• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಎಲ್‌ಸಿ ಚುನಾವಣೆ, ಪಟ್ಟಿಯಲ್ಲಿ ವಿಜಯೇಂದ್ರ ಮತ್ತು ನನ್ನ ಹೆಸರು: ಲಕ್ಷ್ಮಣ ಸವದಿ

|
Google Oneindia Kannada News

ಬೆಂಗಳೂರು, ಮೇ 16: ರಾಜ್ಯದ ಮುಂಬುರುವ ಎಂಎಲ್‌ಸಿ ಚುನಾವಣೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ಕರ್ನಾಟಕ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ತಮ್ಮ ಹೆಸರು ಸೇರಿದಂತೆ 20 ಹೆಸರುಗಳನ್ನು ಬಿಜೆಪಿ ಕೋರ್ ಕಮಿಟಿಯ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಬಿಜೆಪಿಯ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಲಕ್ಷ್ಮಣ ಸವದಿ ಅವರ ಎಂಎಲ್‌ಸಿ ಅವಧಿಯು ಇದೇ ಜೂನ್‌ನಲ್ಲಿ ಕೊನೆಗೊಳ್ಳಲಿದ್ದು ಈ ಕುರಿತಂತೆ ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, "ನಾವು ನಮ್ಮ ಪಕ್ಷದಲ್ಲಿ ಶಿಸ್ತಿನ ಕಾರ್ಯಕರ್ತರು ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಸದಾ ಬದ್ಧರಾಗಿರುತ್ತೇವೆ" ಎಂದು ತಾವು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ಭಾರಿ ತಯಾರಿಯಲ್ಲಿದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಐದು ಹೆಸರುಗಳನ್ನು ಮತ್ತು ಎಂಎಲ್‌ಸಿ ಚುನಾವಣೆಗೆ ಬಿಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ಕರ್ನಾಟಕ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ 20 ಹೆಸರುಗಳನ್ನು ಬಿಜೆಪಿ ಕೋರ್ ಕಮಿಟಿಯಲ್ಲಿ 20 ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ.

ರಾಜ್ಯಸಭೆಗೆ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳು:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ,
ಮಾಜಿ ಎಂಎಲ್ಸಿ ಲೆಹರ್ ಸಿಂಗ್,
ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು
ಕೆ ಸಿ ರಾಮಮೂರ್ತಿ

20 names shortlisted for MLC polls: Minister Savadi

ಎಂಎಲ್‌ಸಿಗೆ ಶಿಫಾರಸಾದ ಸಂಭಾವ್ಯ ಅಭ್ಯರ್ಥಿಗಳು

ಬಿ ವೈ ವಿಜಯೇಂದ್ರ,
ಎನ್ ಎಲ್ ನರೇಂದ್ರಬಾಬು,
ಛಲವಾದಿ ನಾರಾಯಣಸ್ವಾಮಿ,
ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ,
ಲಕ್ಷ್ಮಣ ಸವದಿ,
ಮಾಜಿ ಎಂಎಲ್ ಸಿ ಭಾನುಪ್ರಕಾಶ್ ಮತ್ತಿತರರು.

   ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada
   English summary
   Minister Lakshman Savadi said, his and BY Vijayendra names among 20 probable BJP candidates for upcoming MLC elections. Speaking to reporters here on Sunday, Savadi said, 'We are disciplined party workers and will abide by the high command's decision,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X