ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ ಶೌಚಾಲಯದಲ್ಲಿ 3 ದಿನಗಳಿಂದ ಸಿಲುಕಿದ್ದ ವ್ಯಕ್ತಿ ರಕ್ಷಣೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 17: ತುಂಗಾ ನದಿಯ ಪ್ರವಾಹದಿಂದಾಗಿ ಮೂರು ದಿನಗಳ ಕಾಲ ಶೃಂಗೇರಿ ಶೌಚಾಲಯದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸುವಲ್ಲಿ ಎಎನ್‌ಎಫ್‌ ಹಾಗೂ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಈ ಘಟನೆ ನಡೆದಿದೆ, ಕಾರ್ಮಿಕ ವಿನೋದ್‌ ಮಂಡ್ಲೆ ಶೌಚಾಲಯದಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ, ಶೃಂಗೇರಿಯ ಗಾಂಧಿ ಮೈಧಾನದಲ್ಲಿರುವ ಶೌಚಾಲಯಕ್ಕೆ ಕಳೆದ ಮೂರು ದಿನಗಳ ಹಿಂದೆ ಹೋಗಿದ್ದ ವಿನೋದ್‌ ನೀರಿನಲ್ಲಿ ಸಿಲುಕಿಕೊಂಡಿದ್ದ, ಈತ ಬಿಹಾರ ಮೂಲದ ಕಾರ್ಮಿಕನಾಗಿದ್ದಾನೆ. ಈತನನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Labor rescue in toilet after three days

ದಕ್ಷಿಣ ಕನ್ನಡದಲ್ಲಿ ಉಕ್ಕಿ ಹರಿದ ನದಿಗಳು: ಬಹು ಭಾಗ ರಸ್ತೆ ಸಂಪರ್ಕ ಕಡಿತದಕ್ಷಿಣ ಕನ್ನಡದಲ್ಲಿ ಉಕ್ಕಿ ಹರಿದ ನದಿಗಳು: ಬಹು ಭಾಗ ರಸ್ತೆ ಸಂಪರ್ಕ ಕಡಿತ

ಚಿಕ್ಕಮಗಳೂರು, ಹಾಸನ, ಮಂಗಳೂರು, ಉಡುಪಿ, ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಬಿಡದೆ ಮಳೆ ಸುರಿಯುತ್ತಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ತುಂಗಾ ನದಿಯು ಭರ್ತಿಯಾಗಿದ್ದು ಹರಿಯಲಾರಂಭಿಸಿದೆ ಈ ನೀರು ಸುತ್ತಮುತ್ತಲ ಪ್ರದೇಶಗಳಿಗೆ ಹಾನಿಯುಂಟು ಮಾಡಿದೆ. ಜನರು ಆತಂಕಕ್ಕೀಡಾಗಿದ್ದಾರೆ, ಹಲವು ಮನೆಗಳು ಜಲಾವೃತವಾಗಿದೆ.

English summary
Fire fighter team rescued labor who stranded in toilet in Shrungeri after three days on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X