ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೇ ಸುಪ್ರಭಾತ ವಿವಾದ: ಕುಕ್ಕೇ ಶ್ರೀಗಳಿಗೆ ಕಿರಿಕಿರಿಯಾಯಿತೇ?

By ಬಾಲರಾಜ್ ತಂತ್ರಿ
|
Google Oneindia Kannada News

ನಮ್ಮ ಕಚೇರಿಯ ಹತ್ತಿರ ದರ್ಗಾವೊಂದಿದೆ, ದಿನಕ್ಕೆ ಮೂರು ಬಾರಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪ್ರಾರ್ಥನೆಯ ಮೈಕಿನ ಸದ್ದು ಆಸುಪಾಸಿನ ಅರ್ಥ ಕಿಲೋಮೀಟರ್ ದೂರದಷ್ಟು ಹರಡುತ್ತದೆ.

ಆದರೆ ಮೈಕಿನ ಸದ್ದು ಜಾಸ್ತಿಯಾಯಿತು ಎಂದು ಸ್ವಧರ್ಮೀಯರಾಗಲಿ ಅಥವಾ ಇತರ ಧರ್ಮದವರಾಗಲಿ ಅದಕ್ಕೆ ಆಕ್ಷೇಪ ಸಲ್ಲಿಸಿದ ಉದಾಹರಣೆಗಳಿಲ್ಲ.

ಇಲ್ಲಿ ಈ ವಿಚಾರ ಯಾಕೆ ಪ್ರಸ್ತುತಯೆಂದರೆ, ಗಳಿಕೆ ವಿಚಾರದಲ್ಲಿ ರಾಜ್ಯದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಒಂದನೇ ಸ್ಥಾನದಲ್ಲಿ ನಿಲ್ಲುವ ಕುಕ್ಕೇ ಶ್ರೀಸುಬ್ರಮಣ್ಯ ದೇವಾಲಯದ ಸುಪ್ರಭಾತದ ಸೌಂಡಿನ ಸದ್ದು ಜಾಸ್ತಿಯಾಯಿತು ಎನ್ನುವ ವಿವಾದ. (ವಿವಾದಕ್ಕೆ ಕಾರಣವಾದ ಕುಕ್ಕೆ ದೇವಾಲಯದ ಸುಪ್ರಭಾತ)

Kukke Subramanya temple Suprabatha controversy: As per local people Subramanya Mutt Seer behind this

ಈ ವಿವಾದ ದಕ್ಷಿಣಕನ್ನಡ ಜಿಲ್ಲಾಡಳಿತದ ಮೆಟ್ಟಲೇರಲು ಸ್ವಧರ್ಮೀಯರೇ ಕಾರಣ ಎನ್ನುವುದು ಇಲ್ಲಿ ಗಮನಿಸಬೇಕಾಗಿದ್ದು. ಸುಪ್ರಭಾತದ ಸೌಂಡ್ ಕಮ್ಮಿ ಮಾಡಬೇಕೆಂದು ಮಾಜಿ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಆಕ್ಷೇಪ ಸಲ್ಲಿಸಿದ್ದು ಸ್ಥಳೀಯರ ಮತ್ತು ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ.

ವಿಶ್ವವಿಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಸುಬ್ರಮಣ್ಯ ದೇವರ ದರ್ಶನ ಪಡೆದು ಸರ್ಪಸಂಸ್ಕಾರ, ಆಶ್ಲೇಷಬಲಿ ನಡೆಸುತ್ತಾರೆ.

ಆದರೆ, ಕುಮಾರಧಾರ ನದಿ ತಟದಲ್ಲಿರುವ ಕುಕ್ಕೇ ದೇವಾಲಯದ ಆವರಣದಲ್ಲೇ ಇರುವ ಸುಬ್ರಮಣ್ಯ ಮಠದ ಯತಿಗಳಾದ ವಿದ್ಯಾಪ್ರಸನ್ನ ತೀರ್ಥರಿಗೆ ಸುಪ್ರಭಾತದಿಂದ ಕಿರಿಕಿರಿಯಾಗಿದ್ದು ಮಾತ್ರ ದೊಡ್ಡ ವಿಪರ್ಯಾಸ.

ಸ್ಥಳೀಯರು ಹೇಳುವಂತೆ, ಸುಪ್ರಭಾತದ ಸೌಂಡನ್ನು ಕಮ್ಮಿ ಮಾಡಿಸುವಂತೆ ಖುದ್ದು ಶ್ರೀಗಳೇ ಹರಿಕೃಷ್ಣ ಪುನರೂರು ಮುಖಾಂತರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ ಎನ್ನುವುದು.

ಈ ವಿಚಾರವೀಗ ಸ್ಥಳೀಯರು ಮತ್ತು ಜಿಲ್ಲಾಡಳಿತದ ನಡುವೆ ಜಗ್ಗಾಟಕ್ಕೆ ಕಾರಣವಾಗಿದೆ. ಅಲ್ಲದೇ ಹಿಂದೂ ಸಂಪ್ರದಾಯ ಮತ್ತು ಪೂಜಾ ಪದ್ದತಿಗಳಿಗೆ ಸರಕಾರ ಮೂಗುದಾರ ತೊಡಿಸಲು ಮುಂದಾಗಿದೆ ಎನ್ನುವ ಆರೋಪ ಜಿಲ್ಲಾಡಳಿತದ ಮೇಲೆ ಬಿದ್ದಿದೆ.

Kukke Subramanya temple Suprabatha controversy: As per local people Subramanya Mutt Seer behind this

ಬೆಳಗ್ಗೆ ನಾಲ್ಕು ಗಂಟೆಯಿಂದ 6.30ರ ತನಕ ಸುಪ್ರಭಾತ ಕೇಳಿಬರುತ್ತದೆ. ಕುಕ್ಕೇ ಸುಬ್ರಮಣ್ಯ ದೇವಾಲಯ ಪ್ರಶಾಂತತೆಗೆ ಹೆಸರಾಗಿದ್ದು ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಹರಿಕೃಷ್ಣ ಪುನರೂರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ಥಳೀಯರು ಸುಪ್ರಭಾತ ವಿವಾದಕ್ಕೆ ಸುಬ್ರಮಣ್ಯದ ಮಠದ ಶ್ರೀಗಳ ಕಡೆಗೆ ಬೊಟ್ಟು ತೋರಿಸುತ್ತಾರೆ. ಹಾಗೆಯೇ, ಶ್ರೀಗಳಿಂದ ಇಂತಹ ನಿಲುವನ್ನು ನಿರೀಕ್ಷಿಸಿರಲಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. (ಕುಕ್ಕೆ ಸುಬ್ರಮಣ್ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ)

ವಿಎಚ್ಪಿ ಖಂಡನೆ: ಸರಕಾರದ ನಿಲುವನ್ನು ನಾವು ಖಂಡಿಸುತ್ತೇವೆ. ಹರಕೆ ಹೊತ್ತು ಬರುವ ಯಾತ್ರಾರ್ಥಿ ಮೈಕ್ ಸೌಂಡಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕುಕ್ಕೇ ದೇವಾಲಯದ ಆಸುಪಾಸಿನಲ್ಲಿ ಯಾವುದೇ ಸ್ಕೂಲುಗಳಾಗಲಿ, ಆಸ್ಪತ್ರೆಗಳಾಗಲಿ ಇಲ್ಲ ಎಂದು ಭಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

'ಒನ್ ಇಂಡಿಯಾ' ಜೊತೆ ಮಾತನಾಡುತ್ತಿದ್ದ ಶರಣ್ ಪಂಪ್ ವೆಲ್, ದೇವಾಲಯದ ಸುತ್ತಮುತ್ತ ಲೆಕ್ಕವಿಲ್ಲದಷ್ಟು ಸಿಡಿ ಮಾರಾಟದ ಅಂಗಡಿಗಳಿವೆ, ಇವರೆಲ್ಲಾ ಭಕ್ತಿಗೀತೆಗಳನ್ನು ದಿನವಿಡೀ ಹಾಕುತ್ತಾರೆ.

ಇದರಿಂದ ತೊಂದರೆ ಬರವುದಿಲ್ಲವೇ, ಸರಕಾರದ ಹಿಂದೂ ವಿರೋಧಿ ನೀತಿಯನ್ನು ಭಜರಂಗದಳ ಮತ್ತು ವಿಎಚ್ಪಿ ಖಂಡಿಸುತ್ತದೆ ಎಂದು ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಒಟ್ಟಿನಲ್ಲಿ ಐತಿಹಾಸಿಕ ಕುಕ್ಕೇ ಸುಬ್ರಮಣ್ಯ ದೇವಾಲಯದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದರೇ ಸಾಕು, ಜನರ ನಂಬಿಕೆಯ ಜೊತೆ ಆಟವಾಡಬೇಡಿ ಎನ್ನುವುದು ಅಸಂಖ್ಯಾತ ಭಕ್ತಾದಿಗಳ ಅಪೇಕ್ಷೆ.

English summary
Kukke Subramanya temple Suprabatha controversy: As per local people Subramanya Mutt Seer behind this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X