ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಕಾವೇರಿ ಯೋಜನೆಗೆ ಕುಮಾರಸ್ವಾಮಿ ಅಸಮಾಧಾನ

By Manjunatha
|
Google Oneindia Kannada News

ಬೆಂಗಳೂರು, ಜೂನ್ 20: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಯೋಜನೆ ಅವೈಜ್ಞಾನಿಕ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಭಾರತ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವುದಿಲ್ಲ. ಆದರೆ, ಎಲ್ಲಾ ಷರತ್ತುಗಳೂ ಕರ್ನಾಟಕಕ್ಕೇ ಅನ್ವಯಿಸಬೇಕೆಂಬ ಯೋಜನೆಯಲ್ಲಿನ ನೀತಿ ಒಪ್ಪಲಾಗದು ಎಂದರು.

ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ಮತ್ತೆ ಚಾಲನೆ: ಕುಮಾರಸ್ವಾಮಿ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ಮತ್ತೆ ಚಾಲನೆ: ಕುಮಾರಸ್ವಾಮಿ

ಕಾಲ ಕಾಲಕ್ಕೆ ನೀರು ಬಿಡುವುದು, ನೀರು ಲಭ್ಯತೆಯ ಅಳತೆ ಮಾಡುವ ಅಧಿಕಾರ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕೆಂಬ ಸೂಚನೆ ಎಲ್ಲವೂ ನಮಗೆ ಮಾತ್ರ ಏಕೆ ? ನಮ್ಮ ಪಾಲಿನ ನೀರು ನಮಗೆ ಹಂಚಿಕೆಯಾದ ಮೇಲೆ ಯಾವ ಬೆಳೆ ಬೆಳೆಯಬೇಕೆನ್ನುವುದು ನಮ್ಮ ರೈತರ ಇಚ್ಚೆ ಎಂದು ಅವರು ಯೋಜನೆಯಲ್ಲಿನ ಲೋಪದೋಷಗಳನ್ನು ಗಮನಕ್ಕೆ ತಂದರು.

Kumaraswamy unhappy with cauvery water distribution plan of central government

ನೀರು ಇದೆಯೋ ಇಲ್ಲವೋ ಬೇಕಾಗಿಲ್ಲ ಆದರೆ ನೀರು ಕೊಡಿ ಎಂಬ ಧೋರಣೆ ಸರಿಯಲ್ಲ ಎಂದ ಅವರು, ಅಂತೆಯೇ ತಮಿಳುನಾಡಿನ ನೀರು ಸಮುದ್ರಕ್ಕೆ ಹರಿದರೂ ಪ್ರಶ್ನಿಸುವ ಹಕ್ಕು ನಮಗಿಲ್ಲ ಎಂಬುದು ನ್ಯಾಯ ಸಮ್ಮತವಲ್ಲ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.

ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ

ಜುಲೈನಲ್ಲಿ ಮಹದಾಯಿ ತೀರ್ಪು
ಮಹಾದಾಯಿ ವಿವಾದದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಜುಲೈನಲ್ಲಿ ಮಹಾದಾಯಿ ತೀರ್ಪು ಹೊರಬೀಳಲಿದೆ. ಈ ಹಂತದಲ್ಲಿ ಪ್ರಧಾನಿಯಾಗಲೀ ಬೇರಾರೇ ಆಗಲಿ ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದರು.

English summary
CM Kumaraswamy said 'we are unhappy with cauvery water distribution plan of central government. He says 'all conditions were applied to Karnataka only this is not acceptable'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X