ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ಚುನಾವಣೆ; ನೋಟಾ ಆಯ್ಕೆ ಲಭ್ಯವಿಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ವಿಧಾನ ಪರಿಷತ್ತಿನ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಅಕ್ಟೋಬರ್ 28ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ ನೋಟಾ ಆಯ್ಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಕ್ಟೋಬರ್ 28ರಂದು ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಒಟ್ಟು 30 ಅಭ್ಯರ್ಥಿಗಳು ಕಣಲ್ಲಿದ್ದಾರೆ.

ಪರಿಷತ್ ಚುನಾವಣೆ; 30 ಅಭ್ಯರ್ಥಿಗಳು ಕಣದಲ್ಲಿ, ಬಿಜೆಪಿಗೆ ಬಂಡಾಯದ ಬಿಸಿ ಪರಿಷತ್ ಚುನಾವಣೆ; 30 ಅಭ್ಯರ್ಥಿಗಳು ಕಣದಲ್ಲಿ, ಬಿಜೆಪಿಗೆ ಬಂಡಾಯದ ಬಿಸಿ

ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಮತಪತ್ರಗಳಲ್ಲಿ ನೋಟಾ NOTA (None of the above) ಆಯ್ಕೆ ಇರುವುದಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆ ಇರುತ್ತದೆ.

ಕರ್ನಾಟಕ; ವಿಧಾನ ಪರಿಷತ್ 4 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಕರ್ನಾಟಕ; ವಿಧಾನ ಪರಿಷತ್ 4 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ

Legislative Council Election On October 28 No NOTA Option Available

ಚುನಾವಣಾ ಆಯೋಗ 11/9/2018ರಂದು ಹೊರಡಿಸಿರುವ ಆದೇಶದ ಅನ್ವಯ ರಾಜ್ಯಸಭಾ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗಳ ಮತಪತ್ರಗಳಲ್ಲಿ ನೋಟಾ ಆಯ್ಕೆಗೆ ಇದ್ದ ಅವಕಾಶವನ್ನು ಹಿಂಪಡೆದಿದೆ. ಆದ್ದರಿಂದ, ನೋಟಾ ಆಯ್ಕೆ ಮಾತದಾರರಿಗೆ ಇರುವುದಿಲ್ಲ.

ದೆಹಲಿ ಚುನಾವಣೆ; ಅಚ್ಚರಿಗೆ ಕಾರಣವಾದ 'ನೋಟಾ' ಮತಗಳ ಸಂಖ್ಯೆ ದೆಹಲಿ ಚುನಾವಣೆ; ಅಚ್ಚರಿಗೆ ಕಾರಣವಾದ 'ನೋಟಾ' ಮತಗಳ ಸಂಖ್ಯೆ

ಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಿದಾನಂದ ಎಂ. ಪಕ್ಷದ ಅಧಿಕೃತ ಅಭ್ಯರ್ಥಿ.

ಆದರೆ, ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಡಿ. ಟಿ. ಶ್ರೀನಿವಾಸ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ತುಮಕೂರಿನ ಬಿಜೆಪಿ ಮುಖಂಡ ಎಚ್. ಎಸ್. ಲೇಪಾಕ್ಷ್ ಸಹ ಕಣದಲ್ಲಿದ್ದಾರೆ.

ನಾಲ್ಕು ಕ್ಷೇತ್ರಗಳಿಗೆ ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಪರಿಷತ್ ಚುನಾವಣೆಯಲ್ಲಿ ಮತಯಂತ್ರದ ಬದಲು ಮತಪತ್ರವನ್ನು ಬಳಕೆ ಮಾಡಲಾಗುತ್ತದೆ.

English summary
Election for 4 legislative council seat will be held on October 28, 2020. No NOATA option available in the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X