ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 25ರಿಂದ 8 ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಎಸಿ ಬಸ್ ಸಂಚಾರ

|
Google Oneindia Kannada News

ಬೆಂಗಳೂರು, ಜೂನ್ 24 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹವಾನಿಯಂತ್ರಿತ ಬಸ್‌ಗಳ ಸಂಚಾರ ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಎಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.

ಕೆಎಸ್ಆರ್‌ಟಿಸಿ ಮೊದಲ ಹಂತದಲ್ಲಿ ಜೂನ್ 25ರ ಶುಕ್ರವಾರದಿಂದ ಒಟ್ಟು 8 ಮಾರ್ಗದಲ್ಲಿ ಎಸಿ ಬಸ್‌ಗಳ ಸಂಚಾರವನ್ನು ಆರಂಭಿಸುತ್ತಿದೆ. ಅಂತರರಾಜ್ಯಗಳಿಗೆ ಬಸ್‌ಗಳು ಸಂಚಾರ ನಡೆಸುವುದಿಲ್ಲ ಕರ್ನಾಟಕದೊಳಗೆ ಮಾತ್ರ ಸಂಚರಿಸಲಿವೆ.

ದಾವಣಗೆರೆಯಿಂದ ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ ದಾವಣಗೆರೆಯಿಂದ ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ

ಹವಾನಿಯಂತ್ರಿತ ಬಸ್‌ಗಳ ಸಂಚಾರಕ್ಕೆ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರಂತೆ ತಾಪಮಾನವನ್ನು 24 ರಿಂದ 25 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಿರ್ವಹಣೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಂತರರಾಜ್ಯ ಬಸ್ ಸೇವೆ; ಕೆಎಸ್ಆರ್‌ಟಿಸಿ ಮಹತ್ವದ ಪ್ರಕಟಣೆ ಅಂತರರಾಜ್ಯ ಬಸ್ ಸೇವೆ; ಕೆಎಸ್ಆರ್‌ಟಿಸಿ ಮಹತ್ವದ ಪ್ರಕಟಣೆ

ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರಾತ್ರಿ ಬಸ್‌ಗಳಲ್ಲಿ ಹೊದಿಕೆಗಳನ್ನು ನೀಡಲಾಗುವುದಿಲ್ಲ. ಆದ್ದರಿಂದ ಪ್ರಯಾಣಿಕರು ತಮ್ಮ ಹೊದಿಕೆಗಳನ್ನು ತಾವೇ ತರಬೇಕು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಎಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ಎಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ಬಸ್ ಸಂಚಾರದ ಮಾರ್ಗಗಳು

ಬಸ್ ಸಂಚಾರದ ಮಾರ್ಗಗಳು

* ಬೆಂಗಳೂರು- ಮೈಸೂರು
* ಬೆಂಗಳೂರು - ಮಂಗಳೂರು
* ಬೆಂಗಳೂರು - ಕುಂದಾಪುರ
* ಬೆಂಗಳೂರು - ಚಿಕ್ಕಮಗಳೂರು

ಎಸಿ ಬಸ್‌ಗಳ ಸಂಚಾರ

ಎಸಿ ಬಸ್‌ಗಳ ಸಂಚಾರ

* ಬೆಂಗಳೂರು - ಮಡಿಕೇರಿ
* ಬೆಂಗಳೂರು - ದಾವಣಗೆರೆ
* ಬೆಂಗಳೂರು - ಶಿವಮೊಗ್ಗ
* ಬೆಂಗಳೂರು - ವಿರಾಜಪೇಟೆ ನಡುವೆ ಎಸಿ ಬಸ್‌ಗಳು ಸಂಚಾರ ನಡೆಸಲಿವೆ.

ಮುಂಗಡ ಟಿಕೆಟ್ ಕಾಯ್ದಿರಿಸಿ

ಮುಂಗಡ ಟಿಕೆಟ್ ಕಾಯ್ದಿರಿಸಿ

ಕೆಎಸ್ಆರ್‌ಟಿಸಿ ಎಸಿ ಬಸ್‌ಗಳಲ್ಲಿ ಸಂಚಾರ ನಡೆಸುವ ಜನರು ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶವನ್ನು ನೀಡಲಾಗಿದೆ. ಕೆಎಸ್ಆರ್‌ಟಿಸಿ ವೆಬ್ ಸೈಟ್‌ಗೆ ಭೇಟಿ ನೀಡುವ ಮೂಲಕ ಜನರು ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಎಸಿ ಬಸ್ ಸಂಚಾರ ಸ್ಥಗಿತ

ಎಸಿ ಬಸ್ ಸಂಚಾರ ಸ್ಥಗಿತ

ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಕೆಎಸ್ಆರ್‌ಟಿಸಿ ಎಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿತ್ತು. ಮೇ 19ರಿಂದ ಬಸ್‌ಗಳ ಸಂಚಾರ ಆರಂಭವಾದರೂ ಸಾಮಾನ್ಯ ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿದ್ದವು. ಅಂತರರಾಜ್ಯಗಳಿಗೆ ಎಸಿ ಬಸ್ ಸಂಚಾರ ಇನ್ನೂ ಆರಂಭವಾಗಿಲ್ಲ.

English summary
In a press release Karnataka State Road Transport Corporation (KSRTC) said that AC bus service will be commence from June 25, 2020. In a 1st phase bus will run in 8 routes with in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X