ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಗ್ರಾಮ ವಾಸ್ತವ್ಯ: ಲಾಭ ಜೆಡಿಎಸ್‌ಗೋ, ಕಾಂಗ್ರೆಸ್‌ಗೊ?

|
Google Oneindia Kannada News

ಬೆಂಗಳೂರು, ಜೂನ್ 28: ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಸದ್ಯದ ರಾಜ್ಯ ರಾಜಕಾರಣದಲ್ಲಿ ಚರ್ಚೆಯ ವಿಷಯ. ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡ ಮಾನವನ್ನು ಮರಳಿ ಗಳಿಸಲು ಕುಮಾರಸ್ವಾಮಿ ಇರಿಸಿದ ಸರಿಯಾದ ಹೆಜ್ಜೆ 'ಗ್ರಾಮ ವಾಸ್ತವ್ಯ'.

ಆದರೆ ಮೈತ್ರಿ ಪಕ್ಷಗಳ ನಡುವೆ ಈಗಾಗಲೇ ಇರುವ ಗೊಂದಲಗಳ ಜೊತೆ ಗ್ರಾಮ ವಾಸ್ತವ್ಯದ ನಂತರ ಹೊಸದೊಂದು ಸಂಘರ್ಷ ಸೇರಿಕೊಂಡಿದ್ದು, ಅದುವೇ 'ಗ್ರಾಮ ವಾಸ್ತವ್ಯದ ಕ್ರೆಡಿಟ್ ಯಾರಿಗೆ ಸಲ್ಲಬೇಕು' ಎಂಬುದು.

ಮೇಲ್ನೋಟಕ್ಕೆ ನೋಡಿದಲ್ಲಿ, ಗ್ರಾಮ ವಾಸ್ತವ್ಯ ಎಂಬುದು ಕುಮಾರಸ್ವಾಮಿ ಅವರ ಒನ್‌ ಮ್ಯಾನ್ ಶೋ ನಂತೆ ಗೋಚರವಾಗುತ್ತಿದೆ. ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಕುಮಾರಸ್ವಾಮಿ ಕೇಂದ್ರಿತ ಕಾರ್ಯಕ್ರಮವೇ ಆಗಿದೆ. ಇದು ಕಾಂಗ್ರೆಸ್‌ನ ಕೆಲವು ನಾಯಕರಲ್ಲಿ ತಳಮಳ ತಂದಿದೆ.

ಗ್ರಾಮ ವಾಸ್ತವ್ಯ ಅಧಿಕಾರಿಗಳಿಗೆ ಒಂದು ಹೊಸ ಅನುಭವ, ಪಾಠ: ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಅಧಿಕಾರಿಗಳಿಗೆ ಒಂದು ಹೊಸ ಅನುಭವ, ಪಾಠ: ಕುಮಾರಸ್ವಾಮಿ

ಗ್ರಾಮ ವಾಸ್ತವ್ಯವನ್ನು ಸರ್ಕಾರದ ಕಾರ್ಯಕ್ರಮ ಎಂದು ಬಿಂಬಿಸುವುದಕ್ಕೂ ಮಿಗಿಲಾಗಿ ಕುಮಾರಸ್ವಾಮಿ ಕಾರ್ಯಕ್ರಮ ಎಂದು ಬಿಂಬಿಸುತ್ತಿರುವ ಬಗ್ಗೆ ಕಾಂಗ್ರೆಸ್‌ನ ಕೆಲವು ನಾಯಕರು ಈಗಾಗಲೇ ಸಿದ್ದರಾಮಯ್ಯ ಮತ್ತು ವೇಣುಗೋಪಾಲ್ ಅವರ ಬಳಿ ದೂರು ಹೇಳಿಕೊಂಡಿದ್ದಾರೆ.

ಪ್ರಿಯಾಂಕ್ ಖರ್ಗೆ ಕೆಲವು ಕಾರ್ಯಕ್ರಮದಲ್ಲಿ ಕಂಡರು

ಪ್ರಿಯಾಂಕ್ ಖರ್ಗೆ ಕೆಲವು ಕಾರ್ಯಕ್ರಮದಲ್ಲಿ ಕಂಡರು

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿಯೂ ಸಹ ಬಹುಪಾಲು ಜೆಡಿಎಸ್‌ನ ಶಾಸಕರು, ಮಂತ್ರಿಗಳೇ ಮುನ್ನೆಲೆಯಲ್ಲಿರುತ್ತಾರೆ. ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರು ಮಾತ್ರ ಎರಡು ಗ್ರಾಮ ವಾಸ್ತವ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಹೊರತು ಪಡಿಸಿದರೆ, ಕುಮಾರಸ್ವಾಮಿ ಅವರ ಆಪ್ತ ಜೆಡಿಎಸ್‌ ಮಂತ್ರಿಗಳು, ಶಾಸಕರುಗಳೇ ಗ್ರಾಮ ವಾಸ್ತವ್ಯದ ಮುನ್ನೆಲೆಯಲ್ಲಿದ್ದಾರೆ. ಇದು ಸಹ ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಆನೆಯಿಂದ ಮಾಲಾರ್ಪಣೆ: ಇನ್ನು ಕುಮಾರಸ್ವಾಮಿಯನ್ನು ತಡೆಯುವವರು ಯಾರು? ಆನೆಯಿಂದ ಮಾಲಾರ್ಪಣೆ: ಇನ್ನು ಕುಮಾರಸ್ವಾಮಿಯನ್ನು ತಡೆಯುವವರು ಯಾರು?

ಡಿಸಿಎಂ ಪರಮೇಶ್ವರ್ ಹೇಳಿದ್ದೇನು?

ಡಿಸಿಎಂ ಪರಮೇಶ್ವರ್ ಹೇಳಿದ್ದೇನು?

ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗುತ್ತಿದ್ದಂತೆ, ಡಿಸಿಎಂ ಪರಮೇಶ್ವರ್ ಅವರು, ಗ್ರಾಮ ವಾಸ್ತವ್ಯವು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಅದು ಸರ್ಕಾರದ ಕಾರ್ಯಕ್ರಮವಾಗಿದೆ. ಇದರಿಂದ ಮೈತ್ರಿಗೆ ಸಹಾಯವಾಗಲಿದೆ ಎಂದಿದ್ದಾರೆ. ಸಿದ್ದರಾಮಯ್ಯ ಸಹ ಇಂತಹುದೇ ಮಾತುಗಳನ್ನಾಡಿದ್ದಾರೆ.

ಬೀದರ್‌ ಜಿಲ್ಲೆಗೆ ಕೋಟ್ಯಂತರ ಅನುದಾನ ನೀಡಿದ ಕುಮಾರಸ್ವಾಮಿಬೀದರ್‌ ಜಿಲ್ಲೆಗೆ ಕೋಟ್ಯಂತರ ಅನುದಾನ ನೀಡಿದ ಕುಮಾರಸ್ವಾಮಿ

ಕುಮಾರಸ್ವಾಮಿ ಹೇಳಿದ್ದೇನು?

ಕುಮಾರಸ್ವಾಮಿ ಹೇಳಿದ್ದೇನು?

ಕುಮಾರಸ್ವಾಮಿ ಅವರು ಸಹ ಗ್ರಾಮ ವಾಸ್ತವ್ಯವನ್ನು ಪಕ್ಷದ ದೃಷ್ಟಿಯಿಂದ ನೋಡಲಾಗುವುದಿಲ್ಲವೆಂದೇ ಹೇಳಿದ್ದಾರಾದರೂ, ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡರು, ಸಚಿವರು, ಶಾಸಕರು ಮುನ್ನೆಲೆಯಲ್ಲಿರುವುದು ಮತ್ತು ಕಾರ್ಯಕ್ರಮವು ಮತ್ತು ಅದರ ಪ್ರಚಾರವು ತಮ್ಮ ಸುತ್ತಲೇ ಗಿರಕಿ ಹೊಡೆಯುವಂತೆ ಕುಮಾರಸ್ವಾಮಿ ನಿಗಾ ವಹಿಸಿರುವುದು ಅಸತ್ಯವೇನಲ್ಲ.

ಆಗ ಯಡಿಯೂರಪ್ಪ ಅವರು ಜಂಟಿ ವಾಸ್ತವ್ಯ ಮಾಡಿದ್ದರು

ಆಗ ಯಡಿಯೂರಪ್ಪ ಅವರು ಜಂಟಿ ವಾಸ್ತವ್ಯ ಮಾಡಿದ್ದರು

ಈ ಹಿಂದೆ 2006 ರಲ್ಲಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾಗಲೂ ಸಹ, ಆಗ ಮೈತ್ರಿ ಪಕ್ಷವಾಗಿದ್ದ ಬಿಜೆಪಿಗೆ ಸಹ ಇದೇ ಅನುಮಾನ ಬಂದಿತ್ತು. ಆಗ ಡಿಸಿಎಂ ಆಗಿದ್ದ ಯಡಿಯೂರಪ್ಪ ಅವರು ಒಂದು ದಿನ ಕುಮಾರಸ್ವಾಮಿ ಅವರ ಜೊತೆ ಜಂಟಿ ಗ್ರಾಮ ವಾಸ್ತವ್ಯ ಮಾಡಿದ್ದರು.

ವಿಕಲಚೇತನರ ಅಹವಾಲು: ಸ್ಥಳದಲ್ಲೇ ಪರಿಹಾರ ನೀಡಿದ ಕುಮಾರಸ್ವಾಮಿ ವಿಕಲಚೇತನರ ಅಹವಾಲು: ಸ್ಥಳದಲ್ಲೇ ಪರಿಹಾರ ನೀಡಿದ ಕುಮಾರಸ್ವಾಮಿ

ಕುಮಾರಸ್ವಾಮಿ-ಪರಮೇಶ್ವರ್ ಜಂಟಿ ಗ್ರಾಮ ವಾಸ್ತವ್ಯ

ಕುಮಾರಸ್ವಾಮಿ-ಪರಮೇಶ್ವರ್ ಜಂಟಿ ಗ್ರಾಮ ವಾಸ್ತವ್ಯ

ಈಗಲೂ ಸಹ ಇಂತಹುದೇ ಯೋಜನೆಯೊಂದನ್ನು ಕೆಪಿಸಿಸಿ ಡಿಸಿಎಂ ಪರಮೇಶ್ವರ್ ಅವರ ಮುಂದೆ ಇಟ್ಟಿದೆ ಎನ್ನಲಾಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕುಮಾರಸ್ವಾಮಿ ಅವರೊಂದಿಗೆ ಗ್ರಾಮ ವಾಸ್ತವ್ಯಕ್ಕೆ ತೆರಳುವ ಸಾಧ್ಯತೆ ಇಲ್ಲದಿಲ್ಲ.

ಉ. ಕರ್ನಾಟಕದ ಜನ ಜೆಡಿಎಸ್ ಸ್ವೀಕರಿಸದೇ ಇರುವುದು ಕುಮಾರಸ್ವಾಮಿ ಅಸಹನೆಗೆ ಕಾರಣವೇ?ಉ. ಕರ್ನಾಟಕದ ಜನ ಜೆಡಿಎಸ್ ಸ್ವೀಕರಿಸದೇ ಇರುವುದು ಕುಮಾರಸ್ವಾಮಿ ಅಸಹನೆಗೆ ಕಾರಣವೇ?

English summary
CM Kumaraswamy doing village stay in North Karnataka as if now. his village stay programs considering as huge success so congress and JDS fighting for the credits of village stay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X