• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕ್ರಾಂತಿ ಹಬ್ಬಕ್ಕಾಗಿ ಕೆಎಸ್ಸಾರ್ಟಿಸಿಯಿಂದ ವಿಶೇಷ ಬಸ್ ಸೌಲಭ್ಯ

|

ಬೆಂಗಳೂರು, ಜನವರಿ 10: ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳಿಗೆ ತೆರಳುವವರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಕೊಡುಗೆ ನೀಡಲು ಮುಂದಾಗಿದೆ.ಜತೆಗೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುತ್ತಿದೆ.

ಹಬ್ಬದ ವೇಳೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರ ಜತೆಗೆ ಟಿಕೆಟ್ ದರವು ದುಪ್ಪಟ್ಟಾಗುತ್ತದೆ. ಖಾಸಗಿ ಬಸ್ ಗಳ ಹಾವಳಿ ಕೂಡಾ ಅಧಿಕವಾಗುತ್ತಿದೆ. ಇದಕ್ಕೆ ನಿಯಂತ್ರಣ ಹಾಕಲು ಕೆ.ಎಸ್.ಆರ್.ಟಿ.ಸಿ. ಮುಂದಾಗಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವವರಿಗೆ ರಿಯಾಯಿತಿ ಘೋಷಿಸಿದೆ.

ಸರ್ವರಿಗೂ ಒಳಿತುಂಟು ಮಾಡಲಿ ಈ ಸಂಭ್ರಮದ ಸಂಕ್ರಾಂತಿ

ಹೋಗುವ ಹಾಗೂ ಬರುವ ಟಿಕೆಟ್ ಮುಂಗಡವಾಗಿ ಕಾಯ್ದಿರಿಸಿದರೆ ಶೇ.10 ರಷ್ಟು ರಿಯಾಯಿತಿ ಸಿಗಲಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗದ ಟಿಕೇಟು ಕಾಯ್ದಿರಿಸಿದರೆ ಶೇ 5ರಷ್ಟು ರಿಯಾಯಿತಿ ಸಿಗಲಿದೆ.

ಹೆಚ್ಚು ಬಸ್ ಸೌಲಭ್ಯ: ಸಂಕ್ರಾಂತಿ ಪ್ರಯುಕ್ತ ಜನವರಿ 11, 12 ರಂದು 500 ಕ್ಕೂ ಹೆಚ್ಚು ವಿಶೇಷ ಬಸ್ ಗಳು ರಾಜ್ಯದ ವಿವಿಧೆಡೆ ಸಂಚರಿಸಲಿವೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣದಿಂದ ವಿಶೇಷ ಬಸ್ ಗಳು ಹೊರಡಲಿದೆ.

ಭಾರತ ಬಂದ್ : 1 ದಿನದಲ್ಲಿ ಕೆಎಸ್‌ಆರ್‌ಟಿಸಿಗೆ ಆದ ನಷ್ಟ ಎಷ್ಟು?

ಶಿವಮೊಗ್ಗ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಚಿಕ್ಕಮಗಳೂರು, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ಮಧುರೈ, ಚೆನೈ, ಹೈದರಾಬಾದ್ ಮೊದಲಾದ ಊರುಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಭ್ರಮದ ಸುಗ್ಗಿ ಸಂಕ್ರಾಂತಿ: ಆಚರಣೆ ಹೇಗೆ?

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಶ್ರೀಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ನವರಂಗ್ ,ಮಲ್ಲೇಶ್ವರ 18ನೇ ಕ್ರಾಸ್, ಬನಶಂಕರಿ, ಜೀವನ್ ಭೀಮಾ ನಗರ, ಕೆಂಗೇರಿ ಉಪ ನಗರ, ಗಂಗಾನಗರ ಮುಂತಾದೆಡೆಗಳಲ್ಲಿ ವಿಶೇಷ ಬಸ್, ಹೆಚ್ಚುವರಿ ಬಸ್ ಸೌಲಭ್ಯ ಸಿಗಲಿದೆ.

English summary
Karnataka State Road Transport Corporation (KSRTC) will run 250 to 300 additional buses on January 12, 13 and 15, to clear extra rush during the Sankranthi festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X