀವು ಮುಖ್ಯಮಂತ್ರಿ ಪದವಿಗೆ ಬಂದಿರಿ. ಎಲ್ಲವೂ ಸರಿಯಾಯಿತು. ಎಂದು ನಾನು ಅಂದುಕೊಂಡೆ. ಆನಂತರ ಎಲ್ಲಾ ಲೆಕ್ಕಾಚಾರಗಳು ಹಳಿತಪ್ಪಿದವು.

ನಿಮ್ಮೊಂದಿಗೆ ಒಳ್ಳೆಯ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರನ್ನು ನೀವೇ ಆಯ್ಕೆ ಮಾಡಿಕೊಂಡಿದ್ದೀರಿ. Good. ಅವರ್ಯಾರು ಜನ ಪ್ರೀತಿಸುವ ಅಧಿಕಾರಿಗಳು ಅಲ್ಲ. ಅದು ಬಿಡಿ ಓಕೆ. ನೀವು ಅಂದರೆ ಮುಖ್ಯಮಂತ್ರಿಗಳು ಪ್ರಭು ಎಂಬ ಎಂಬ ಅಧಿಕಾರಿಯನ್ನುಆಪ್ತ ಸಹಾಯಕರನ್ನು ಮಾಡಿಕೊಂಡಿರಿ.

ಆತ ತನ್ನ ಬಳಗದ ನರಸಿಂಹಮೂರ್ತಿ, ಮಹೇಂದ್ರ ಇಂಥವರನ್ನು ಸಿಎಂ ಕಚೇರಿಗೆ ತಂದು ಕೂರಿಸಿದರು. ಅವರೆಲ್ಲರೂ ಕಳೆದ 13 ತಿಂಗಳಿಂದ ತುಂಬಾ ಚೆನ್ನಾಗಿ ಹಣ ಮಾಡಿದರು. ಇದು ಅರ್ಥವಾಗಲೇ ಇಲ್ಲ. ನಿಮ್ಮ ಎಡ ಬಲದಲ್ಲಿರುವ ಹಕ್ಕ-ಬುಕ್ಕರು ದೊಡ್ಡ ಸ್ಥಿತಿಯಲ್ಲಿ ಇದ್ದಾರೆ. ನಿಮಗ್ಯಾಕೆ ಈ ರೀತಿ ಮಂಕು ಕವಿಯಿತು. ಎಂಬುದು ನನಗೆ ನಿಗೂಢ ಪ್ರಶ್ನೆ.

ನೀವು ಸರಳ ಸಜ್ಜನ. ಚನ್ನಪಟ್ಟಣದ ಒಬ್ಬ ಕಾರ್ಪೊರೇಟರ್ ಫೋನ್ ಮಾಡಿ ಸಿಎಂ ಬಂದಿದ್ದರು. ತೆಲಂಗಾಣ ಸಿಎಂಗೆ ಒಂದು ಶಿಪಾರಸು ಲೆಟರ್ ಕೊಡಬೇಕಾಗಿತ್ತು. ಕುಮಾರಣ್ಣನಿಗೆ ಕೊಟ್ಟಿದ್ದೆ. ಅವರು ಬಂದು ಐದಾರು ದಿನಗಳು ಆಗಿತ್ತು. ಸಿಎಂ ಚನ್ನಪಟ್ಟಣಕ್ಕೆ ಬಂದಿದ್ದಾಗ ಲೆಟರ್ ಕೊಟ್ಟಿದ್ದೆ.

ಆನಂತರ ಸಿಎಂ ಪಿಎಸ್ ಪ್ರಭು ಮತ್ತು ಆತನ ಪಿಎ ಮಹೇಂದ್ರ ಫೋನ್ ತೆಗೆಯುತ್ತಿಲ್ಲ. ದಯಮಾಡಿ ನನಗೆ ಹೆಲ್ಪ್ ಮಾಡಿ. ಅಂತ ಅವರು ಫೋನ್ ಮಾಡಿದ್ದರು. ನಾನು ಅವರಿಗೆ ಫೋನ್ ಮಾಡಿದಾಗ ನೂರಾರು ಲೆಟರ್ ಗಳು ಬರುತ್ತವೆ. ಅದು ಎಲ್ಲಿದಿಯೋ ಗೊತ್ತಿಲ್ಲ ಎಂದರು.

ಇನ್ನೊಂದು ವಿಷಯ ಹೇಳಬೇಕು. ಹಿಂದೆ ಸಿಎಂ ಮುಖ್ಯಮಂತ್ರಿ ಆಗಿದ್ದಾಗ ಎಸ್ಕಾರ್ಟ್ ಪೊಲೀಸ್ ಸಿಬ್ಬಂದಿ ಇರುತ್ತಿದ್ದರು. ಅವರು ಸಿಎಂ ಹಿಂದೆ ಇರುತ್ತಿದ್ದರು. ಎಡ ಬಲದಲ್ಲಿ ಇರುತ್ತಿರಲಿಲ್ಲ. ಕುಮಾರಸ್ವಾಮಿಯವರು ಹೀಗೇಕೆ ಆಂಧ್ರ ಸ್ಟೈಲ್ ನಲ್ಲಿ ಸೆಕ್ಯೂರಿಟಿ ಇಟ್ಟುಕೊಂಡು ಅಧಿಕಾರ ನಡೆಸಿದರು ಎಂಬುದು ನನಗೆ ನಿಜಕ್ಕೂ ಗೊತ್ತಿಲ್ಲ. ಅವರು ಯಾವಾಗಲೂ ಜನಪರ ಜನ ಕಾಳಜಿಯ ವ್ಯಕ್ತಿತ್ವ. ಹೀಗೇಕೆ ಬದಲಾದರೂ ಎಂಬುದು ಈಗಲೂ ನನ್ನನ್ನು ಕಾಡುತ್ತಿದೆ.

ವಂದನೆಗಳು. ಹೇಳಬೇಕು ಎನಿಸಿತು ಹೇಳಿದ್ದೇನೆ ಮನಸ್ಸಿನ ಭಾವನೆಗಳನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಈಗಲೂ ಹಲವು ಎಂಎಲ್ಎಗಳು ಸೋತ ಅಭ್ಯರ್ಥಿಗಳು. ಜಿಲ್ಲಾ ಪಂಚಾಯತ್ ಸದಸ್ಯರು. ತಾಲೂಕು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಅಣ್ಣಾ ಯಾಕೆ ಹೀಗಾದರೂ ಎಂದು ಕೇಳುತ್ತಾರೆ.

ನನ್ನಲ್ಲಿ ಉತ್ತರವಿಲ್ಲ. ನೀವು ದಯಮಾಡಿ ಇದನ್ನು ಅರ್ಥ ಮಾಡಿಕೊಳ್ಳಿ. ನನಗೆ ಯಾವ ಕೆಟ್ಟ ಉದ್ದೇಶವೂ ಇಲ್ಲ. ನಿಮಗೆ ಒಳಿತಾದರೆ ಲಕ್ಷಾಂತರ ಮಂದಿ ಬದುಕುತ್ತಾರೆ. ಅವರೆಲ್ಲರೂ ಕಳೆದ 11 ತಿಂಗಳಿಂದ ಭೇಟಿ ಮಾಡಲು ಶತ ಪ್ರಯತ್ನ ಮಾಡಿದ್ದಾರೆ. ನಿಮ್ಮಗೆ ರೀಚ್ ಆಗಲು ಸಾಧ್ಯವೇ ಆಗಲಿಲ್ಲ. ಇದಕ್ಕಿಂತ ಒಳ್ಳೆಯ ಹೆಸರೇ ಕೊಡಲು ನನಗೆ ಸಾಧ್ಯವಾಗಲ್ಲ. ದಯಮಾಡಿ ಕ್ಷಮಿಸಿ. ನಾನು ತಪ್ಪು ಹೇಳಿದ್ದರೆ?

English summary
Letter to Karnataka Chief Minister H.D.Kumaraswamy by his close aide. In a letter Sadananda Nanda expressed Kumaraswamy concerns about people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X