ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸ್ಮಾ ಶಾಲೆಗಳಲ್ಲಿ 1ನೇ ತರಗತಿಯಿಂದ ಕನ್ನಡ ಕಡ್ಡಾಯ

By Ashwath
|
Google Oneindia Kannada News

ಬೆಂಗಳೂರು, ಮೆ. 15: ರಾಜ್ಯದಲ್ಲಿರುವ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ(ಕುಸ್ಮಾ) ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿಯಿಂದ ಒಂದು ಕಡ್ಡಾಯ ಭಾಷೆಯಾಗಿ ಕನ್ನಡವನ್ನು ಕಲಿಸಲಾಗುತ್ತದೆ.

ಕುಸ್ಮಾ ಅಧ್ಯಕ್ಷ ಪ್ರೊ.ವಿ.ಆರ್‌.ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಸಿಬಿಎಸ್‌ಇ ಹಾಗೂ ಐಸಿಎಸ್‌‌‌ಇ ಪಠ್ಯಕ್ರಮಗಳಿಗೂ ಈ ನೀತಿ ಅನ್ವಯವಾಗಲಿದೆ ಎಂದು ಹೇಳಿದರು.

ಸುಪ್ರೀಂ ತೀರ್ಪ‌ನ್ನು ಸ್ವಾಗತಿಸಿದ ಮೇಲೆ ಕುಸ್ಮಾ ಕನ್ನಡ ವಿರೋಧಿ ಸಂಘಟನೆ ಎಂಬ ತಪ್ಪು ಅಭಿಪ್ರಾಯ ರಾಜ್ಯದ ವಿದ್ವತ್ ವಲಯ, ಕನ್ನಡಪರ ಸಂಘಟನೆಗಳಲ್ಲಿ ಬಂದಿದೆ. ನಿಜವಾಗಿಯೂ ನಮ್ಮದು ಮಾಧ್ಯಮಕ್ಕಷ್ಟೇ ವಿರೋಧ. ಭಾಷಾ ಮಾಧ್ಯಮದ ಆಯ್ಕೆ ಪೋಷಕರಿಗೆ ಸಿಗಬೇಕೆಂಬುದಷ್ಟೇ ನಮ್ಮ ವಾದ. ಕನ್ನಡ ಭಾಷೆ ಕಲಿಸಲು ನಮ್ಮಲ್ಲಿ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

KUSMA to make Kannada

ಕುಸ್ಮಾ ವ್ಯಾಪ್ತಿಯಲ್ಲಿ 1800 ಶಾಲೆಗಳಲ್ಲದೇ 6800 ಖಾಸಗಿ ಶಾಲೆಗಳಿವೆ. ಈಗ ಕುಸ್ಮಾ ವ್ಯಾಪ್ತಿಗೆ ಬರುವ ಶಾಲೆಗಳ ಜತೆಗೆ ಇತರೆ ಖಾಸಗಿ ಶಾಲೆಗಳಲ್ಲೂ ಕನ್ನಡ ಕಲಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್‌‌‌ ಈಗಾಗಲೇ ತಿರಸ್ಕರಿಸಿದೆ. ಮತ್ತೊಮ್ಮೆ ರಾಜ್ಯ ಸರ್ಕಾರ ಈ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ‌ ಸಲ್ಲಿಸಿ ವೃಥಾ ಸಮಯ ಮತ್ತು ಹಣ ಹಾಳು ಮಾಡಿಕೊಳ್ಳಲು ಹೊರಟಿದೆ ಎಂದರು.

English summary
All CBSE and ICSE affiliated schools under the Karnataka Unaided School Management Association (KUSMA) will be asked to compulsorily teach Kannada as a subject from Standard I, from the academic year 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X