ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ರಾಜಕಾರಣಕ್ಕೆ ಬರುವ ಬಗ್ಗೆ ಜನಾರ್ದನ ರೆಡ್ಡಿ ಹೇಳುವುದೇನು?

|
Google Oneindia Kannada News

Recommended Video

Janardhana Reddy says, his wife Lakshmi Aruna will not contest for Karnataka assembly elections 2018

ಕೊಪ್ಪಳ, ಸೆಪ್ಟೆಂಬರ್ 11 : 'ನಮ್ಮ ಕುಟುಂಬದಲ್ಲಿ ಮೂವರು ಅಣ್ಣ-ತಮ್ಮಂದಿರು ರಾಜಕೀಯವಾಗಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ನನ್ನ ಪತ್ನಿ ಲಕ್ಷ್ಮೀ ಅರುಣಾ ರಾಜಕೀಯಕ್ಕೆ ಬರುವುದಿಲ್ಲ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸಂಕ್ರಾಂತಿ ನಂತರ ಮತ್ತೆ ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಪ್ರತ್ಯಕ್ಷ!ಸಂಕ್ರಾಂತಿ ನಂತರ ಮತ್ತೆ ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಪ್ರತ್ಯಕ್ಷ!

ಆನೆಗೊಂದಿ ಸಮೀಪದ ಪಂಪ ಸರೋವರಕ್ಕೆ ಜನಾರ್ದನ ರೆಡ್ಡಿ ಪತ್ನಿ ಜೊತೆ ಆಗಮಿಸಿ ಶನಿವಾರ ಪೂಜೆ ಸಲ್ಲಿಸಿದರು. ಗಂಗಾವತಿ ಕ್ಷೇತ್ರದಿಂದ ಲಕ್ಷ್ಮೀ ಅರುಣಾ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಹಬ್ಬಿರುವ ಸುದ್ದಿಗಳನ್ನು ಅವರು ತಳ್ಳಿ ಹಾಕಿದರು.

 Lakshmi Aruna will not contest for assembly elections says Janardhana Reddy

'ನಾನು ಅಥವ ನನ್ನ ಪತ್ನಿ ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾದದರೆ ಜನರು ಮುಕ್ತವಾಗಿ ನಮ್ಮನ್ನು ಸ್ವಾಗತ ಮಾಡಲಿದ್ದಾರೆ. ಆದರೆ, ಲಕ್ಷ್ಮೀ ಅರುಣಾ ಅವರು ರಾಜಕಾರಣಕ್ಕೆ ಬರುವುದಿಲ್ಲ. ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

'ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹಬ್ಬಿವೆ. ಇದು ಕೇವಲ ವದಂತಿ ಮಾತ್ರ. ಸಾವಿರಾರು ಕಾರ್ಯಕರ್ತರು ಮುಕ್ತವಾಗಿ ನಮ್ಮನ್ನು ಸ್ವಾಗತಿಸುತ್ತಾರೆ ಎಂದು ತಿಳಿದಿದೆ. ಆದರೆ, ಸ್ಥಳೀಯ ನಾಯಕರಿಗೆ ಆದ್ಯತೆ ಸಿಗಬೇಕು. ಪತ್ನಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ' ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಳ್ಳಾರಿ ಭೇಟಿ ನೀಡಲು ರೆಡ್ಡಿಗೆ ಸುಪ್ರೀಂ ಒಪ್ಪಿಗೆ ಇಲ್ಲಬಳ್ಳಾರಿ ಭೇಟಿ ನೀಡಲು ರೆಡ್ಡಿಗೆ ಸುಪ್ರೀಂ ಒಪ್ಪಿಗೆ ಇಲ್ಲ

'ನನ್ನ ಹಿರಿಯ ಸಹೋದರ ಕರುಣಾಕರ ರೆಡ್ಡಿ ಶಾಸಕ ಸಚಿವರಾಗಿದ್ದರು. ನಾನು ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಮತ್ತೊಬ್ಬ ಸಹೋದರ ಸೋಮಶೇಖರ ರೆಡ್ಡಿ ಕೆಎಂಎಫ್‌ ಅಧ್ಯಕ್ಷರಾಗಿದ್ದು. ನನ್ನ ಸ್ನೇಹಿತ ಶ್ರೀರಾಮುಲು ಸಚಿವರಾಗಿದ್ದರು, ಈಗ ಸಂಸದರಾಗಿದ್ದಾರೆ. ನಮ್ಮ ಕುಟುಂಬದಿಂದ ಇನ್ಯಾರೂ ರಾಜಕಾರಣಕ್ಕೆ ಬರುವುದಿಲ್ಲ' ಎಂದರು.

English summary
Former minister Janardhana Reddy said his wife Lakshmi Aruna will not contest for Karnataka assembly elections 2018. He denied the reports that Lakshmi Aruna will contest for election form Gangavathi constituency, Koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X