ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ತಿಕ್ ಮದ್ವೆಗೆ ಮಂಟಪವಾದ ರೈತ ಭವನ

By ಎಲ್ಕೆ ಕೊಡಗು
|
Google Oneindia Kannada News

ಕುಶಾಲನಗರ, ಅ.29: ಇಲ್ಲಿನ ಉದ್ಯಮಿ ಕೂಡಕಂಡಿ ನಾಣಯ್ಯ ಅವರ ಸುಪುತ್ರಿ ರಾಜಶ್ರೀ ಅವರ ಜೊತೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ಮದುವೆ ಅಕ್ಟೋಬರ್ 29 ಹಾಗೂ 30ರಂದು ನೆರವೇರಲಿದೆ.

ಎಲ್ಲವೂ ಸರಿ ಹೋಗಿದ್ದರೆ ಇಷ್ಟರಲ್ಲೇ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಬೇಕಾಗಿತ್ತು. ಆದರೆ ಮೈತ್ರಿಯಾಗೌಡ ವಿವಾಹ ನಿಶ್ಚಯ ಕಾರ್ಯಕ್ರಮದ ದಿನ (ಆಗಸ್ಟ್ 27)ದಂದೇ ಎಂಟ್ರಿ ಕೊಡುವ ಮೂಲಕ ಕಾರ್ತಿಕ್ ಗೌಡ ಯಾರು ಎಂಬುದು ಇಡೀ ಕರ್ನಾಟಕ ಮಾತ್ರವಲ್ಲದೆ, ದೇಶದಲ್ಲೇ ಗೊತ್ತಾಗಿ ಹೋಗಿತ್ತು. [ಹೊಸ ಬಾಳಿನ ಹೊಸಿಲಲ್ಲಿರುವ ಕಾರ್ತಿಕ್ ಗೌಡಗೆ ರಿಲೀಫ್]

ಈ ಪ್ರಕರಣದಿಂದಲೇ ತಂದೆಯಾಗಿದ್ದ ಡಿ.ವಿ.ಸದಾನಂದ ಗೌಡರು ತಮ್ಮ ರೈಲ್ವೆ ಖಾತೆಯನ್ನು ತಲೆದಂಡ ತರಬೇಕಾಯಿತು. ಇದೆಲ್ಲಾ ಫ್ಲಾಸ್‍ಬ್ಯಾಕ್ ಬಳಿಕ ಇದೀಗ ತಮ್ಮ ಸುಪುತ್ರ ಕಾರ್ತಿಕ್ ಗೌಡ ಮತ್ತು ಸಂಬಂಧಿ ಕೂಡಕಂಡಿ ನಾಣಯ್ಯ ಅವರ ಸುಪುತ್ರಿ ರಾಜಶ್ರೀ (ಸ್ವಾತಿ)ಯೊಂದಿಗೆ ಹಸೆಮಣೆ ಏರುತ್ತಿರುವುದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದಗೌಡ ಸೇರಿದಂತೆ ಇಡೀ ಕುಟುಂಬಕ್ಕೆ ಸಂತಸ ತಂದಿದೆ.

ಕೊಡಗಿನ ಕುಶಾಲನಗರದ ಉದ್ಯಮಿ ಕೊಡಕಂಡಿ ನಾಣಯ್ಯರವರ ಪುತ್ರಿ ರಾಜಶ್ರೀ(ಸ್ವಾತಿ) ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ವಿವಾಹ ಮಹೋತ್ಸವವು ಅ.29 ಮತ್ತು 30 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿದ್ದು, ಈಗಾಗಲೇ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ.

ಮೂಲತಃ ದಕ್ಷಿಣ ಕನ್ನಡದವರು ಮತ್ತು ಕೊಡಗಿನ ಅಳಿಯರಾಗಿರುವ ಡಿ.ವಿ.ಸದಾನಂದಗೌಡ ಅವರು ಕುಶಾಲನಗರ ಬಳಿಯ ಗುಡ್ಡೆಮನೆ ಮನೆತನದ ಡಾಟಿ ಅವರನ್ನು ವಿವಾಹವಾಗಿದ್ದು, ಅದೇ ರೀತಿ ತಮ್ಮ ಪುತ್ರನಿಗೂ ಕೂಡ ಗುಡ್ಡೆ ಹೊಸೂರಿನ ಕೂಡಕಂಡಿ ನಾಣಯ್ಯ ಮತ್ತು ಸುಧಾ ದಂಪತಿಗಳ ಪುತ್ರಿ ರಾಜಶ್ರೀ ಅವರನ್ನು ತನ್ನ ಸೊಸೆ ಮಾಡಿಕೊಳ್ಳಲಿದ್ದಾರೆ.

 ಮದುವೆಗೆ ಕಾಲ ಕೂಡಿ ಬಂದಿದೆ

ಮದುವೆಗೆ ಕಾಲ ಕೂಡಿ ಬಂದಿದೆ

ಕೊಡಗು ಗೌಡ ಸಂಪ್ರದಾಯದಂತೆ ಇಂದು ಚಪ್ಪರ ಸಮಾರಂಭ ನಾಳೆ ಧಾರಾ ಮುಹೂರ್ತ ನಡೆಯಲಿದ್ದು, ಕುಶಾಲನಗರದ ರೈತ ಸಹಕಾರ ಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ವಿವಾಹ ಮಹೋತ್ಸವಕ್ಕೆ ಕೇಂದ್ರ ಸಚಿವರು, ರಾಜ್ಯ ಸಚಿವರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ.

ಕಲ್ಯಾಣ ಮಂಟಪವಾದ ರೈತ ಸಹಕಾರ ಭವನ

ಕಲ್ಯಾಣ ಮಂಟಪವಾದ ರೈತ ಸಹಕಾರ ಭವನ

ಮದುವೆಗೆ ಆಗಮಿಸುವ ಸುಮಾರು 10 ರಿಂದ 15 ಸಾವಿರ ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 7 ಎಕರೆ ವಿಸ್ತೀರ್ಣ ಹೊಂದಿರುವ ಕಲ್ಯಾಣ ಮಂಟಪವಾದ ರೈತ ಸಹಕಾರ ಭವನವನ್ನು ತುಂಬಾ ಸುಂದರವಾಗಿ ಸಿಂಗರಿಸಿ ಸಜ್ಜುಗೊಳಿಸಲಾಗಿದೆ.
ಬೆಂಗಳೂರಿನ ಪ್ರಖ್ಯಾತ ರಾಜ್ಯ ಎಂಟರ್ ಪ್ರೈಸಸ್ ಹಾಗೂ ಡೇಕೋರೆಟರ್ ಮತ್ತು ಶಾಮಿಯಾನದ ತಂಡದವರು ರೈತ ಸಹಕಾರ ಭವನದ ಪ್ರವೇಶದ ಧ್ವಾರಕ್ಕೆ ಅತ್ಯಾರ್ಷಕವಾದ ಸ್ವಾಗತ ಕಮಾನು ಜೊತೆಗೆ ವಧುವರರ ನಾಮಫಲಕವನ್ನು ಅಳವಡಿಸಲಾಗುತ್ತಿದೆ

ವಾಹನ ನಿಲುಗಡೆ, ಭಕ್ಷ್ಯಬೋಜನ ವ್ಯವಸ್ಥೆ

ವಾಹನ ನಿಲುಗಡೆ, ಭಕ್ಷ್ಯಬೋಜನ ವ್ಯವಸ್ಥೆ

ವಾಹನ ನಿಲುಗಡೆಗೆ ಅತೀಗಣ್ಯರಿಗೆ ರೈತ ಸಹಕಾರ ಭವನದ ಪಕ್ಕದಲ್ಲಿ ಮತ್ತು ಇತರರಿಗೆ ಗುಂಡೂರಾವ್ ಜಾತ್ರಾಮೈದಾನದಲ್ಲಿ ಈಗಾಗಲೇ ಸಮತಟ್ಟುಗೊಳಿಸಿ ಸಿದ್ದಪಡಿಸಲಾಗಿದೆ. ಈ ಎರಡು ಸ್ಥಳಗಳಲ್ಲಿ ಸುಮಾರು 2 ರಿಂದ 3 ಸಾವಿರ ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗಿದೆ.

ಸುಮಾರು ರೂ.1.5 ಕೋಟಿ ರೂ. ವೆಚ್ಚದಲ್ಲಿ ಶಾಮಿಯಾನ, ಪುಷ್ಪಾಲಂಕಾರ, ಸಂಗೀತ, ಕಾರಂಜಿ, ವಿದ್ಯುತ್ ಅಲಂಕಾರವನ್ನು ಮಾಡಲಾಗಿದೆ. ವಿವಾಹ ಕಾರ್ಯದಲ್ಲಿ ಪಾಲ್ಗೊಳ್ಳುವವರಿಗೆ ವಿವಿಧ ಬಗೆಯ ಭಕ್ಷ್ಯಬೋಜನ ವ್ಯವಸ್ಥೆಯನ್ನು ಉದ್ಯಮಿ ನಾಣಯ್ಯ ಅವರ ಕುಟುಂಬ ನೆರವೇರಿಸಲಿದೆ.
ಗುಡ್ಡೆಮನೆ ಕಟುಂಬಸ್ಥರಲ್ಲಿ ಸಡಗರ ಸಂಭ್ರಮ

ಗುಡ್ಡೆಮನೆ ಕಟುಂಬಸ್ಥರಲ್ಲಿ ಸಡಗರ ಸಂಭ್ರಮ

ಗುಡ್ಡೆಹೊಸೂರಿನಲ್ಲಿರುವ ಡಾಟಿ ಅವರ ಕಟುಂಬವರ್ಗ ಗುಡ್ಡೆಮನೆ ಕಟುಂಬಸ್ಥರಲ್ಲಿ ಸಡಗರ ಸಂಭ್ರಮ ಮನೆಮಾಡಿದೆ. ಡಾಟಿಸದಾನಂದಗೌಡ ಅವರ ಸಹೋದರರು ಹಾಗೂ ಸಹೋದರಿಯರು ಸೇರಿದಂತೆ ಅವರ ಬಂಧುಬಾಂಧವರು ಈಗಾಗಲೆ ಆಗಮಿಸಿದ್ದಾರೆ. ಅಕ್ಟೋಬರ್ 29 ರಂದು ಗುಡ್ಡೆಹೊಸೂರಿನ ಡಾಟಿ ಅವರ ಮನೆಯಲ್ಲಿ ವಿವಿಧ ಶಾಸ್ತ್ರ ಹಾಗೂ ಪೂಜಾಕೈಂಕರ್ಯಗಳು ನೆರವೇರಲಿದ್ದು, 30 ರಂದು ಶುಕ್ರವಾರ ವಿವಾಹಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸಚಿವರು ಹಾಗೂ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

English summary
Kushalnagar: Preparations are in full swing for the marriage of Union Minister for Law D V Sadananda Gowda’s son Karthik Gowda with K Nanaiah's daughter Swathi. Raitha Sahakara Bhavana is decorated with flowers for the marriage event on Oct 29 and 30, 2015. The engagement of Karthik Gowda and Rajasri was held on August 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X