ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಅಮೆರಿಕ ಕನ್ನಡಿಗರ ಉದ್ದೇಶಿಸಿ ಎಚ್‌ಡಿಕೆ ಭಾಷಣ

|
Google Oneindia Kannada News

Recommended Video

ಒಗ್ಗಟ್ಟಿನ ಬಗ್ಗೆ ಕಥೆ ಹೇಳಿದ ಕುಮಾರಸ್ವಾಮಿ..! | Oneindia Kannada

ಬೆಂಗಳೂರು, ಆಗಸ್ಟ್ 29: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಮೆರಿಕದಲ್ಲಿರುವ ಕನ್ನಡಿಗರನ್ನದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಲಿದ್ದಾರೆ.

ಸೆಪ್ಟೆಂಬರ್‌ 1 ರಂದು ರಾತ್ರಿ 8 ಗಂಟೆಗೆ ಅಮೆರಿಕದ ಉತ್ತರ ಟೆಕ್ಸಾಸ್‌ನಲ್ಲಿ ನಡೆಯುತ್ತಿರುವ 'ಅಕ್ಕ' ಸಮ್ಮೇಳನವನ್ನುದ್ದೇಶಿಸಿ ಸಿಎಂ ಈ ವಿಡಿಯೋ ಕಾನ್ಫರೆನ್ಸ್‌ ಭಾಷಣ ಮಾಡಲಿದ್ದು, ಅಲ್ಲಿನ ದೊಡ್ಡ ಪರದೆಯ ಮೇಲೆ ಸಿಎಂ ಭಾಷಣ ಅನುರಣಿಸಲಿದೆ.

Kumaraswamy addressing America Kannadigas through video conference

ಆಗಸ್ಟ್‌ 31 ರಿಂದ ಮೂರು ದಿನಗಳ ಕಾಲ ಉತ್ತರ ಟೆಕ್ಸಾಸ್‌ನಲ್ಲಿ ಅಕ್ಕ ಸಮ್ಮೇಳನ ನಡೆಯಲಿದೆ. ಇದು ಅಮೆರಿಕ ಕನ್ನಡಿಗರು ಆಯೋಜಿಸುತ್ತಿರುವ 10ನೇ ಅಕ್ಕ ಸಮ್ಮೇಳನವಾಗಿದ್ದು ನಾಡಿನಿಂದ ಹಲವು ಪ್ರಮುಖರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಎಲ್ಲರಂತಲ್ಲ ಕುಮಾರಣ್ಣ, ಹೂ ಮಾರುವ ಮಗುವಿನ ಶಿಕ್ಷಣಕ್ಕೆ ಸಹಾಯಎಲ್ಲರಂತಲ್ಲ ಕುಮಾರಣ್ಣ, ಹೂ ಮಾರುವ ಮಗುವಿನ ಶಿಕ್ಷಣಕ್ಕೆ ಸಹಾಯ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವರು ಸಚಿವರು, ಶಾಸಕರು ಸಹ ಅಕ್ಕ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ. ಸಿಎಂ ಸಹ ಆಹ್ವಾನಿತರಾಗಿದ್ದರು ಆದರೆ ರಾಜ್ಯದ ಕಾರ್ಯ ಹೆಚ್ಚಿರುವ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರು ಮಾತನಾಡಲಿದ್ದಾರೆ.

ಕೊಡಗಿಗೆ ನೆರವು ಕೇಳಲು ಆಗಸ್ಟ್‌ 30ಕ್ಕೆ ದೆಹಲಿಗೆ ಹಾರಲಿದ್ದಾರೆ ಎಚ್‌ಡಿಕೆಕೊಡಗಿಗೆ ನೆರವು ಕೇಳಲು ಆಗಸ್ಟ್‌ 30ಕ್ಕೆ ದೆಹಲಿಗೆ ಹಾರಲಿದ್ದಾರೆ ಎಚ್‌ಡಿಕೆ

ಅಕ್ಕ ಸಮ್ಮೇಳನದಲ್ಲಿ ಹಲವು ಕನ್ನಡ ಸಿನಿ ತಾರೆಯರು, ಸಾಂಸ್ಕೃತಿಕ ತಂಡಗಳು, ಹಾಡುಗಾರರು, ನೃತ್ಯಕಾರರು, ಸಾಹಿತಿಗಳು ಭಾಗವಹಿಸಲಿದ್ದಾರೆ

English summary
CM HD Kumaraswamy addressing America Kannadigas through video conference on September 1 at 8 pm. He addressing AKKA conference in north Texas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X