ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

600-700 ಕೋಟಿ ರು. ಅವ್ಯವಹಾರ ನಡೆಸಿದ ಸಿದ್ದರಾಮಯ್ಯ

By Kiran B Hegde
|
Google Oneindia Kannada News

ಬೆಂಗಳೂರು, ಜ. 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 500ರಿಂದ 600 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟು 600-700 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಶಾಸಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಈ ಕುರಿತು ನನ್ನ ಹತ್ತಿರ ದಾಖಲೆಗಳಿವೆ. ಅಧಿಕಾರಿಗಳಿಗೆ ಬೆದರಿಕೆ ಹಾಕಿ ಈ ದಾಖಲೆಗಳನ್ನು ಪಡೆದಿದ್ದೇನೆಂದು ತಿಳಿಸಿದ್ದಾರೆ. [ಏನಿದು ಅರ್ಕಾವತಿ ಬಡಾವಣೆ ವಿವಾದ?]

ರಿ ಡು ಹೆಸರಿನಲ್ಲಿ ಅರ್ಕಾವತಿ ಬಡಾವಣೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟು 500ರಿಂದ 600 ಎಕರೆಗಿಂತಲೂ ಅಧಿಕ ಡಿ ನೋಟಿಫಿಕೇಷನ್ ಮಾಡಿದ್ದಾರೆ. ಈ ಮೂಲಕ 600ರಿಂದ 700 ಕೋಟಿ ರು.ಗಿಂತ ಹೆಚ್ಚು ಮೊತ್ತದ ಅವ್ಯವಹಾರ ನಡೆಸಿದ್ದಾರೆಂದು ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ. [ಅರ್ಕಾವತಿ ಬಡಾವಣೆ ಫೈಟ್, ಯಾರೇನು ಹೇಳಿದರು?]

hdk

ಈಗಾಗಲೇ ಪ್ರತಿಪಕ್ಷ ಬಿಜೆಪಿ ಅರ್ಕಾವತಿ ಡಿ ನೋಟಿಫಿಕೇಶನ್ ಹಗರಣದ ತನಿಖೆಗೆ ರಾಜ್ಯಪಾಲರಿಂದಲೇ ಅನುಮತಿ ಪಡೆಯಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಕೂಡ ಆರೋಪ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಬಲ ಬಂದಂತಾಗಿದೆ. [ಸಿದ್ದರಾಮಯ್ಯ ವಿರುದ್ಧ ದೂರು ನೀಡಲು ಬಿಜೆಪಿ ಸಿದ್ಧತೆ]

ಡಿನೋಟಿಫಿಕೇಶನ್ ಮಾಡಿಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ, ರಿ-ಡು ಹೆಸರಲ್ಲಿ 500ರಿಂದ 600 ಎಕರೆ ಭೂ ಸ್ವಾಧೀನ ಮಾಡಿದ್ದಾರೆ. ಅವರಲ್ಲಿ ನೈತಿಕತೆ ಇದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. [ಡಿನೋಟಿಫಿಕೇಶನ್ ಮಾಡಿದ್ದು 707 ಎಕರೆ]

ಆಯೋಗಕ್ಕೆ ದಾಖಲೆ ನೀಡ್ತೇನೆ : ಡಿ ನೋಟಿಫಿಕೇಷನ್ ಹಗರಣ ಕುರಿತು ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ತನಿಖೆ ನಡೆಸುತ್ತಿದೆ. ಈ ಆಯೋಗಕ್ಕೆ ನಾನೇ ದಾಖಲೆ ಸಲ್ಲಿಸುತ್ತೇನೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

English summary
JDS leader H.D. Kumaraswamy accused that Siddaramaiah lead state government has committed in 600-700 crores of money fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X