ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡಳಿತದಲ್ಲಿ ಕನ್ನಡ ಬಳಸಿರೆಂದ ಎಚ್‌ಡಿಕೆ ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‌: ನೆಟ್ಟಿಗರ ಅಸಮಾಧಾನ

|
Google Oneindia Kannada News

Recommended Video

ಆಡಳಿತದಲ್ಲಿ ಕನ್ನಡ ಬಳಸಿ ಎಂದಿದ್ದ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು ಇಂಗ್ಲಿಷ್ ನಲ್ಲಿ | Oneindia Kannada

ಬೆಂಗಳೂರು, ಅಕ್ಟೋಬರ್ 25: ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಫರ್ಮಾನು ಹೊರಡಿಸಿದ ಕುಮಾರಸ್ವಾಮಿ ಅವರು, ತಾವೇ ಟ್ವಿಟ್ಟರ್‌ನಲ್ಲಿ ಇಂಗ್ಲಿಷ್‌ ಬಳಸಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ನಿನ್ನೆ ಸತತ ಮೂರು ಟ್ವೀಟ್‌ಗಳು ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದೆ. ಇದು ಕೆಲವು ನೆಟ್ಟಿಗರ ಕಣ್ಣು ಕೆಂಪಗಾಗಿಸಿವೆ. ಸಿಎಂ ಇಂಗ್ಲಿಷ್‌ ಟ್ವೀಟ್‌ಗೆ ಆಕ್ಷೇಪವನ್ನೂ ಕೆಲವು ವ್ಯಕ್ತಪಡಿಸಿದ್ದಾರೆ.

ರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿ ರಾಜ್ಯೋತ್ಸವದಿಂದ ಕನ್ನಡದಲ್ಲೇ ಬೋರ್ಡ್ ಹಾಕಿ ಇಲ್ಲವೇ ರೈಟ್ ಹೇಳಿ

ನಿನ್ನೆ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ವ್ಯತ್ಯಯ ಆದ ಕಾರಣ ಅವರು ಕೆಲವು ಕಾರ್ಯಕ್ರಮಗಳಿಗೆ ಹೋಗಲಾಗಲಿಲ್ಲ. ಅದರ ಬಗ್ಗೆ ಸಿಎಂ ಅವರ ಅಧಿಕೃತ ಖಾತೆಯಿಂದ ಮೂರು ಟ್ವೀಟ್‌ ಗಳನ್ನು ಮಾಡಲಾಗಿದ್ದು ಅವು ಮೂರೂ ಟ್ವೀಟ್‌ ಇಂಗ್ಲಿಷ್‌ನಲ್ಲಿದೆ.

ಸಿಎಂಗೆ ಕನ್ನಡ ಪ್ರೇಮ ಇಲ್ಲವೆ?

ಸಿಎಂಗೆ ಕನ್ನಡ ಪ್ರೇಮ ಇಲ್ಲವೆ?

ಕೇವಲ ಮೂರು ಟ್ವೀಟ್‌ಗಳನ್ನು ಇಂಗ್ಲಿಷ್‌ನಲ್ಲಿ ಮಾಡಿದರು ಎಂಬ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಅವರ ಕನ್ನಡ ಪ್ರೇಮವನ್ನು ಒರೆಗೆ ಹಚ್ಚುವಂತಿಲ್ಲ. ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿರಬೇಕು ಎಂದು ಕೆಲವು ದಿನಗಳ ಹಿಂದಷ್ಟೆ ಸ್ಪಷ್ಟವಾಗಿ ಹೇಳಿದ್ದರು. ಕನ್ನಡದಲ್ಲಿರುವ ಆದೇಶಗಳಿಗಷ್ಟೆ ಸಹಿ ಹಾಕುತ್ತೇನೆ ಎಂಬ ನಿರ್ಧಾರವನ್ನು ಅವರು ತಳೆದಿದ್ದರು ಇದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿ. ಅಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಕನ್ನಡಾಭಿಮಾನದ ಬಗ್ಗೆ ಅವರು ಮಾತನಾಡಿದ್ದಾರೆ.

ಟ್ವೀಟ್‌ಗಳು ಏಕೆ ಇಂಗ್ಲೀಷ್‌ನಲ್ಲಿ?

ಮುಖ್ಯಮಂತ್ರಿಗಳ ಅಧಿಕೃತ ಖಾತೆಯಲ್ಲಿ ಪ್ರತಿದಿನವೂ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳು, ಹಬ್ಬದ ಶುಭಾಷಯಗಳು ಇನ್ನಿತರೆ ವಿಷಯಗಳನ್ನು ಪ್ರಕಟಿಸಲಾಗುತ್ತಿರುತ್ತದೆ. ಈ ಖಾತೆಯ ಬಹುತೇಕ ಟ್ವೀಟ್‌ಗಳು ಕನ್ನಡದಲ್ಲಿ ಇರುತ್ತವೆ. ಕೆಲವು ಮುಖ್ಯವಾದ ಟ್ವೀಟ್‌ಗಳು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಇರುತ್ತವೆ. ಆದರೆ ನಿನ್ನೆ ಮಾಡಿದ ಮೂರು ಟ್ವೀಟ್‌ಗಳು ಕೇವಲ ಇಂಗ್ಲಿಷ್‌ ಭಾಷೆಯಲ್ಲಿವೆ.

ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ

ಪ್ರತಿಕ್ರಿಯೆಗಳು ಏನೆಂದು ಬಂದಿವೆ?

ಸಿಎಂ ಅವರ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಲಾಗಿರುವ ಇಂಗ್ಲಿಷ್‌ ಟ್ವೀಟ್‌ಗೆ ಕೆಲವು ಕನ್ನಡಪರ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, 'ಸರ್ಕಾರಿ ಕಡತಗಳು ಕನ್ನಡದಲ್ಲಿರಲಿ ಎಂದಿದ್ದ ನೀವೆ ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡುವುದು ಎಷ್ಟು ಸರಿ?' ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಆದೇಶವೇನು?

ಕುಮಾರಸ್ವಾಮಿ ಆದೇಶವೇನು?

ಕೇಂದ್ರ ಸರ್ಕಾರ ಹಾಗೂ ಅಂತರರಾಜ್ಯ ಕಡತಗಳನ್ನು ಹೊರತುಪಡಿಸಿ ಮುಖ್ಯಮಂತ್ರಿ ಕಚೇರಿಗೆ ಬರುವ ಎಲ್ಲ ಕಡತಗಳು ಕನ್ನಡದಲ್ಲೇ ಇರಬೇಕು ಎಂದು ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದಿಂದಲೇ ಈ ಆದೇಶ ಜಾರಿಗೆ ಬರಲಿದೆ. ಈ ಕುರಿತು ಸುತ್ತೋಲೆಯನ್ನು ಮುಖ್ಯ ಕಾರ್ಯದರ್ಶಿ ಹೊರಡಿಸಲಿದ್ದಾರೆ.

ಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರ ಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರ

English summary
CM HD Kumaraswamy orders to use Kannada language in administration but in official CM twitter handle tweets in English. Some tweeps are upset about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X