ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಟಾ ರಾಜಕಾರಣ : 4 ಬಿಜೆಪಿ ನಾಯಕರು ಜೆಡಿಎಸ್‌ಗೆ?

By ಕುಮಟಾ ಪ್ರತಿನಿಧಿ
|
Google Oneindia Kannada News

Recommended Video

ಕುಮಟಾ ರಾಜಕಾರಣ : 4 ಬಿಜೆಪಿ ನಾಯಕರು ಬಿಜೆಪಿಗೆ ಸೇರುವ ಸಾಧ್ಯತೆ | Oneindia Kannada

ಕುಮುಟಾ, ಜನವರಿ 23 : ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ರಾಜಕಾರಣದಲ್ಲಿ ಹೊಸ ಸುದ್ದಿ ಸದ್ದು ಮಾಡುತ್ತಿದೆ. ಬಿಜೆಪಿ‌ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ನಾಲ್ವರು ನಾಯಕರು ಜೆಡಿಎಸ್ ಸೇರುವ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಿದೆ.

ಈ ಕುರಿತು ಜೆಡಿಎಸ್‌ನ ಕುಮಟಾ ಕ್ಷೇತ್ರದ ಘೋಷಿತ ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ ಸುಳಿವು ಕೊಟ್ಟಿದ್ದಾರೆ. 'ನಾಲ್ವರು ಬಿಜೆಪಿಗರು ಜೆಡಿಎಸ್‌ಗೆ ಬರಲಿದ್ದಾರೆ. ಅದರಲ್ಲಿ ಓರ್ವ ಬಲಿಷ್ಠ ಮುಖಂಡರು ಕೂಡಾ ಸೇರಿದ್ದಾರೆ' ಎಂದು ಕೆಲವು ದಿನಗಳ ಹಿಂದೆ ಕಾರ್ಯಕ್ರಮದಲ್ಲಿ ಹೇಳಿಕೆ ಕೊಟ್ಟಿದ್ದರು.

ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?

ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಜೆಡಿಎಸ್‌ ಪಕ್ಷದಿಂದ ಮಾಜಿ ಶಾಸಕ ದಿನಕರ ಶೆಟ್ಟಿ ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಬಲ ತಂದಿದೆ. ಆದರೆ, ಇನ್ನುಳಿದ ಆಕಾಂಕ್ಷಿಗಳಲ್ಲಿ ಅಸಮಾಧಾನ ತಂದಿದೆ.

ಸಿನಿಮಾ ನಿರ್ಮಾಪಕ, ಬೆಳಗಾವಿ, ಬೆಂಗಳೂರಿನಲ್ಲಿ ವಾಸವಾಗಿರುವ ಸುಬ್ರಾಯ್ ವಾಳ್ಕೆ, ಉದ್ಯಮಿ ಯಶೋಧರ ನಾಯ್ಕ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು. ಕ್ಷೇತ್ರದ ರಾಜಕೀಯ ಚಿತ್ರಣದ ವಿವರ ಚಿತ್ರಗಳಲ್ಲಿ...

ವೈರಲ್ ಆಗಿದೆ ನಾಯಕರ ಚಿತ್ರ

ವೈರಲ್ ಆಗಿದೆ ನಾಯಕರ ಚಿತ್ರ

ಹಿಂದೂ ಪರ ಸಂಘಟನೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸೂರಜ್ ನಾಯ್ಕ ಸೋನಿ, ಬೆಳಕು ಗ್ರಾಮೀಣಾಭಿವೃದ್ಧಿ ಟೃಸ್ಟ್ ಮೂಲಕ ಸದ್ಯ ಪ್ರಚಾರದಲ್ಲಿರುವ ನಾಗರಾಜ ನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಗಾಯತ್ರಿ ಗೌಡ, ಎಸ್ಆರ್‌ಎಲ್ ಟ್ರಾವೆಲ್ಸ್ ಮಾಲೀಕ ವೆಂಕಟರಮಣ ಹೆಗಡೆ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಈ ನಾಲ್ವರು ಕುಳಿತು ಕೈ ಜೋಡಿಸಿರುವ ಚಿತ್ರ ಸದ್ಯ ಕ್ಷೇತ್ರದಲ್ಲಿ ವೈರಲ್ ಆಗಿದೆ.

ಬಿಜೆಪಿಗೆ 3ನೇ ಸ್ಥಾನ2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೂರಜ್ ನಾಯಕ್ ಸೋನಿ ಸ್ಪರ್ಧಿಸಿದ್ದರು. 28,411 ಮತಗಳನ್ನು ಪಡೆದು, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಬಿಜೆಪಿಗೆ 3ನೇ ಸ್ಥಾನ2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೂರಜ್ ನಾಯಕ್ ಸೋನಿ ಸ್ಪರ್ಧಿಸಿದ್ದರು. 28,411 ಮತಗಳನ್ನು ಪಡೆದು, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೂರಜ್ ನಾಯಕ್ ಸೋನಿ ಸ್ಪರ್ಧಿಸಿದ್ದರು. 28,411 ಮತಗಳನ್ನು ಪಡೆದು, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಪ್ರದೀಪ ಅವರ ಹೇಳಿಕೆಗೆ ಲಿಂಕ್ ಇದೆಯೇ?

ಪ್ರದೀಪ ಅವರ ಹೇಳಿಕೆಗೆ ಲಿಂಕ್ ಇದೆಯೇ?

'ತಾವೆಲ್ಲರೂ ಒಂದು. ಬಿಜೆಪಿಗೆ ಯಾರೇ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಕೂಡ ನಾವೆಲ್ಲ ಒಟ್ಟಾಗಿ ಕೆಲಸ ಮಾಡುತ್ತೇವೆ' ಎಂದು ಕೈ ಜೋಡಿಸಿ ನೀಡಿರುವ ಹೇಳಿಕೆಯೊಂದಿಗೆ ಫೋಟೋ ವೈರಲ್ ಆಗಿದೆ. ಆದರೆ, ಈ ಫೋಟೊಗೂ ಜೆಡಿಎಸ್‌ನ ಪ್ರದೀಪ ನಾಯಕ ದೇವರಬಾವಿ ನೀಡಿರುವ ಹೇಳಿಕೆಗೂ ಸಂಬಂಧವಿದೆಯೇ? ಎಂದು ಸದ್ಯ, ಕುಮಟಾ- ಹೊನ್ನಾವರ ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ.

ಹಾಲಿ ಶಾಸಕಿ ಶಾರದಾ ಶೆಟ್ಟಿ

ಹಾಲಿ ಶಾಸಕಿ ಶಾರದಾ ಶೆಟ್ಟಿ

ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕಿ ಶಾರದಾ ಶೆಟ್ಟಿ ಉಳಿದವರಿಗೆ ಪ್ರಬಲ ಪೈಪೋಟಿ ನೀಡಬಲ್ಲರು. "ಅಮ್ಮ" ಅಂತಲೇ ಪ್ರಚಾರ ಪಡೆಯುತ್ತಿರುವ ಶಾರದಾ ಶೆಟ್ಟಿಯವರ ಅಭಿವೃದ್ಧಿ ಕಾರ್ಯಗಳೇ ಅವರನ್ನು ಗೆಲ್ಲಿಸಲಿದೆ ಎಂಬುದು ಕಾಂಗ್ರೆಸ್ ಪಕ್ಷದ ನಾಯಕರ ಅಭಿಪ್ರಾಯ. ಪರೇಶ್ ಮೇಸ್ತ ಸಾವಿನ ಪ್ರಕರಣ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲಿದೆ ಎಂಬ ಅಭಿಪ್ರಾಯವೂ ಇದೆ.

180 ಮತಗಳ ಸೋಲು

180 ಮತಗಳ ಸೋಲು

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾರದಾ ಶೆಟ್ಟಿ 36,756 ಮತ ಪಡೆದು ಜಯಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರ ಶೆಟ್ಟಿ 36,336 ಮತ, ಪಡೆದು ಕೇವಲ 180 ಮತದ ಅಂತದಿಂದ ಸೋಲು ಕಂಡಿದ್ದರು. ಬಿಜೆಪಿಯ ಸೂರಜ್ ನಾಯಕ್ ಸೋನಿ 28,411 ಮತಗಳನ್ನು ಪಡೆದಿದ್ದರು.

English summary
More than 5 aspirants for BJP ticket in Kumta assembly constituency, Uttara Kannada. 4 BJP leaders may join JDS soon. Sharda Mohan Shetty sitting MLA of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X