ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ಸಂಸ್ಥೆ ನೌಕರರಿಗೆ ಸಿಹಿ ಸುದ್ದಿ ನೀಡಿದ ಲಕ್ಷ್ಮಣ ಸವದಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 17 : ಕೊರೊನಾ ಎಲ್ಲಾ ಕ್ಷೇತ್ರಗಳಿಗೂ ಹೊಡೆತ ನೀಡಿದೆ. ಸಾರಿಗೆ ಕ್ಷೇತ್ರದ ಮೇಲೆಯೂ ಇದು ಪರಿಣಾಮ ಬೀರಿದೆ. ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ವರದಿಗಳು ಹರುತ್ತಿವೆ.

ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ವೇತನ ನೀಡದೆ ಇರುವುದಿಲ್ಲ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಸ್ಆರ್‌ಟಿಸಿ ನೇಮಕಾತಿ; 3745 ಹುದ್ದೆಗೆ ಮೇ 5ರ ತನಕ ಅರ್ಜಿ ಹಾಕಿ ಕೆಎಸ್ಆರ್‌ಟಿಸಿ ನೇಮಕಾತಿ; 3745 ಹುದ್ದೆಗೆ ಮೇ 5ರ ತನಕ ಅರ್ಜಿ ಹಾಕಿ

ಎಲ್ಲಾ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿಗೆ ಸರ್ಕಾರ ವೇತನ ಪಾವತಿ ಮಾಡಲಿದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಮೂರು ತಿಂಗಳ ವೇತನವನ್ನು ಮುಂಗಡವಾಗಿ ನೀಡಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

2ನೇ ಹಂತದ ಲಾಕ್ ಡೌನ್; ಕೆಎಸ್ಆರ್‌ಟಿಸಿ ಬುಕ್ಕಿಂಗ್ ರದ್ದು2ನೇ ಹಂತದ ಲಾಕ್ ಡೌನ್; ಕೆಎಸ್ಆರ್‌ಟಿಸಿ ಬುಕ್ಕಿಂಗ್ ರದ್ದು

 Lakshman Savadi Clarification On Salaries Of Employees

ಮುಖ್ಯಮಂತ್ರಿಗಳು ಒಂದು ತಿಂಗಳ ವೇತನವನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಲಕ್ಷಣ ಸವದಿ ನೌಕರರಿಗೆ ಭರವಸೆ ನೀಡಿದ್ದಾರೆ.

ಲಾಕ್ ಡೌನ್; ನಷ್ಟದ ಮೊತ್ತ ಅಂದಾಜಿಸಿದ ಕೆಎಸ್ಆರ್‌ಟಿಸಿ ಲಾಕ್ ಡೌನ್; ನಷ್ಟದ ಮೊತ್ತ ಅಂದಾಜಿಸಿದ ಕೆಎಸ್ಆರ್‌ಟಿಸಿ

ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಘೋಷಣೆ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.

ಈ ನಾಲ್ಕು ನಿಗಮಗಳಿಗೆ ಟಿಕೆಟ್ ಹಣ ಬಿಟ್ಟರೆ ಬೇರೆ ಆದಾಯವಿಲ್ಲ. ಈಗ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.

ಒಟ್ಟು ನಾಲ್ಕು ನಿಗಮಗಳಲ್ಲಿ 1.2 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಆದರೆ, ಸಿಬ್ಬಂದಿಗೆ ವೇತನ ನೀಡುವ ಸ್ಥಿತಿಯಲ್ಲಿ ಸಂಸ್ಥೆಗಳು ಇಲ್ಲ ಎಂಬ ವರದಿಗಳು ಹಬ್ಬಿವೆ. ಆದ್ದರಿಂದ, ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

English summary
Karnataka transport minister Lakshman Savadi said that no employee of KSRTC and BMTC will be left without salaries. Due to lockdown transport corporation suffered huge loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X