ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಮೂಡಿಸಿದ ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ನಡೆ!

|
Google Oneindia Kannada News

ಬೆಂಗಳೂರು, ಜ. 21: ಕಳೆದ ಎರಡು ತಿಂಗಳುಗಳಿಂದ ವಿವಿಧ ಬೆಳವಣಿಗೆಗಳಿಗೆ ಕಾರಣವಾಗಿರುವ ವಿಧಾನ ಪರಿಷತ್ ಸಭಾಪತಿಗಳ ಪದಚ್ಯುತಿ ವಿಚಾರ, ಮತ್ತೊಂದು ತಿರುವು ಪಡೆದುಕೊಂಡಿದೆ. ಸಭಾಪತಿ ಪದಚ್ಯುತಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಪ ಸಭಾಪತಿಗಳಾಗಿದ್ದ ಎಸ್‌.ಎಲ್‌. ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಮ್ಮ ವಿರುದ್ಧ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿಲ್ಲ ಎಂದು ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರು ಗೊತ್ತುವಳಿ ಮಂಡನೆಗೆ ಅವಕಾಶ ಕೊಟ್ಟಿರಲಿಲ್ಲ. ಅದು ಮುಂದಿನ ಬೆಳವಣಿಗೆಗಳಿಗೆ ಮುನ್ನುಡಿಯಾಗಿತ್ತು. ಅವಿಶ್ವಾಸ ಗೊತ್ತುವಳಿ ಸಲ್ಲಿಸಿದ ಬಳಿಕ ಸಭಾಪತಿಗಳ ಪೀಠದ ಮೇಲೆ ಕೂಡಲು ಪ್ರತಾಪ ಚಂದ್ರ ಶೆಟ್ಟಿ ಅವರು ಅರ್ಹತೆ ಕಳೆದು ಕೊಂಡಿದ್ದಾರೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಹೀಗಾಗಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಖಾತೆ ಮರು ಹಂಚಿಕೆ: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಅಸಮಾಧಾನ ಸ್ಪೋಟ!ಖಾತೆ ಮರು ಹಂಚಿಕೆ: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಅಸಮಾಧಾನ ಸ್ಪೋಟ!

ಇದೇ ಸಂದರ್ಭದಲ್ಲಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿಗೆ ಕೊಟ್ಟಿರುವ ಸೂಚನೆ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ. ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನಕ್ಕೆ ಅವರು ರಾಜೀನಾಮೆ ಕೊಡ್ತಾರಾ? ಕಾರ್ಯದರ್ಶಿಗೆ ಕೊಟ್ಟಿರುವ ಸೂಚನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ!

ಕುತೂಹಲ ಮೂಡಿಸಿದ ಸೂಚನೆ

ಕುತೂಹಲ ಮೂಡಿಸಿದ ಸೂಚನೆ

ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಕೊಟ್ಟಿರುವ ಅವಿಶ್ವಾಸ ನೊಟೀಸ್ ಕುರಿತು ಲೋಕಸಭೆ ಕಾರ್ಯದರ್ಶಿ ಅವರಿಂದ ಸಲಹೆ ಪಡೆಯಲು ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ಅವರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆ ನೊಟೀಸ್‌ಗೆ ಕಾನೂನು ಮಾನ್ಯತೆ ಕುರಿತು ಲೋಕಸಭೆ ಕಾರ್ಯದರ್ಶಿಯಿಂದ ಸ್ಪಷ್ಟೀಕರಣ ಪಡೆಯುವಂತೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ಸಭಾಪತಿಗಳ ಈ ನಡೆ ಕುತೂಹಲ ಮೂಡಿಸಿದೆ.

ಜೆಡಿಎಸ್ ಸದಸ್ಯರಿಂದ ಅವಿಶ್ವಾಸ ನೊಟೀಸ್

ಜೆಡಿಎಸ್ ಸದಸ್ಯರಿಂದ ಅವಿಶ್ವಾಸ ನೊಟೀಸ್

ಡಿಸೆಂಬರ್ 15 ರಂದು ವಿಧಾನ ಪರಿಷತ್‌ನಲ್ಲಿ ಗಲಾಟೆ ನಡೆದ ಹಿನ್ನೆಲೆಯಲ್ಲಿ ಸಭಾಪತಿ ವಿರುದ್ಧ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ಯಾವುದೇ ತೀರ್ಮಾನವಾಗಿರಲಿಲ್ಲ. ಆ ನಂತರ ಸದನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿತ್ತು. ಸದನವನ್ನು ಮುಂದೂಡಿದ ಬಳಿಕ ಜೆಡಿಎಸ್ ಸದಸ್ಯರು ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನೊಟೀಸ್ ನೀಡಿದ್ದರು.

ಮತ್ತೆ ನೊಟೀಸ್ ಕೊಟ್ಟ ಬಿಜೆಪಿ

ಮತ್ತೆ ನೊಟೀಸ್ ಕೊಟ್ಟ ಬಿಜೆಪಿ

ಜೆಡಿಎಸ್ ಅವಿಶ್ವಾಸ ಗೊತ್ತುವಳಿ ಕೊಟ್ಟ ಬಳಿಕ ಮತ್ತೆ ಬಿಜೆಪಿ ಸದಸ್ಯರು ಜನವರಿ 13 ರಂದು ಮತ್ತೊಂದು ಬಾರಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನೊಟೀಸ್ ನೀಡಿದ್ದಾರೆ. ಆ ಎರಡೂ ನೊಟೀಸ್‌ಗಳನ್ನು ಅಧಿವೇಶನ ಕರೆಯುವ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಮೊದಲು ನೀಡಲಾಗಿದೆ. ಹೀಗಾಗಿ ಈ ನೊಟೀಸ್‌ಗಳಿಗೆ ಕಾನೂನಿನ ಮಾನ್ಯತೆ ಇದೆಯೇ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವಂತೆ ಸಭಾಪತಿ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಸೂಚಿಸಿದ್ದಾರೆ.

ಜನವರಿ 13 ರಂದು ಬಿಜೆಪಿ ಸದಸ್ಯರು ಎರಡನೇ ಬಾರಿ ಕೊಟ್ಟಿರಯವ ನೊಟೀಸ್‌ಗೆ ಕಾನೂನಿನ ಮಾನ್ಯತೆ ಇದೆಯೋ? ಇಲ್ಲವೋ? ಎಂಬುದರ ಕುರಿತು ಲೋಕಸಭೆ ಕಾರ್ಯದರ್ಶಿ ಅವರ ಅಭಿಪ್ರಾಯ ಪಡೆಯಲು ಸಭಾಪತಿಗಳು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಸದಸ್ಯರು ಜನವರಿ 18 ರಂದು ಎರಡು ಪ್ರತ್ಯೇಕ ನೊಟೀಸ್ ನೀಡಿದ್ದು, ಜನವರಿ 13 ರಂದು ನೀಡಿರುವ ನೊಟೀಸ್ ಜೊತೆಗೆ 4 ಜನ ಸದಸ್ಯರ ಸಹಿಯುಳ್ಳ ಮತ್ತೊಂದು ನೊಟೀಸ್ ನೀಡಿದ್ದಾರೆ.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada
ಸಭಾಪತಿ ಸ್ಥಾನಕ್ಕೆ ರಾಜೀನಾಮೆ?

ಸಭಾಪತಿ ಸ್ಥಾನಕ್ಕೆ ರಾಜೀನಾಮೆ?

ವಿಧಾನ ಪರಿಷತ್ ಸಭಾಪತಿ ವಿರುದ್ದ ಬಿಜೆಪಿ ಹಾಗೂ ಜೆಡಿಎಸ್ ಪದಚ್ಯುತಿಗೆ ನೊಟೀಸ್ ನೀಡಿವೆ. ಸಭಾಪತಿ ರಾಜೀನಾಮೆ ಒತ್ತಡ ಹೇರುತ್ತಿದ್ದಾರೆ.

ಜನವರಿ 28 ರಿಂದ ಮತ್ತೆ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನ ಆರಂಭಕ್ಕೂ ಮುನ್ನವೇ ಸಭಾಪತಿ ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ನೀಡಬೇಕೆಂಬ ಕಾರಣಕ್ಕೆ ಜನವರಿ 13 ರಂದು ಬಿಜೆಪಿ ಸದಸ್ಯರು ನೊಟೀಸ್ ನೀಡಿದ್ದಾರೆ.

ಆದರೆ, ಉಪ ಸಭಾಪತಿ ಸ್ಥಾನವೂ ಖಾಲಿ ಇರುವುದರಿಂದ ಉಪ ಸಭಾಪತಿ ಕಾರಣಕ್ಕೆ ಜನವರಿ 29 ರಂದು ಚುನಾವಣೆ ನಡೆಸಿ, ಉಪ ಸಭಾಪತಿಗೆ ರಾಜೀನಾಮೆ ನೀಡಲು ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

English summary
What is Next Movement of Karnataka Legislative council Chairman K Prathap Chandra Shetty? Here is full details. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X