ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದರು ಕುಮಾರಸ್ವಾಮಿ

|
Google Oneindia Kannada News

Recommended Video

ಕುಮಾರಣ್ಣ ಹೀಗೆ ಅಂದುಕೊಂಡಿದ್ದಾದ್ರು ಏಕೆ..? | Oneindia Kannada

ಬೆಂಗಳೂರು, ಮಾರ್ಚ್‌ 04: ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಅವರು ಕೆಲವು ತಿಂಗಳುಗಳ ಹಿಂದೆ ರಾಜಕೀಯ ನಿವೃತ್ತಿಗೆ ಯೋಚಿಸಿದ್ದರಂತೆ!

ಹೌದು, ಅವರೇ ಈ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೇವಲ 38 ಸೀಟು ಬಂದಾಗ ಹತಾಶರಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಯೋಚಿಸಿದ್ದರಂತೆ ಕುಮಾರಸ್ವಾಮಿ.

ಕಡಿಮೆ ಸೀಟು ಬಂದಾಗ ಹತಾಶನಾಗಿ ರಾಜಕೀಯ ನಿವೃತ್ತಿಗೆ ಯೋಚನೆ ಮಾಡಿದ್ದೆ ಆದರೆ ಅಷ್ಟರಲ್ಲಿ ಕಾಂಗ್ರೆಸ್‌ ನಿಂದ ಕರೆ ಬಂತು. ನಾನು ನಿವೃತ್ತಿಯ ಯೋಚನೆಯಲ್ಲಿದ್ದಾಗ ಕಾಂಗ್ರೆಸ್ ನನ್ನ ಕೈ ಹಿಡಿಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಮೈಸೂರಿಂದ ಸ್ಪರ್ಧೆ? ಎಚ್‌ಡಿಕೆ ಲೆಕ್ಕಾಚಾರವೇನು? ನಿಖಿಲ್ ಕುಮಾರಸ್ವಾಮಿ ಮೈಸೂರಿಂದ ಸ್ಪರ್ಧೆ? ಎಚ್‌ಡಿಕೆ ಲೆಕ್ಕಾಚಾರವೇನು?

'ಕರ್ನಾಟಕ ಮುನ್ನಡೆ' ಸಂವಾದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

'ಮೈತ್ರಿ ಸರ್ಕಾರ ನಡೆಸುವುದು ಸವಾಲು'

'ಮೈತ್ರಿ ಸರ್ಕಾರ ನಡೆಸುವುದು ಸವಾಲು'

ಮೈತ್ರಿ ಸರ್ಕಾರ ಮುನ್ನಡೆಸುವುದು ಯಾವಾಗಲೂ ಸವಾಲು, 12 ವರ್ಷದ ಹಿಂದೆ ನಾನು ಮೈತ್ರಿ ಸರ್ಕಾರ ರಚಿಸಿದ್ದಾಗ ನನಗೆ ಹೆಚ್ಚಿನ ಅರ್ಹತೆ ಇರಲಿಲ್ಲ. ನಾನು ದೇವೇಗೌಡ ಅವರಮಗ ಎಂಬುದೊಂದೆ ನನಗಿದ್ದ ಅರ್ಹತೆ. ಆದರೆ ಆಗಿನ ಪರಿಸ್ಥಿತಿ ಬೇರೆ ಈಗಿನ ಪರಿಸ್ಥಿತಿ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.

ಭಾರತೀಯರ ವಿಜಯಾಚರಣೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪಭಾರತೀಯರ ವಿಜಯಾಚರಣೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ತೀವ್ರ ಆಕ್ಷೇಪ

ಜನರೇ ನನಗೆ ಸ್ಪೂರ್ತಿ: ಎಚ್‌ಡಿಕೆ

ಜನರೇ ನನಗೆ ಸ್ಪೂರ್ತಿ: ಎಚ್‌ಡಿಕೆ

ನನ್ನ ಭೇಟಿಗೆ ಬರುವ ಜನರೇ ನನಗೆ ಕೆಲಸ ಮಾಡಲು ಸ್ಫೂರ್ತಿ ಒದಗಿಸುತ್ತಾರೆ. ನನಗೆ ನನ್ನ ತಂದೆ ಆದರ್ಶ ಅವರೇ ನನಗೆ ಗುರು, ಅವರ ಮಾರ್ಗದರ್ಶನವೇ ನನಗೆ ಜನ ಸೇವೆಗೆ ದಾರಿ ತೋರುತ್ತಿದೆ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರನ್ನು ಹೇಗೆ ಮೇಲೆತ್ತಬೇಕು ಎಂದು ಸದಾ ಚಿಂತಿಸುತ್ತಿರುತ್ತೇನೆ ಎಂದು ಕುಮಾರಸ್ವಾಮಿ ಅವರು ಸಂವಾದದಲ್ಲಿ ಭಾವುಕರಾಗಿ ಹೇಳಿಕೊಂಡರು.

ಬಂಜಾರಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ : ಕುಮಾರಸ್ವಾಮಿ ಬಂಜಾರಾ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ : ಕುಮಾರಸ್ವಾಮಿ

ಕೆಲವು ಸಚಿವರ ಬಗ್ಗೆ ಅಸಮಾಧಾನ

ಕೆಲವು ಸಚಿವರ ಬಗ್ಗೆ ಅಸಮಾಧಾನ

ಪ್ರಸ್ತುತ ಸಂಪುಟದಲ್ಲಿನ ಕೆಲವು ಸಚಿವರ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ಅವರು, ಕೆಲವು ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದಾರೆ. ಅವರು ಕೇವಲ ತಮ್ಮ ಕ್ಷೇತ್ರಗಳಿಗಷ್ಟೆ ಸಚಿವರಾಗಿದ್ದಾರೆ ಈ ಬಗ್ಗೆ ಬೇಸರವಿದೆ ಎಂದು ಅವರು ಹೇಳಿದರು.

'ಲ್ಯಾಂಡ್ ಡೆವೆಲಪರ್ಸ್‌ ರಾಜಕಾರಣಿಗಳು ಹೆಚ್ಚಾಗಿದ್ದಾರೆ'

'ಲ್ಯಾಂಡ್ ಡೆವೆಲಪರ್ಸ್‌ ರಾಜಕಾರಣಿಗಳು ಹೆಚ್ಚಾಗಿದ್ದಾರೆ'

ಈಗೆಲ್ಲಾ ಜನರ ಸೇವೆ ಮಾಡಿ ರಾಜಕೀಯಕ್ಕೆ ಬಂದವರ ಸಂಖ್ಯೆ ಬಹಳ ಕಡಿಮೆ. ಅಬಕಾರಿ ಲಾಭಿ, ಶಿಕ್ಷಣದ ಲಾಭಿ ಇದ್ದಂತೆ ಈಗ ಲ್ಯಾಂಡ್ ಡೆವೆಲಪರ್ಸ್‌ ಲಾಭಿ ಇದೆ. ಅದನ್ನು ಮಾಡಿ ಲಾಭ ಮಾಡಿ ಅಧಿಕಾರಕ್ಕೆ ಬಂದವರೇ ಹೆಚ್ಚು, ಅಂತಹವರಿಂದ ಜನಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

English summary
CM Kumaraswamy thought of retiring from active politics when JDS got less seats in last assembly elections. He said congress hold my hands when i decided to quit politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X