ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 4.5 ಲಕ್ಷ ವಿದ್ಯಾರ್ಥಿಗಳಿಗೆ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂ

|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಕರ್ನಾಟಕದಲ್ಲಿ ಸುಮಾರು 4.5 ಲಕ್ಷಕ್ಕೂ ಹೆಚ್ಚು ಮಂದಿ ಅನುಕೂಲಕ್ಕಾಗಿ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಿಸ್ಟಂಗೆ ಚಾಲನೆ ನೀಡಿದ್ದಾರೆ.

ಕರ್ನಾಟಕ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 87 ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡಿರಲಿದೆ.

ಮುಂದಿನ ಸಚಿವ ಸಂಪುಟದಲ್ಲಿ ಎನ್‍ಇಪಿ ಜಾರಿಗೆ ಅನುಮೋದನೆಮುಂದಿನ ಸಚಿವ ಸಂಪುಟದಲ್ಲಿ ಎನ್‍ಇಪಿ ಜಾರಿಗೆ ಅನುಮೋದನೆ

ಈ ಸಿಸ್ಟಂ 4.5 ಲಕ್ಷ ವಿದ್ಯಾರ್ಥಿಗಳ ಕಲಿಕೆ ಮತ್ತು 24,000 ಶಿಕ್ಷಕರ ಬೋಧನೆಗೂ ಉತ್ತಮ ಪರಿಣಾಮ ಬೀರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Karnataka Launches Learning Management System To Help 4.5 Lakh Students

ಕೆಎಲ್‌ಎಂಎಸ್‌ ಅನ್ನು ಸುಮಾರು 34.14 ಕೋಟಿ ವೆಚ್ಚದಲ್ಲಿ, ಎಲ್‌ಎಂಎಸ್‌ ಆಧಾರಿತ ಡಿಜಿಟಲ್ ಲರ್ನಿಂಗ್ ಮತ್ತು 2500 ಐಸಿಟಿ ಎನೇಬಲ್ ಕ್ಲಾಸೆಸ್ ಎರಡು ವಿಧಾನಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಇದರ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಿರಂತರ ಮೌಲ್ಯಮಾಪನ ನಡೆಯಲಿದ್ದು, ಉನ್ನತ ಶಿಕ್ಷಣ ಗುಣಮಟ್ಟದಲ್ಲಿ ಹಲವು ಬದಲಾವಣೆಗಳನ್ನು ಗಮನಿಸಬಹುದು ಎಂದರು.

ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ, ಎಲ್ಲಿಂದ ಬೇಕಾದರೂ ಅಧ್ಯಯನ ಸಾಮಾಗ್ರಿಗಳ ಸೌಲಭ್ಯವನ್ನು ಕೆಎಲ್‌ಎಂಎಸ್‌ ಪ್ರಕಾರ ಪಡೆದುಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

English summary
Karnataka Chief Minister BS Yediyurappa On Monday launches the Karnataka Learning management system , an initiative that would benefit nearly 4.5 lakh students and 24000 teachers to make an impact, on their learning and teaching respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X