ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಕೆಎಸ್ಆರ್‌ಟಿಸಿಯಿಂದ ಪಾರ್ಸೆಲ್ ಸೇವೆ

|
Google Oneindia Kannada News

ಬೆಂಗಳೂರು, ಜನವರಿ 04 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಾರ್ಸೆಲ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಖಾಸಗಿ ಬಸ್‌ಗಳು ಪಾರ್ಸೆಲ್ ಸೇವೆಯಿಂದಾಗಿಯೇ ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ.

ಕೆಎಸ್ಆರ್‌ಟಿಸಿ ಪಾರ್ಸೆಲ್ ಸೇವೆಯನ್ನು ಹೊರಗುತ್ತಿಗೆ ನೀಡಿದೆ. ಮಹಾಲಾಸಾ ಕೊರಿಯರ್ ಎಂಡ್ ಪಾರ್ಸೆಲ್‌ ಸಂಸ್ಥೆ ಈ ಕಾರ್ಯವನ್ನು ನಿರ್ವಹಣೆ ಮಾಡುತ್ತಿತ್ತು. ಸಂಸ್ಥೆಯೊಂದಿನ ಒಪ್ಪಂದ ಮುಗಿಯುತ್ತಾ ಬಂದಿದ್ದು, ಅದನ್ನು ನವೀಕರಣ ಮಾಡದಿರಲು ತೀರ್ಮಾನಿಸಲಾಗಿದೆ.

ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?

ಖಾಸಗಿ ಬಸ್‌ಗಳು ಪಾರ್ಸೆಲ್ ಸೇವೆಯಿಂದ ಹೆಚ್ಚಿನ ಆದಾಯಗಳಿಸುತ್ತಿವೆ. ಆದ್ದರಿಂದ, ಕೆಎಸ್ಆರ್‌ಟಿಸಿ ಸ್ವಂತವಾಗಿ ಪಾರ್ಸೆಲ್ ಸೇವೆಯನ್ನು ನಿರ್ವಹಣೆ ಮಾಡಲು ಮುಂದಾಗಿದೆ. ಈ ಮೂಲಕ ಕೆಎಸ್ಆರ್‌ಟಿಸಿಯನ್ನು ನಷ್ಟದಿಂದ ಪಾರು ಮಾಡಲು ಚಿಂತನೆ ನಡೆದಿದೆ.

ಕೆಎಸ್ಆರ್‌ಟಿಸಿ ನೇಮಕಾತಿ, ಜ.15ರೊಳಗೆ ಅರ್ಜಿ ಹಾಕಿಕೆಎಸ್ಆರ್‌ಟಿಸಿ ನೇಮಕಾತಿ, ಜ.15ರೊಳಗೆ ಅರ್ಜಿ ಹಾಕಿ

KSRTC to start Parcel and Courier Services soon

ಆಂಧ್ರಪ್ರದೇಶ ಸರ್ಕಾರ ಪಾರ್ಸೆಲ್ ಸೇವೆಯನ್ನು ಸ್ವಂತವಾಗಿ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೆಎಸ್ಆರ್‌ಟಿಸಿಯ ಅಧಿಕಾರಿಗಳ ತಂಡ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಈ ಬಗ್ಗೆ ಅಧ್ಯಯನ ನಡೆಸಿದೆ. ಅದೇ ಮಾದರಿಯಲ್ಲಿ ಇಲ್ಲಿ ಕಾರ್ಯ ಆರಂಭಿಸಲು ಮುಂದಾಗಿದೆ.

ಬಿಎಂಟಿಸಿ ಬಸ್‌ ಓಡಿಸಲು ಸಿದ್ಧರಾಗ್ತಿದಾರೆ 115 ಮಹಿಳೆಯರುಬಿಎಂಟಿಸಿ ಬಸ್‌ ಓಡಿಸಲು ಸಿದ್ಧರಾಗ್ತಿದಾರೆ 115 ಮಹಿಳೆಯರು

ಸದ್ಯ, ಪಾರ್ಸೆಲ್ ಸೇವೆ ಆರಂಭಿಸುವ ಕುರಿತು ಯೋಜನೆ ರೂಪಿಸುತ್ತಿರುವ ಅಧಿಕಾರಿಗಳು ಈಗಿದ್ದ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೂ ಸೇವೆ ನೀಡಲು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದು, ಇದು ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದಾರೆ.

English summary
Karnataka State Road Transport Corporation (KSRTC) all set to start courier services. KSRTC agreement with Mahalasa Parcel & Courier Services comes to end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X