ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ದೇವೇಗೌಡರ ಜೊತೆ ಕುಮಾರಸ್ವಾಮಿ ಮಹತ್ವದ ಚರ್ಚೆ

By Manjunatha
|
Google Oneindia Kannada News

Recommended Video

ಸಂಪುಟ ವಿಸ್ತರಣೆ ಹಿನ್ನೆಲೆ ಎಚ್ ಡಿ ದೇವೇಗೌಡ್ರನ್ನ ಭೇಟಿ ಮಾಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಜುಲೈ 16: ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದ್ದು ಕಾಂಗ್ರೆಸ್ ಮುಖಂಡರು ಹಾಗೂ ಕುಮಾರಸ್ವಾಮಿ ನಾಳೆ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಹೀಗಾಗಿ ಇಂದು ದೇವೇಗೌಡರ ಜತೆ ಚರ್ಚೆ ನಡೆಸಿದ್ದಾರೆ.

ನಾಳೆ ಉಪಮುಖ್ಯಮಂತ್ರಿ ಪರಮೇಶ್ವರ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರುಗಳ ಜತೆ ಕುಮಾರಸ್ವಾಮಿ ಕೂಡ ರಾಹುಲ್ ಅವರನ್ನು ಭೇಟಿ ಮಾಡಲು ತೆರಳಿದ್ದಾರೆ ಎನ್ನಲಾಗಿದ್ದು ಹಾಗಾಗಿ ಇಂದು ದೇವೇಗೌಡರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಸಂಪುಟ ವಿಸ್ತರಣೆ : 6 ಸ್ಥಾನಕ್ಕೆ 16ಕ್ಕೂ ಅಧಿಕ ಆಕಾಂಕ್ಷಿಗಳುಸಂಪುಟ ವಿಸ್ತರಣೆ : 6 ಸ್ಥಾನಕ್ಕೆ 16ಕ್ಕೂ ಅಧಿಕ ಆಕಾಂಕ್ಷಿಗಳು

ನಿಗಮ ಮಂಡಳಿಗಳ ಸ್ಥಾನಗಳೂ ಸಹ ನಾಳೆ ಇಥ್ಯರ್ಥವಾಗಲಿದ್ದು, ಕಾಂಗ್ರೆಸ್‌ಗೆ ಎಷ್ಟು, ಜೆಡಿಎಸ್‌ಗೆ ಎಷ್ಟು ಎಂಬುದು ನಾಎ ಇತ್ಯರ್ಥವಾಗಲಿದೆ ಅದರ ಬಗ್ಗೆ ದೇವೇಗೌಡರ ಬಳಿ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.

Kumaraswamy met Deve Gowda ahead of cabinet expansion

ಇದರ ಜೊತೆಗೆ ಸಿದ್ದರಾಮಯ್ಯ ಅವರು ಪದೇ ಪದೇ ಸರ್ಕಾರಕ್ಕೆ ಬರೆಯುತ್ತಿರುವ ಪತ್ರಗಳು, ಸಾಲಮನ್ನಾಕ್ಕಾಗಿ ವಿವಿಧ ಯೋಜನೆಗಳಿಗೆ ಕಡಿತ ಮಾಡಬೇಕಿರುವ ಅನುದಾನ ಇನ್ನೂ ಕೆಲವು ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಅತೃಪ್ತ ಶಾಸಕರ ಸಂಖ್ಯೆ ದೊಡ್ಡದಿದ್ದು, ಹಾಗಾಗಿ ಜೆಡಿಎಸ್‌ ಬಳಿ ಉಳಿದಿರುವ ಸಚಿವ ಸ್ಥಾನಗಳನ್ನೂ ಕಾಂಗ್ರೆಸ್ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದಕ್ಕೆ ಜೆಡಿಎಸ್ ಒಪ್ಪುವ ಸಾಧ್ಯತೆ ಬಹಳ ಕಡಿಮೆ.

ಸಂಪುಟ ವಿಸ್ತರಣೆ: ಜು.18ಕ್ಕೆ ಕಾಂಗ್ರೆಸ್‌ ಹೈಕಮಾಂಡ್ ಜತೆ ಚರ್ಚೆಸಂಪುಟ ವಿಸ್ತರಣೆ: ಜು.18ಕ್ಕೆ ಕಾಂಗ್ರೆಸ್‌ ಹೈಕಮಾಂಡ್ ಜತೆ ಚರ್ಚೆ

ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ತಮ್ಮ ಪಕ್ಷದಿಂದ ಸಂಪುಟ ಸೇರಲಿರುವವರು ಹಾಗೂ ನಿಗಮ ಮಂಡಳಿಗೆ ನೇಮಕ ಮಾಡಬೇಕಿರುವವರ ಪಟ್ಟಿಯನ್ನು ತಯಾರಿಸಿದ್ದು, ಆಷಾಡ ಮಾಸದ ನಂತರ ಸಂಪುಟ ವಿಸ್ತರಣೆ ಆಗಲಿದೆ.

English summary
Tomorrow CM Kumaraswamy going to meet Congress High command along with state congress leaders to discuss about cabinet expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X