ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ಕೆಎಸ್ಆರ್‌ಟಿಸಿಯ ವೋಲ್ವೊ ಬಸ್ ಸಂಚಾರ

|
Google Oneindia Kannada News

ಬೆಂಗಳೂರು, ನವೆಂಬರ್ 20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಬರಿಮಲೆಯ ಪಂಪಾಗೆ ಐರಾವತ ಬಸ್ ಸೇವೆಯನ್ನು ಆರಂಭಿಸಿದೆ. ಬೆಂಗಳೂರಿನಿಂದ ಶಬರಿಮಲೆಗೆ ಕಳೆದ ವರ್ಷ ಆರಂಭಿಸಿದ್ದ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ಮಂಡಲ ಮಕರ ವಿಳಕ್ಕು ವಾರ್ಷಿಕ ಪೂಜಾ ಕಾರ್ಯಗಳಿಗಾಗಿ ಶಬರಿಮಲೆ ದೇವಾಲಯದ ಬಾಗಿಲು ತೆರೆಯಲಾಗಿದೆ. ನೂರಾರು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ, ರಾಜ್ಯದ ಎಲ್ಲಾ ಡಿಪೋದಿಂದ ಶಬರಿಮಲೆಗೆ ಬಸ್ ಸೇವೆ ಆರಂಭವಾಗಿದೆ.

ಶಬರಿಮಲೆ ಪ್ರವೇಶಿಸದಂತೆ ಬಾಲಕಿಯನ್ನು ತಡೆದ ಪೊಲೀಸರು ಶಬರಿಮಲೆ ಪ್ರವೇಶಿಸದಂತೆ ಬಾಲಕಿಯನ್ನು ತಡೆದ ಪೊಲೀಸರು

ಶಬರಿಮಲೆಗೆ ತೆರಳುವ ಖಾಸಗಿ ವಾಹನಗಳು ನೀಲಕ್ಕಾಲ್ ತನಕ ಸಾಗಬಹುದಿತ್ತು. ಅಲ್ಲಿಂದ ಪಂಪಾಗೆ ತೆರಳಲು ಕೇರಳ ರಸ್ತೆ ಸಾರಿಗೆ ಬಸ್ ಅಥವ ವಿದ್ಯುತ್ ಚಾಲಿತ ಬಸ್ ಬಳಸಬೇಕಿತ್ತು. ಆಗ ಕೆಎಸ್ಆರ್‌ಟಿಸಿ ಪಂಪಾ ತನಕ ಬಸ್ ಸೇವೆ ನೀಡಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

KSRTC To Run High End Bus Service To Sabarimala

ಕಳೆದ ವರ್ಷದ ಪ್ರತಿಕ್ರಿಯೆ ನೋಡಿದ ಮೇಲೆ ಕೆಎಸ್ಆರ್‌ಟಿಸಿ ಈ ಬಾರಿ ರಾಜ್ಯದ ಎಲ್ಲಾ ಬಸ್ ಡಿಪೋದಿಂದ ಶಬರಿಮಲೆಗೆ ಬಸ್ ಓಡಿಸಲು ಆರಂಭಿಸಿದೆ. ವಾರದಲ್ಲಿ ನಾಲ್ಕು ದಿನ ಐರಾವತ ಬಸ್‌ಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತದೆ.

ಶಬರಿಮಲೆ ದೇವಸ್ಥಾನ ಓಪನ್, ಮಹಿಳೆಯರಿಗೆ ರಕ್ಷಣೆಯಿಲ್ಲಶಬರಿಮಲೆ ದೇವಸ್ಥಾನ ಓಪನ್, ಮಹಿಳೆಯರಿಗೆ ರಕ್ಷಣೆಯಿಲ್ಲ

ಕೆಎಸ್‌ಆರ್‌ಟಿಸಿ ಬಸ್‌ಗಳು ಸೇಲಂ ಮೂಲಕ ತೆರಳದೇ ಮೈಸೂರು ಮೂಲಕ ಸಂಚಾರ ನಡೆಸುತ್ತಿವೆ ಎಂದು ಕಳೆದ ವರ್ಷ ದೂರುಗಳು ಬಂದಿದ್ದವು. ಮೈಸೂರು ಕಡೆಯಿಂದ ಸಾಗುವ ಯಾತ್ರಿಗಳಿಗೆ ಅನುಕೂಲವಾಗಲು ಇಂತಹ ತೀರ್ಮಾನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಈ ವರ್ಷವೂ ಕೆಎಸ್ಆರ್‌ಟಿಸಿ ಪ್ರಾಯೋಗಿಕವಾಗಿ ಬಸ್ ಸಂಚಾರ ನಡೆಸಿ ಭಕ್ತಾದಿಗಳ ಪ್ರತಿಕ್ರಿಯೆ ಹೇಗಿರಲಿದೆ? ಎಂದು ಕಾದು ನೋಡಲಿದೆ. ಈ ವರ್ಷವೂ ಖಾಸಗಿ ವಾಹನಗಳನ್ನು ನೀಲಕ್ಕಾಲ್‌ನಲ್ಲಿ ನಿಲ್ಲಿಸಲಾಗುತ್ತದೆ ಎಂದು ಕೇರಳ ಸಾರಿಗೆ ಇಲಾಖೆ ಹೇಳಿದೆ. ಪ್ರವಾಹದ ಪರಿಣಾಮ ಪಂಪಾಗೆ ಸಾಗುವ ರಸ್ತೆಗೆ ಹಾನಿಯಾಗಿದೆ.

English summary
KSRTC high-end bus service to Pampa became popular last year. Now KSRTC plans to run special buses for the busy Mandala-Makaravilakku season from key depots across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X