• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಯಕತ್ವದ ಕಿತ್ತಾಟ: ಆಖಾಡಕ್ಕೆ ಇಳಿದ ಹೈಕಮಾಂಡ್, ಸಿದ್ದು ಮತ್ತು ಡಿಕೆಶಿಗೆ ಬುಲಾವ್

|
Google Oneindia Kannada News

ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಅನಾವಶ್ಯಕವಾಗಿ ಗೊಂದಲದ ಗೂಡಾಗಿ ಕೂತಿರುವುದರಿಂದ ಹೈಕಮಾಂಡ್ ಮಧ್ಯಪ್ರವೇಶಿಸಿದೆ.

ಈ ಸಂಬಂಧ ಕೆಪಿಸಿಸಿ ಮುಖಂಡರು ನೀಡುತ್ತಿರುವ ಬಹಿರಂಗ ಹೇಳಿಕೆಗಳು ಕಮ್ಮಿಯಾಗುತ್ತಾ ಬಂದಿದ್ದರೂ, ಒಳೊಗೊಳಗೆ ಇದರ ಬೇಗುದಿ ಹಾಗೆಯೇ ಕುದಿಯುತ್ತಿದೆ. ಪಕ್ಷದ ಆಂತರಿಕ ವಲಯದಲ್ಲಿ ಇನ್ನೂ ಇದು ಚರ್ಚೆಯ ವಿಷಯವಾಗಿದೆ.

ಕಾಂಗ್ರೆಸ್ ಬಿಟ್ಟು ಬೇಕಿದ್ದರೆ RSS ಸೇರಿಕೊಳ್ಳಿ: ರಾಹುಲ್ ಗಾಂಧಿ ಟಾರ್ಗೆಟ್ ಯಾರು?ಕಾಂಗ್ರೆಸ್ ಬಿಟ್ಟು ಬೇಕಿದ್ದರೆ RSS ಸೇರಿಕೊಳ್ಳಿ: ರಾಹುಲ್ ಗಾಂಧಿ ಟಾರ್ಗೆಟ್ ಯಾರು?

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಆಹ್ವಾನ ಇಲ್ಲದೇ ಇದ್ದದ್ದು, ನಾಯಕತ್ವದ ವಿಚಾರ ಇನ್ನೂ ಹೊಗೆಯಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿ.

ಡಿಕೆಶಿ ಮನೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ, ಒಬ್ಬರಿಗೆ ಮಾತ್ರ ಆಹ್ವಾನವಿಲ್ಲಡಿಕೆಶಿ ಮನೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರ ಸಭೆ, ಒಬ್ಬರಿಗೆ ಮಾತ್ರ ಆಹ್ವಾನವಿಲ್ಲ

ಕೋರ್ಟ್ ಆದೇಶ ಏನಾದರೂ ಹೊರಬಿದ್ದಲ್ಲಿ ಬಿಬಿಎಂಪಿ ಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ಎಚ್ಚೆತ್ತುಕೊಂಡು, ಇಬ್ಬರು ಪ್ರಮುಖ ನಾಯಕರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ.

 ಜಮೀರ್ ಅಹ್ಮದ್ ಅವರಿಂದ ಆರಂಭವಾದ ನಾಯಕತ್ವದ ವಿಚಾರ

ಜಮೀರ್ ಅಹ್ಮದ್ ಅವರಿಂದ ಆರಂಭವಾದ ನಾಯಕತ್ವದ ವಿಚಾರ

ಜಮೀರ್ ಅಹ್ಮದ್ ಅವರಿಂದ ಆರಂಭವಾದ ನಾಯಕತ್ವದ ವಿಚಾರ ಹಲವು ಆಯಾಮಗಳನ್ನು ಪಡೆದುಕೊಂಡಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರ ಶಾಸಕರು ಹೇಳಿಕೆಗಳನ್ನು ನೀಡಲು ಆರಂಭಿಸಿದ್ದರು. ಒಂದು ಹಂತದಲ್ಲಿ ಈ ವಿಚಾರ ಇಬ್ಬರು ನಾಯಕರ ಪ್ರತಿಷ್ಠೆಯ ವಿಚಾರವಾಗಿ ಉರುಳಲು ಆರಂಭಿಸಿತ್ತು.

 ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚನೆ

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚನೆ

ರಾಜ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಬರುವಂತೆ ಸೂಚಿಸಿದೆ. ಮಂಗಳವಾರ (ಜುಲೈ 20) ಇಬ್ಬರು ನಾಯಕರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

 ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಜೊತೆ ಮಾತುಕತೆ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ರಾಹುಲ್ ಗಾಂಧಿ ಕರೆದಿದ್ದಾರೆ. ಹಾಗಾಗಿ, ಅಂದು ಸಂಜೆಯ ಮೇಲೆ ಇಬ್ಬರು ನಾಯಕರನ್ನು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ.

  ಕರ್ನಾಟಕದಲ್ಲಿ ಮುಂದುವರಿದ ವರುಣನ ಆರ್ಭಟ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ | Oneindia Kannada
   ಕಾಂಗ್ರೆಸ್ಸಿಗೆ ಇದ್ದ ಒಂದು ಭರವಸೆಯಾದ ಕೇರಳದಲ್ಲೂ ಸೋಲು

  ಕಾಂಗ್ರೆಸ್ಸಿಗೆ ಇದ್ದ ಒಂದು ಭರವಸೆಯಾದ ಕೇರಳದಲ್ಲೂ ಸೋಲು

  ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ಸಿಗೆ ಇದ್ದ ಒಂದು ಭರವಸೆಯಾದ ಕೇರಳದಲ್ಲೂ ಚುನಾವಣೆಯಲ್ಲಿ ಸೋತ ನಂತರ, ಉಳಿದಿರುವ ಇನ್ನೊಂದು ರಾಜ್ಯವೆಂದರೆ ಕರ್ನಾಟಕ. ಹಾಗಾಗಿ, ರಾಜ್ಯದ ಇಬ್ಬರು ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕಾಗಿ ರಾಹುಲ್ ಗಾಂಧಿ ನೇರವಾಗಿ ಆಖಾಡಕ್ಕೆ ಇಳಿದಿದ್ದಾರೆ.

  English summary
  Leadership Issue In Karnataka Congress: Rahul Gandhi Called Siddaramaiah And DK Shivakumar To Delhi. Know More
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X