ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21 : ಕೆಎಸ್‌ಟಿಡಿಸಿ ತನ್ನ ಹೆಮ್ಮೆಯ ಗೋಲ್ಡನ್ ಚಾರಿಯಟ್ ರೈಲು ಸೇವೆಗೆ ಕೆಲವು ಬದಲಾವಣೆಗಳನ್ನು ತಂದಿದ್ದು ಮರು ಚಾಲನೆ ನೀಡಲಿದೆ. ಕರ್ನಾಟಕದ ವಿವಿಧ ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ಒದಗಿಸುವ ಗೋಲ್ಡನ್ ಚಾರಿಯಟ್ ಸೇವೆ ಆರಂಭವಾಗಿ 10 ವರ್ಷಗಳು ಕಳೆದಿವೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸೇವೆಯ ಮೂಲಸೌಕರ್ಯ ಮತ್ತು ವಾಣಿಜ್ಯ ವಹಿವಾಟು ನೋಡಿಕೊಳ್ಳಲು ಟೆಂಡರ್ ಆಹ್ವಾನಿಸಿದೆ. ಮಲ್ಪೆ ಗ್ರೂಪ್ ಆಫ್ ಹೋಟೆಲ್‌ಗೆ ನೀಡಿದ್ದ ಟೆಂಡರ್ ಈ ವರ್ಷದ ಆರಂಭದಲ್ಲಿ ಅಂತ್ಯಗೊಂಡಿತ್ತು.

ಇತಿಹಾಸದಲ್ಲೇ ಮೊದಲ ಸಲ ಲಾಭ ಗಳಿಸಿದ ಪ್ರವಾಸೋದ್ಯಮ ಇಲಾಖೆಇತಿಹಾಸದಲ್ಲೇ ಮೊದಲ ಸಲ ಲಾಭ ಗಳಿಸಿದ ಪ್ರವಾಸೋದ್ಯಮ ಇಲಾಖೆ

ಸೆಪ್ಟೆಂಬರ್ ಅಂತ್ಯದ ತನಕ ಟೆಂಡರ್ ಹಾಕಲು ಅವಕಾಶವಿದೆ. ಅಕ್ಟೋಬರ್ 20ರ ವೇಳೆಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇದೆ. ಐಷಾರಾಮಿ ರೈಲಿನ ಒಳಾಂಗಣ ವಿನ್ಯಾಸದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಿ, ಸೇವೆಗೆ ಮರು ಚಾಲನೆ ನೀಡಲಾಗುತ್ತದೆ.

ಕೆಎಸ್‌ಟಿಡಿಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ ಘೋಷಣೆಕೆಎಸ್‌ಟಿಡಿಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ ಘೋಷಣೆ

10 ವರ್ಷಗಳಿಂದ ಕೆಎಸ್‌ಟಿಡಿಸಿ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸುತ್ತಿದೆ. ಆದರೆ, ಈ ರೈಲಿನಿಂದ ಲಾಭಕ್ಕಿಂತ ನಷ್ಟವಾಗಿದ್ದೆ ಹೆಚ್ಚು ಎಂಬ ಆರೋಪವಿದೆ. ಹತ್ತು ವರ್ಷದಲ್ಲಿ ಸುಮಾರು 40 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈಗ ರೈಲನ್ನು ಲಾಭವದ ಹಳಿ ಮೇಲೆ ತರುವ ಪ್ರಯತ್ನ ಸಾಗಿದೆ.....

ಹೊಸ ಕಂಪನಿಗೆ ಕೈಗೆ ರೈಲು

ಹೊಸ ಕಂಪನಿಗೆ ಕೈಗೆ ರೈಲು

ಟೆಂಡರ್ ಪಡೆದ ಹೊಸ ಕಂಪನಿಯ ಕೈಗೆ ಗೋಲ್ಡನ್ ಚಾರಿಯಟ್ ಸಿಗಲಿದೆ. ಮೂಲಸೌಕರ್ಯ, ಮಾರ್ಕೆಟಿಂಗ್, ಟಿಕೆಟ್ ಮಾರಾಟ, ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೈಲು ಸೇವೆ ಬಗ್ಗೆ ಪ್ರಚಾರ ನಡೆಸುವ ಕೆಲಸವನ್ನು ಕಂಪನಿ ಮಾಡಬೇಕಾಗುತ್ತದೆ.

ಅಕ್ಟೋಬರ್ 20ರ ವೇಳೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಿದ್ದು, ಹೊಸ ಕಂಪನಿ ಐಷಾರಾಮಿ ರೈಲಿನ ಸೇವೆಯ ಹೊಣೆಯನ್ನು ಹೊತ್ತುಕೊಳ್ಳಲಿದೆ. ರೈಲು ನೂತನ ಮಾದರಿಯಲ್ಲಿ ಮತ್ತೆ ಹಳಿಯ ಮೇಲೆ ಸಂಚಾರ ನಡೆಸಲಿದೆ.

ರೈಲಿನ ವಿನ್ಯಾಸ ಬದಲಾವಣೆ

ರೈಲಿನ ವಿನ್ಯಾಸ ಬದಲಾವಣೆ

ಹೊಸ ಕಂಪನಿ ರೈಲಿನ ವಿನ್ಯಾಸದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡಬಹುದಾಗಿದೆ. ಆದರೆ, ರೈಲಿನ ಮೂಲ ವಿನ್ಯಾಸಕ್ಕೆ ಯಾವುದೇ ಧಕ್ಕೆ ಆಗುವಂತಿಲ್ಲ. ರೈಲಿನ ಬೋಗಿಗಳ ಸಂಖ್ಯೆ, ಬಾರ್, ಹೋಟೆಲ್, ಜಿಮ್, ಸ್ಪಾ ಸೇವೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ.

ಈ ವರ್ಷದ ಬೇಸಿಗೆಯಲ್ಲಿ ಸಂಚಾರವಿಲ್ಲ

ಈ ವರ್ಷದ ಬೇಸಿಗೆಯಲ್ಲಿ ಸಂಚಾರವಿಲ್ಲ

ರೈಲಿನ ವಿನ್ಯಾಸ ಬದಲಾವಣೆಗೆ ಕಾಲಾವಕಾಶ ಬೇಕಾಗಿದೆ. ಆದ್ದರಿಂದ, ಈ ಬಾರಿಯ ಅಕ್ಟೋಬರ್ ನಿಂದ ಫೆಬ್ರವರಿ ತನಕ ಗೋಲ್ಡನ್ ಚಾರಿಯಟ್ ಸಂಚಾರ ಇರುವುದಿಲ್ಲ. 2019ರ ಸೆಪ್ಟೆಂಬರ್‌ನಲ್ಲಿ ರೈಲು ನೂತನ ಮಾದರಿಯಲ್ಲಿ ಸಿದ್ಧವಾಗಲಿದೆ ಎಂಬುದು ಕೆಎಸ್‌ಟಿಡಿಸಿ ಅಧಿಕಾರಿಗಳ ನಿರೀಕ್ಷೆ.

ಹೊಸದಾಗಿ ಟೆಂಡರ್ ಪಡೆದ ಕಂಪನಿ ವರ್ಷಕ್ಕೆ 15 ಟ್ರಿಪ್ ನಡೆಸಲೇಬೇಕು. ಪ್ರತಿ ವರ್ಷ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಬೇಕಾಗಿದೆ.

ನಷ್ಟದಲ್ಲಿ ಐಷಾರಾಮಿ ರೈಲು

ನಷ್ಟದಲ್ಲಿ ಐಷಾರಾಮಿ ರೈಲು

'ಕಳೆದ 10 ವರ್ಷಗಳಲ್ಲಿ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲಿನಿಂದ ರಾಜ್ಯ ಸರ್ಕಾರಕ್ಕೆ 40 ಕೋಟಿ ನಷ್ಟ ಉಂಟಾಗಿದೆ. ಕರ್ನಾಟಕ ಸರ್ಕಾರ, ರೈಲ್ವೆ ಇಲಾಖೆ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಸೇವೆ ಒದಗಿಸಲಾಗುತ್ತಿದೆ. ಆದರೆ, ಕೆಲವು ಸಮಸ್ಯೆಗಳಿಂದಾಗಿ ನಷ್ಟವಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

'ರೈಲು ಲಾಭದಾಯಕವಾಗಲು ಅಗತ್ಯ ಬದಲಾವಣೆಗಳನ್ನು ತಂದು ಮತ್ತೆ ಓಡಿಸಲಾಗುತ್ತದೆ. ಪ್ರವಾಸಿಗರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ' ಎಂದು ಸಚಿವರು ತಿಳಿಸಿದ್ದಾರೆ.

English summary
The Karnataka State Tourism Development Corporation (KSTDC) is all set to relaunch luxury Golden Chariot. Rail service completed 10 years. Now KSTDC called for fresh tenders for its hospitality and marketing partners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X