ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ನೀರಿನ ಸಮಸ್ಯೆ ನೀಗಿಸಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03: ರಾಜ್ಯದ ನೀರಿನ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದು, ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಇಂದು ಚರ್ಚೆ ನಡೆಸಿದ್ದಾರೆ.

ಖಾತೆ ಬದಲಾಯಿಸಿ, ನನ್ನ ದಾರಿ ನನಗೆ : ಸಚಿವ ವೆಂಕಟರಮಣಪ್ಪ ಖಾತೆ ಬದಲಾಯಿಸಿ, ನನ್ನ ದಾರಿ ನನಗೆ : ಸಚಿವ ವೆಂಕಟರಮಣಪ್ಪ

ನದಿ ನೀರನ್ನು ಶುದ್ಧೀಕರಣಗೊಳಿಸಿ ಹಳ್ಳಿಗಳಿಗೆ ಪೂರೈಸುವ 'ಜಲಧಾರೆ' ಎಂಬ ನೂತನ ಯೋಜನೆಯ ರೂಪು ರೇಷೆಗಳನ್ನು ಈಗಾಗಲೇ ತಯಾರಿಸಿದ್ದು, ಯೋಜನೆ ಜಾರಿಗೆ ಸಿದ್ಧತೆ ನಡೆಯುತ್ತಿದೆ.

ಸಂಪುಟ ವಿಸ್ತರಣೆಗೆ ಮುನ್ನಾ ರಾಹುಲ್ ಗಾಂಧಿ-ಕುಮಾರಸ್ವಾಮಿ ಮಹತ್ವದ ಭೇಟಿ ಸಂಪುಟ ವಿಸ್ತರಣೆಗೆ ಮುನ್ನಾ ರಾಹುಲ್ ಗಾಂಧಿ-ಕುಮಾರಸ್ವಾಮಿ ಮಹತ್ವದ ಭೇಟಿ

ಈ ಬಗ್ಗೆ ಸ್ವತಃ ಮಾಹಿತಿ ನೀಡಿದ ಕುಮಾರಸ್ವಾಮಿ ಅವರು, ಈ ಯೋಜನೆಗಾಗಿ 70000 ಕೋಟಿ ಅಗತ್ಯ ಇದ್ದು, ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆ ಹಂತ ಹಂತವಾಗಿ ಪೂರ್ಣವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

Kumaraswamy planing to launch new drinking water project

'ಜಲಧಾರೆ' ಯೋಜನೆಯ ಯೋಜನಾ ವರದಿ ಈಗಾಗಲೇ ತಯಾರಾಗಿದೆ ಎಂದ ಅವರು, ಸರ್ಕಾರದ ಬೊಕ್ಕಸದಲ್ಲಿ ಈಗ ಹಣಕಾಸಿನ ಕೊರತೆ ಇರುವುದು ಸತ್ಯ, ಕೇಂದ್ರದಿಂದ ಅನುದಾನ ಬರುವುದು ಕೂಡಾ ಕಡಿತವಾಗಿದೆ ಎಂದು ಸಿಎಂ ಹೇಳಿದ್ದಾರೆ.

ದೇವೇಗೌಡ, ಕುಮಾರಸ್ವಾಮಿ ದೈವಾಂಶ ಸಂಭೂತರಂತೆ!ದೇವೇಗೌಡ, ಕುಮಾರಸ್ವಾಮಿ ದೈವಾಂಶ ಸಂಭೂತರಂತೆ!

ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತಿಸಿ, ಒತ್ತುವರಿ ತೆರವು ಮಾಡುವ ಕಾರ್ಯ ಮಾಡಲಾಗುವುದು ಈ ಕಾರ್ಯಾಚಾರಣೆಗೆ ಪಿಡಿಓಗಳು ಸಿದ್ಧವಾಗಿರಬೇಕು ಎಂದರು. ಪ್ರತಿ ಹಳ್ಳಿಗೂ ಕುಡಿಯುವ ನೀರು ತಲುಪಿಸುವುದು ಈ ಯೋಜನೆಯ ಉದ್ದೇಶ ಎಂದು ಅವರು ಹೇಳಿದರು.

English summary
CM Kumaraswamy planing to launch new drinking water project 'Jaladhare'. As per the project river water will be purified and supplied to villages and towns. This project need 70000 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X