ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್, ಬೆಂಗಳೂರಿನಿಂದ ಈ ನಗರಗಳಿಗೆ ಸಂಚಾರ

|
Google Oneindia Kannada News

ಬೆಂಗಳೂರು, ಜುಲೈ 10; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ಸಿದ್ಧವಾಗಿದೆ. ಡಿಸೆಂಬರ್‌ ವೇಳೆಗೆ ವಿದ್ಯುತ್ ಚಾಲಿತ ಬಸ್‌ಗಳು ಬೆಂಗಳೂರಿನಿಂದ ಸಂಚಾರ ನಡೆಸಲಿವೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ನಡೆಸುತ್ತಿದೆ. ಈಗ ಕೆಎಸ್ಆರ್‌ಟಿಸಿ ಬೆಂಗಳೂರಿನಿಂದ ವಿವಿಧ ನಗರಕ್ಕೆ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲು ಯೋಜನೆ ಸಿದ್ಧಪಡಿಸಿದೆ.

ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?ಕರ್ನಾಟಕಕ್ಕೆ ಬರುತ್ತಾ ಓಲಾ ಎಲೆಕ್ಟ್ರಿಕ್ ಕಾರು ತಯಾರಿಕಾ ಘಟಕ?

50 ಎಲೆಕ್ಟ್ರಿಕ್ ಬಸ್‌ಗಳನ್ನು ಹೈದರಾಬಾದ್ ಮೂಲದ ಕಂಪನಿ ಕೆಎಸ್ಆರ್‌ಟಿಸಿಗೆ ಪೂರೈಕೆ ಮಾಡಲಿದೆ. ಡಿಸೆಂಬರ್ ವೇಳೆಗೆ 25 ಎಲೆಕ್ಟ್ರಿಕ್ ಬಸ್‌ ಕೆಎಸ್ಆರ್‌ಟಿಸಿಗೆ ಸಿಗುವ ನಿರೀಕ್ಷೆ ಇದೆ. ಉಳಿದ ಬಸ್‌ಗಳು 2023ರ ಮಾರ್ಚ್‌ಗೆ ಬಂದು ಸೇರಲಿವೆ.

 ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ ಇಂಧನ ಕೊರತೆ: ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ- ಅಧಿಕಾರಿಗಳ ಸ್ಪಷ್ಟನೆ

ಬೆಂಗಳೂರಿನಿಂದ ಯಾವ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಬೇಕು? ಎಂದು ಕೆಎಸ್ಆರ್‌ಟಿಸಿ ಈಗಾಗಲೇ ನೀಲನಕ್ಷೆ ತಯಾರು ಮಾಡಿದೆ. ಮೊದಲು ಬೆಂಗಳೂರು-ಮೈಸೂರು ನಡುವೆ ಬಸ್‌ಗಳು ಸಂಚಾರ ನಡೆಸಲಿವೆ. ಈ ವರ್ಷದ ಡಿಸೆಂಬರ್‌ನಲ್ಲಿಯೇ ಉಭಯ ನಗರಗಳ ನಡುವೆ ಬಸ್ ಸಂಚಾರ ನಡೆಸುವ ನಿರೀಕ್ಷೆ ಇದೆ.

ಸದ್ಯದಲ್ಲೇ ಅಂಗವಿಕಲರಿಗಾಗಿ ಬಿಎಂಟಿಸಿಯಿಂದ ವಿಶೇಷ ಬಸ್ ಸೇವೆ ಆರಂಭ ಸದ್ಯದಲ್ಲೇ ಅಂಗವಿಕಲರಿಗಾಗಿ ಬಿಎಂಟಿಸಿಯಿಂದ ವಿಶೇಷ ಬಸ್ ಸೇವೆ ಆರಂಭ

ಯಾವ-ಯಾವ ನಗರಗಳಿಗೆ ಸಂಚಾರ

ಯಾವ-ಯಾವ ನಗರಗಳಿಗೆ ಸಂಚಾರ

ಕೆಎಸ್ಆರ್‌ಟಿಸಿ ಬೆಂಗಳೂರಿನಿಂದ ಯಾವ-ಯಾವ ನಗರಗಳಿಗೆ ಬಸ್‌ ಸಂಚಾರ ನಡೆಸಬಹುದು ಎಂದು ಯೋಜನೆ ರೂಪಿಸಿದೆ. ಬೆಂಗಳೂರು-ಮೈಸೂರು, ಬೆಂಗಳೂರು-ವಿರಾಜಪೇಟೆ, ಬೆಂಗಳೂರು-ಮಡಿಕೇರಿ, ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಕೋಲಾರ, ಬೆಂಗಳೂರು-ಚಿಕ್ಕಮಗಳೂರು ನಡುವೆ ಬಸ್ ಓಡಿಸಲು ತೀರ್ಮಾನಿಸಿದೆ. ಒಮ್ಮೆ ಚಾರ್ಜ್ ಮಾಡಿದ ಬಸ್ ಎಷ್ಟು ಕಿ. ಮೀ. ದೂರ ಓಡಲಿದೆ? ಎಂಬ ಅಂದಾಜಿನ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಎಷ್ಟು ಕಿ. ಮೀ. ಓಡಲಿದೆ ಬಸ್?

ಎಷ್ಟು ಕಿ. ಮೀ. ಓಡಲಿದೆ ಬಸ್?

ಹೈದರಾಬಾದ್ ಮೂಲಕ ಕಂಪನಿ ತಯಾರು ಮಾಡುವ ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದವಿದ್ದು ಸಂಪೂರ್ಣ ಹವಾನಿಯಂತ್ರಿತವಾಗಿದೆ. ಈ ಬಸ್‌ಗಳಲ್ಲಿ 43 ಸೀಟುಗಳು ಇರಲಿವೆ. ಒಮ್ಮೆ ಚಾರ್ಜ್ ಮಾಡಿದ ಬಳಿಕ ಬಸ್‌ಗಳು 250 ರಿಂದ 300 ಕಿ. ಮೀ. ತನಕ ಸಂಚಾರ ನಡೆಸಲಿವೆ. ಕಂಪನಿಯೇ ಬಸ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ.

ಜುಲೈ ಅಂತ್ಯ ಅಥವ ಆಗಸ್ಟ್‌ನಲ್ಲಿ ಪ್ರಾಯೋಗಿಕ ಸಂಚಾರವನ್ನು ನಡೆಸಿ ಬಳಿಕ ಬಸ್‌ಗಳನ್ನು ಓಡಿಸುವ ಮಾರ್ಗವನ್ನು ಮತ್ತೊಮ್ಮೆ ಅಂತಿಮಗೊಳಿಸಲು ಕೆಎಸ್ಆರ್‌ಟಿಸಿ ನಿರ್ಧರಿಸಿದೆ.

ಚಾರ್ಜಿಂಗ್ ಸ್ಟೇಷನ್ ಪ್ರಾರಂಭ

ಚಾರ್ಜಿಂಗ್ ಸ್ಟೇಷನ್ ಪ್ರಾರಂಭ

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಪೂರೈಕೆ ಟೆಂಡರ್ ಕರೆದಾಗಲೇ ಕೆಲವು ಅಂಶಗಳನ್ನು ಸ್ಪಷ್ಟಪಡಿಸಿದೆ. ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಡ್ರೈವರ್‌ ಕಂಪನಿ ಕಡೆಯಿಂದಲೇ ಬರುತ್ತಾರೆ. ಕಂಡಕ್ಟರ್ ಮಾತ್ರ ಕೆಎಸ್ಆರ್‌ಟಿಸಿ ಒದಗಿಸಲಿದೆ. ಅಲ್ಲದೇ ಬಸ್ ನಿಲ್ದಾಣಗಳಲ್ಲಿ ಚಾರ್ಜರ್‌ಗಳನ್ನು ಕಂಪನಿಯೇ ಸ್ಥಾಪನೆ ಮಾಡಲಿದೆ.

2017ರಲ್ಲಿಯೇ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವ ಕುರಿತು ಚರ್ಚೆ ಆರಂಭಿಸಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಈ ಪ್ರಸ್ತಾವನೆ ವಿಳಂಬವಾಯಿತು. ಆದರೆ ಈಗ ಬಿಎಂಟಿಸಿ ಬೆಂಗಳೂರು ನಗರಲ್ಲಿ ಎಲೆಕ್ಟ್ರಿಕ್ ಬಸ್ ಓಡಿಸುತ್ತಿದೆ.

ಡೀಸೆಲ್ ದರದ ಹೊರೆ ಕಡಿಮೆ

ಡೀಸೆಲ್ ದರದ ಹೊರೆ ಕಡಿಮೆ

ಎಲೆಕ್ಟ್ರಿಕ್ ಬಸ್ ಸಂಚಾರದಿಂದ ಕೆಎಸ್ಆರ್‌ಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಸಗಟು ಡೀಸೆಲ್ ದರ ಲೀಟರ್‌ಗೆ 125.4 ರೂ. ಆಗಿದ್ದು, ಸಂಸ್ಥೆಗೆ ಆರ್ಥಿಕವಾಗಿ ಭಾರೀ ಹೊರೆಯಾಗುತ್ತಿದೆ. ಒಂದು ಚಾರ್ಜ್‌ಗೆ 250 ಕಿ. ಮೀ. ಓಡುವ ಎಲೆಕ್ಟ್ರಿಕ್ ಬಸ್ ಸಂಸ್ಥೆಗೆ ಅನುಕೂಲ ಮಾಡಿಕೊಡಲಿದೆ. ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಜಿಲ್ಲೆಯ ಇತರ ನಿಲ್ದಾಣದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ ಮಾಡಲಾಗುತ್ತದೆ.

ಪ್ರಾಯೋಗಿಕ ಬಸ್ ಜೂನ್ ತಿಂಗಳಿನಲ್ಲಿಯೇ ಕೆಎಸ್ಆರ್‌ಟಿಸಿಗೆ ಬರಬೇಕಿತ್ತು. ಆದರೆ ಕಂಪನಿ ಸಮಯ ಕೇಳಿದ್ದರಿಂದ ತಡವಾಯಿತು. ಕೆಲಸಗಳನ್ನು ಚುರುಕುಗೊಳಿಸುವಂತೆ ಸಂಸ್ಥೆಗೆ ಈಗಾಗಲೇ ಕೆಎಸ್ಆರ್‌ಟಿಸಿ ಸೂಚನೆ ನೀಡಿದೆ.

Recommended Video

Sri Lanka ಜನತೆ ರಾಷ್ಟ್ರಪತಿಗಳ ಮನೆಗೆ ನುಗ್ಗಿದ್ದು ಹೀಗೆ | *World | OneIndia Kannada

English summary
Karnataka State Road Transport Corporation (ksrtc) will run electric buses from December. Hyderabad based company will handover 25 bus to KSRTC in December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X