ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 1, 2 ರೂ.ಗೆ ಕುಡಿಯುವ ನೀರು

By Gururaj
|
Google Oneindia Kannada News

ಬೆಂಗಳೂರುಸ, ಆಗಸ್ಟ್ 05 : ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚು ಹಣ ಕೊಟ್ಟು ಮಿನಿರಲ್ ವಾಟರ್ ಖರೀದಿ ಮಾಡುವ ಅಗತ್ಯವಿಲ್ಲ. ಕೇವಲ 1 ರೂ.ಗೆ ಅರ್ಧ ಲೀ., 2 ರೂ.ಗೆ 1 ಲೀಟರ್ ಕುಡಿಯುವ ನೀರು ಸಿಗುತ್ತದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಲಿದೆ. ಮಂಡ್ಯ ವಿಭಾಗದ ಶ್ರೀರಂಪಟ್ಟಣ ಮತ್ತು ಪಾಂಡವಪುರ ನಿಲ್ದಾಣದಲ್ಲಿ ಮೊದಲು ಈ ಘಟಕಗಳು ಸ್ಥಾಪನೆಯಾಗಲಿವೆ.

ಕೊಪ್ಪಳ ನಗರಕ್ಕೆ ಇನ್ನು ಕುಡಿಯುವ ನೀರಿನ ಸಮಸ್ಯೆ ಇಲ್ಲಕೊಪ್ಪಳ ನಗರಕ್ಕೆ ಇನ್ನು ಕುಡಿಯುವ ನೀರಿನ ಸಮಸ್ಯೆ ಇಲ್ಲ

ಕೆಎಸ್‌ಆರ್‌ಟಿಸಿ 5 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತಿದೆ. ರಾಜ್ಯದ 156 ಬಸ್ ನಿಲ್ದಾಣದಲ್ಲಿ ಘಟಕವನ್ನು ಸ್ಥಾಪನೆ ಮಾಡಲಿದೆ. 1 ರೂ.ಗೆ ಅರ್ಧ ಲೀಟರ್ ನೀರು, 2 ರೂ.ಗೆ 1 ಲೀಟರ್ ನೀರು, 5 ರೂ.ಗೆ 5 ಲೀಟರ್ ನೀರು ಸಿಗಲಿದೆ.

KSRTC to set up drinking water plant in bus stand

ರಾಜ್ಯದ ಎಲ್ಲಾ ನಿಲ್ದಾಣಗಳಲ್ಲಿಯೂ ಕುಡಿಯುವ ನೀರು ಲಭ್ಯವಾಗುವಂತೆ ಮಾಡಲಾಗುತ್ತದೆ. ಆದರೆ, ನೀರಿನ ಮೂಲ ಬೇರೆ-ಬೇರೆಯಾಗಿರುತ್ತದೆ. ಸ್ಥಳೀಯ ಸಂಸ್ಥೆಗಳು ಶುದ್ಧ ಕುಡಿಯುವ ನೀರಿನ ಪೂರೈಕೆ ಬಗ್ಗೆ ಇನ್ನೂ ಖಚಿತತೆ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿಅಂತರ್ಜಲ ಉಳಿಸಿ! ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಿದ್ದಾಪುರದ ವಿಜ್ಞಾನಿ

ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಬೆಳೆಸುವ ಬಡ ಜನರಿಗೆ ಸಹಾಯಕವಾಗಲಿ ಎಂದು ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಪ್ರಯಾಣಿಕರು 15, 18 ರೂ. ನೀಡಿ ನಿಲ್ದಾಣದ ಅಂಗಡಿಗಳಲ್ಲಿ ಮಿನಿರಲ್ ವಾಟರ್ ಖರೀದಿ ಮಾಡುವುದು ಇದರಿಂದ ತಪ್ಪಲಿದೆ.

ಸಾಮಾಜಿಕ ಜವಾಬ್ದಾರಿಯೊಂದಿಗೆ ಭರತ್ ಪೆಟ್ರೋಲಿಯಂ ಲಿ. 30 ಬಸ್ ನಿಲ್ದಾಣದಲ್ಲಿ ಘಟಕವನ್ನು ಆರಂಭಿಸಲಿದೆ. ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಘಟಕಗಳು ಈಗಾಗಲೇ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಆರಂಭವಾಗಲಿವೆ.

ಎಲ್ಲೆಲ್ಲಿ ಘಟಕ ನಿರ್ಮಾಣ? : ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ, ಮೇಲುಕೋಟೆ, ಕೆ.ಆರ್.ಪೇಟೆ, ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಭದ್ರಾವತಿ, ಹಿರಿಯೂರು, ಧರ್ಮಸ್ಥಳ, ಸುಬ್ರಮಣ್ಯ ಮತ್ತು ಕುಂದಾಪುರದ ನಿಲ್ದಾಣದಲ್ಲಿ ಮೊದಲು ಘಟಕಗಳು ನಿರ್ಮಾಣಗೊಳ್ಳಲಿವೆ.

English summary
Karnataka State Road Transport Corporation (KSRTC) will set up drinking water plant at bus stands. In the plant passengers can get half liter water for Rs 1. and 1 liter for Rs. 2 and 5 liter for Rs. 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X