ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ಮತ್ತು ಅಲ್ಪಸಂಖ್ಯಾತರಿಗೆ ಕುಮಾರಣ್ಣ ಭರ್ಜರಿ ಬಳುವಳಿ

|
Google Oneindia Kannada News

Recommended Video

ಮುಸ್ಲಿಂ ಮತ್ತು ಅಲ್ಪಸಂಖ್ಯಾತರಿಗೆ ಕುಮಾರಣ್ಣ ಭರ್ಜರಿ ಬಳುವಳಿ..! | Oneindia Kannada

ಬೆಂಗಳೂರು, ಫೆಬ್ರವರಿ 8 : ವಿಶ್ರಾಂತಿ ಕೂಡ ತೆಗೆದುಕೊಳ್ಳದೆ ಸತತ ಮೂರು ಗಂಟೆಗಳ ಕಾಲ ಮ್ಯಾರಾಥಾನ್ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದುಳಿದ ವರ್ಗಗಳನ್ನು ಸಂತೃಪ್ತಿಪಡಿಸಲು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದ್ದಾರೆ.

ಮಠ ಮಾನ್ಯಗಳಿಗೆಂದೇ 60 ಕೋಟಿ ರುಪಾಯಿ ಅನುದಾನ ನೀಡಿದ್ದು, ಎಲ್ಲ ಸಮುದಾಯದ ಧಾರ್ಮಿಕ ಸಂಸ್ಥೆಗಳಿಗೆ ಅನುದಾನ ನೀಡಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಥಾಪಿಸಿದ ಸಿದ್ದಗಂಗಾ ಮಠಕ್ಕೆ ಕೂಡ ಭರ್ಜರಿ ಅನುದಾನ ನೀಡಿದ್ದು, ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಚ್ ಡಿ ಕುಮಾರಸ್ವಾಮಿ ಅವರು 2019-20ನೇ ಸಾಲಿನ ಆಯವ್ಯಯ ಮಂಡಿಸಿದ್ದು ಸುಸ್ಪಷ್ಟವಾಗಿದೆ.

ಕರ್ನಾಟಕ ವಿಧಾನಸಭೆ ಅಧಿವೇಶನ: ರೈತಪರ ಬಜೆಟ್ ಮಂಡಿಸಿದ ಕುಮಾರಸ್ವಾಮಿಕರ್ನಾಟಕ ವಿಧಾನಸಭೆ ಅಧಿವೇಶನ: ರೈತಪರ ಬಜೆಟ್ ಮಂಡಿಸಿದ ಕುಮಾರಸ್ವಾಮಿ

ಜಾತ್ಯತೀತ ಜನತಾದಳದ ನಾಯಕರಾಗಿರುವ ಕುಮಾರಸ್ವಾಮಿಯವರು ಹಿಂದುಳಿದ ವರ್ಗಗಳ ಜೊತೆಗೆ ಸಹಜವಾಗಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಕ್ಕೂ ಬಜೆಟ್ಟಿನಲ್ಲಿ ಒಂದಿಷ್ಟು ಹಣವನ್ನು ಮೀಸಲಿಟ್ಟಿದ್ದಾರೆ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ಸಿಕ್ಕಿದೆಯಾದರೂ ಇತರ ಸಮುದಾಯಗಳಿಗೂ ಕುಮಾರಣ್ಣ ಬಜೆಟ್ಟಿನಲ್ಲಿ ಒಂದಿಷ್ಟು ವಿನಿಯೋಗಿಸಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಮುಸ್ಲಿಂರಿಗೆಂದು ನೀಡಿರುವ ಅನುದಾನದ ವಿವರಗಳು ಕೆಳಗಿನಂತಿವೆ.

ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ

ಮುಸ್ಲಿಂ ಸಮುದಾಯಕ್ಕೆ ಆಧುನಿಕ ಶಿಕ್ಷಣ

ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವ ಉತ್ತೇಜನಕ್ಕೆ ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ ಒಂದಾವರ್ತಿಯಾಗಿ 25 ಕೋಟಿ ರುಪಾಯಿ ಅನುದಾನ.

ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ ಕುಮಾರಸ್ವಾಮಿ ಮಂಡಿಸಿದ ಕರ್ನಾಟಕ ಬಜೆಟ್ 2019-20 ಮುಖ್ಯಾಂಶ

ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ

ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ

ದಾವಣಗೆರೆ, ತುಮಕೂರು, ಗದಗ, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹೊಸದಾಗಿ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಪ್ರಾರಂಭಿಸಲು 20 ಕೋಟಿ ರುಪಾಯಿ ಅನುದಾನ.

ಕುಮಾರಸ್ವಾಮಿ ಬಜೆಟ್‌: ಶಿಕ್ಷಣ ಕ್ಷೇತ್ರಕ್ಕೆ ಏನುಂಟು-ಏನಿಲ್ಲ? ಕುಮಾರಸ್ವಾಮಿ ಬಜೆಟ್‌: ಶಿಕ್ಷಣ ಕ್ಷೇತ್ರಕ್ಕೆ ಏನುಂಟು-ಏನಿಲ್ಲ?

ಮುಸ್ಲಿಂ ಕಬರಸ್ಥಾನಗಳ ಅಭಿವೃದ್ಧಿ

ಮುಸ್ಲಿಂ ಕಬರಸ್ಥಾನಗಳ ಅಭಿವೃದ್ಧಿ

ರಾಜ್ಯದಲ್ಲಿನ ಮುಸ್ಲಿಂ ಕಬರಸ್ಥಾನಗಳಲ್ಲಿ (ರುದ್ರ ಭೂಮಿಗಳಲ್ಲಿ) ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ. (ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ 20 ಕೋಟಿ ರುಪಾಯಿ ಅನುದಾನ.

ಅಲ್ಪಸಂಖ್ಯಾತರು ವಾಸಿಸುವ ಪ್ರದೇಶದ ಅಭಿವೃದ್ಧಿ

ಅಲ್ಪಸಂಖ್ಯಾತರು ವಾಸಿಸುವ ಪ್ರದೇಶದ ಅಭಿವೃದ್ಧಿ

ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು 400 ಕೋಟಿ ರುಪಾಯಿ ಅನುದಾನ.

ಕರ್ನಾಟಕ ಬಜೆಟ್ 2019: ಬೆಂಗಳೂರಿನ ವಿವಿಧ ಇಲಾಖೆಗಳಿಗೆ ದೊರೆತಿದ್ದೇನು?ಕರ್ನಾಟಕ ಬಜೆಟ್ 2019: ಬೆಂಗಳೂರಿನ ವಿವಿಧ ಇಲಾಖೆಗಳಿಗೆ ದೊರೆತಿದ್ದೇನು?

ಮೊರಾರ್ಜಿ ದೇಸಾಯಿ ವಸತಿ ಶಾಲೆ

ಮೊರಾರ್ಜಿ ದೇಸಾಯಿ ವಸತಿ ಶಾಲೆ

ರಾಜ್ಯದ 25 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಳ. ಮತ್ತು 20 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯಾಬಲ 60ಕ್ಕೆ ಹೆಚ್ಚಳ.

ಕರ್ನಾಟಕ ಬಜೆಟ್: ನಾಲ್ಕು ಹೊಸ ತಾಲ್ಲೂಕುಗಳ ರಚನೆ ಕರ್ನಾಟಕ ಬಜೆಟ್: ನಾಲ್ಕು ಹೊಸ ತಾಲ್ಲೂಕುಗಳ ರಚನೆ

ಗುರುದ್ವಾರಕ್ಕೆ 10 ಕೋಟಿ ರುಪಾಯಿ

ಗುರುದ್ವಾರಕ್ಕೆ 10 ಕೋಟಿ ರುಪಾಯಿ

ಶ್ರೀ ಗುರುನಾನಕ್ ದೇವ್‌ರವರ 550ನೇ ಜನ್ಮ ದಿನೋತ್ಸವ ಅಂಗವಾಗಿ ಬೀದರ್‌ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ ರುಪಾಯಿ ಹಾಗೂ ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ.

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿ

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿ

ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ; 200 ಕೋಟಿ ರುಪಾಯಿ ಅನುದಾನ. (ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ೨೫ ಕೋಟಿ ರುಪಾಯಿ ಅನುದಾನ. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರುಪಾಯಿ ಅನುದಾನ.)

English summary
Chief minister H D Kumaraswamy has given handful to minorities and muslims in Karnataka Budget 2019, keeping Lok Sabha Elections keeping in mind. Muslims, christians, hindus, sikh community too has been considered by Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X