ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

95 ಕೋಟಿ ಸಂಗ್ರಹಿಸಿರುವ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇಗುಲ

By ಮಂಗಳೂರು ಪ್ರತಿನಿಧಿ
|
Google Oneindia Kannada News

Recommended Video

ಕುಕ್ಕೆ ಸುಬ್ರಮಣ್ಯ ಕರ್ನಾಟಕದಲ್ಲಿ ಅತ್ಯಂತ ಶ್ರೀಮಂತ ದೇಗುಲ | Oneindia Kannada

ಮಂಗಳೂರು, ಜೂನ್ 28 : ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸುಮಾರು 95.92 ಕೋಟಿ ರುಪಾಯಿ ಹುಂಡಿ ಹಣವನ್ನು ಸಂಗ್ರಹಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದಿದೆ.

ದೇವಸ್ಥಾನಗಳ ಹುಂಡಿಯಲ್ಲಿ ಸಂಗ್ರಹವಾಗುವ ಹಣದ ಆಧಾರದ ಮೇಲೆ ಅತೀ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಕರಾವಳಿಯ ಎರಡು ದೇವಸ್ಥಾನಗಳು ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ.

ಎಸ್ಸೆಸ್ಸೆಲ್ಸಿ ಪಾಸ್ ಮಾಡು, ಗಂಡನ್ನ ವಾಪಸ್ ಕೊಡು: ದೇವರಿಗೆ ಪತ್ರ!ಎಸ್ಸೆಸ್ಸೆಲ್ಸಿ ಪಾಸ್ ಮಾಡು, ಗಂಡನ್ನ ವಾಪಸ್ ಕೊಡು: ದೇವರಿಗೆ ಪತ್ರ!

95,92,54,363 ರುಪಾಯಿ ಸಂಗ್ರಹಿಸುವ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರಥಮ ಸ್ಥಾನ ಪಡೆದಿದ್ದು, 43,92,09,926 ರುಪಾಯಿ ಸಂಗ್ರಹಿಸುವ ಮೂಲಕ ಕೊಲ್ಲೂರು ದೇವಸ್ಥಾನ ಎರಡನೇ ಸ್ಥಾನವನ್ನು ಪಡೆದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಾಲಯ ತೃತೀಯ ಸ್ಥಾನದಲ್ಲಿದೆ.

Kukke Subrahmanya temple collected highest hundi amount in Karnataka

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಾಖಲೆಯ ಮಟ್ಟದಲ್ಲಿ ಹುಂಡಿಯ ದುಡ್ಡು ಸಂಗ್ರಹವಾಗಿದೆ. ಇನ್ನು ಕಟೀಲು ದುರ್ಗಾಪರಮೇಶ್ವರಿ ನಾಲ್ಕನೆಯ ಸ್ಥಾನದಲ್ಲಿದ್ದರೆ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಐದನೇ ಶ್ರೀಮಂತ ದೇವಸ್ಥಾನವಾಗಿದೆ.

Kukke Subrahmanya temple collected highest hundi amount in Karnataka

ಬೆಂಗಳೂರಿನ ಬನಶಂಕರಿ ದೇಗುಲ ಒಂಬತ್ತನೇ ಶ್ರೀಮಂತ ದೇವಸ್ಥಾನವಾಗಿದೆ. ಇನ್ನು ದೇಗುಲದದಲ್ಲಿ ಸಂಗ್ರಹವಾದ ಹುಂಡಿ ಹಣದಲ್ಲಿ ಶೇ 60ರಷ್ಟು ದೇಗುಲದ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಮುಜರಾಯಿ ಇಲಾಖೆ ಲೆಕ್ಕ ಕೊಟ್ಟಿದೆ.

ಹಣ ಸಂಗ್ರಹ ಮೊತ್ತದ ವಿವರ

ಕುಕ್ಕೆ ಸುಬ್ರಹ್ಮಣ್ಯ 95,92,54,363 ರು.

ಕೊಲ್ಲೂರು ಮೂಕಾಂಬಿಕೆ 43,92,09,926 ರು.

ಚಾಮುಂಡೇಶ್ವರಿ ದೇಗುಲ 30,40,07,300 ರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲ 23,91,59,886 ರು.

ಶ್ರೀಕಂಠೇಶ್ವರ ನಂಜನಗೂಡು 19,98,16,618.65 ರು.

ಬೆಂಗಳೂರು ಬನಶಂಕರಿ 8,53,77,373 ರು.

English summary
Kukke Subrahmanya temple collected highest hundi amount in Karnataka. Followed by Kollur Mookambika, Chamundeshwari, Kateel Durga Parameshwari, Srikanteshwara of Nanjanagud and Bengaluru Banashankari temple name also there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X