ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣ್ಯಾತ್ಮ ರಾಹುಲ್ ಆಶೀರ್ವಾದದಿಂದ ಅಧಿಕಾರ: ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಮೇ 30: 'ನಮಗೆ ಜನರ ಆಶೀರ್ವಾದ ಇಲ್ಲದೇ ಇದ್ದರೂ, ಪುಣ್ಯಾತ್ಮ ರಾಹುಲ್ ಗಾಂಧಿ ನೋಡೋಣ ಎಂದು ನಂಬಿಕೆ ಇಟ್ಟು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ' ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರೈತರ ಸಾಲಮನ್ನಾ ಕುರಿತು ಬುಧವಾರ ನಡೆದ ಸಭೆಯ ವೇಳೆ ಮಾತನಾಡಿದ ಅವರು, ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೊರಕಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿರೈತರ ಸಾಲಮನ್ನಾ : 2 ಸೂತ್ರ ಮುಂದಿಟ್ಟ ಎಚ್.ಡಿ.ಕುಮಾರಸ್ವಾಮಿ

ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ಕೆಲಸಗಳನ್ನು ನಾನು ಮಾಡಿಕೊಡ್ತೀನಿ. ರಾಹುಲ್ ಗಾಂಧಿ ಅವರೇನೂ ನನಗೆ ವಿರೋಧ ಮಾಡುವುದಿಲ್ಲ. ಅವರ ಮನವೊಲಿಕೆ ಮಾಡುತ್ತೇನೆ. ಆದರೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ತೀರ್ಮಾನಕ್ಕೆ ಬರಬೇಕಿದೆ ಎಂದು ತಿಳಿಸಿದರು.

kumaraswamu said we have came to power with blessing of rahul

ಇದು ಸುವರ್ಣಾವಕಾಶ. ಉಪಯೋಗ ಮಾಡಿಕೊಳ್ಳಿ, ನನ್ನ ಜತೆ ನಿಂತುಕೊಳ್ಳಿ. ಚುನಾವಣೆ ಬಂದಾಗ ಯಾರಿಗಾದರೂ ಓಟು ಹಾಕಿಕೊಳ್ಳಿ. ನನಗೇನೂ ಬೇಸರವಿಲ್ಲ. ಆದರೆ, ಈಗಿನ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಒಳ್ಳೆ ಅವಕಾಶವಿದೆ ಎಂದರು,

ನನ್ನ ಹಾಗೂ ಉಪಮುಖ್ಯಮಂತ್ರಿ ನಡುವೆ ಉತ್ತಮ ಹೊಂದಾಣಿಕೆಯಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಬರುವುದಿಲ್ಲ. ಹಾಗೆಯೇ ಸರ್ಕಾರ ಸುಭ್ರವಾಗಿದೆ, ಯಾರಾದರೂ ಸರ್ಕಾರ ಉರುಳಿಸಬೇಕು ಎಂದರೆ, ನಾವು ಸುಲಭವಾಗಿ ತೆಗೆಯಲು ಬಿಡುವುದಿಲ್ಲ. ನಮಗೂ ಸ್ವಲ್ಪ ರಾಜಕೀಯ ಗೊತ್ತು, ಸರ್ಕಾರ ನಡೆಸುತ್ತೇವೆ.

<span class='ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ' : ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ಡಿಕೆ" title="'ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ' : ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ಡಿಕೆ" />'ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ' : ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್ಡಿಕೆ

ಆದ್ದರಿಂದ ರೈತರು ಈ ಸುವರ್ಣಾವಕಾಶ ಕಳೆದುಕೊಳ್ಳಬಾರದು. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ. ನಿಮ್ಮ ಏನೇನು ಆಸೆಗಳಿವೆ ಎಲ್ಲವನ್ನೂ ಈಡೇರಿಸುತ್ತೇವೆ. ಆದರೆ ನಮಗೆ ಸಮಯ ಕೊಡಿ. ಯಾರಿಗೂ ವಿಶ್ವಾಸ ದ್ರೋಹ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರಿಂದಾಗಿ ಅಧಿಕಾರಕ್ಕೆ ಬಂದಿರುವುದಾಗಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

English summary
Chief Minister HD Kumaraswamy said that, without the blessing of people, but only with blessing of Rahul Gandhi, we have come to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X